Earthquake: ಮಳೆಗಾಲದಲ್ಲಿ ಕೊಡಗಿಗೆ ತಪ್ಪದ ಕಂಟಕ; ಜನರಲ್ಲಿ ಇದೀಗ ಭೂಕಂಪದ ಆತಂಕ

ಸೆಕೆಂಡ್ ಗಳಷ್ಟು ಸಮಯ ಕಂಪನದ ಅನುಭವವಾಗಿದೆ.  ಕೊಡಗು‌ ಜಿಲ್ಲೆ‌ ಭೂಕಂಪನದ ವಲಯ ಮೂರರಲ್ಲಿ ಬರುತ್ತದೆ.  ಹೀಗಾಗಿ ಭೂಕಂಪನದ‌ ಅನುಭವ ಸಂಪಾಜೆ, ಪೆರಾಜೆ ಸ್ಥಳಗಳಲ್ಲಿ ಆಗಿರುವ ಸಾಧ್ಯತೆ ‌ಇದೆ.

ಕೊಡಗಿನ ಜನರಲ್ಲಿ ಆತಂಕ

ಕೊಡಗಿನ ಜನರಲ್ಲಿ ಆತಂಕ

 • Share this:
  ಕೊಡಗು (ಜೂ 25) : ಎರಡು ದಿನಗಳ ಹಿಂದೆಯಷ್ಟೇ ಕಂಪಿಸಿದ್ದ ಭೂಮಿ ಕೊಡಗಿನಲ್ಲಿ ಮತ್ತೆ ಶನಿವಾರ ಭೂಕಂಪನವಾಗಿದೆ. ಮಡಿಕೇರಿ (Madikeri) ತಾಲ್ಲೂಕಿನ ಕರಿಕೆ, ಚೆಂಬು, ಗೂನಡ್ಕ ಮತ್ತು ಸಂಪಾಜೆಗಳಲ್ಲಿ ಬೆಳಿಗ್ಗೆ 9 ಗಂಟೆ 10 ನಿಮಿಷಕ್ಕೆ ಭೂಕಂಪವಾಗಿದೆ. ಭೂಕಂಪನದ (Earthquake) ತೀವ್ರತೆಗೆ ಸಂಪಾಜೆ ಸಮೀಪದ ಗೂನಡ್ಕ ಗ್ರಾಮದ ಅಬುಶಾಲಿ ಎಂಬುವರ ಮನೆಯ ಗೋಡೆಗಳು ಬಿರುಕುಬಿಟ್ಟಿವೆ.  ಮಡಿಕೇರಿ ತಾಲ್ಲೂಕಿನ ಕರಿಕೆ ಗ್ರಾಮ ಪಟ್ಟಿಘಾಟ್ ಅರಣ್ಯ ಪ್ರದೇಶದ ಭೂಮಿಯಲ್ಲಿ ಭಾರಿ ಶಬ್ಧದೊಂದಿಗೆ ಭೂಕಂಪನವಾಗಿದೆ. ಪರಿಣಾಮ ತೋಟದಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮದ ಸುಧೀರ್ ಎಂಬುವರು ಹೆದರಿ ಹೋಗಿದ್ದಾರೆ. ಅದಾದ ಎರಡೇ ನಿಮಿಷದಲ್ಲಿ ಗ್ರಾಮದ ಎಲ್ಲೆಡೆಯಿಂದ ಜನರು ಕರೆಮಾಡಿ ಭೂಮಿ ಕಂಪಿಸಿದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

  ಬೆದರಿದ ಜಾನುವಾರುಗಳು, ನೆಲಕ್ಕುರುಳಿದ ಪಾತ್ರೆ

  ಗ್ರಾಮದಲ್ಲಿ ಸಾಕು ಪ್ರಾಣಿಗಳಾದ ಹಂದಿ, ನಾಯಿಗಳು ಹೆದರಿ ಅತ್ತಿತ್ತ ಓಡಿವೆ. ಮನೆಯಲ್ಲಿ ಪಾತ್ರೆಗಳೆಲ್ಲಾ ನೆಲಕ್ಕುರುಳಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಚೆಂಬು ಗ್ರಾಮದಲ್ಲಿ ಕೆಲವರ ಮನೆಯಲ್ಲಿ ಸ್ಟ್ಯಾಂಡ್ ಗಳಲ್ಲಿ ಇರಿಸಿದ್ದ ಪಾತ್ರೆಗಳು ನೆಲಕ್ಕೆ ಉರುಳಿವೆ. ಕೊಡಗು ಹಾಗೂ ದಕ್ಷಿಣ ಕನ್ನಡ  ಜಿಲ್ಲೆಗಳ ಗಡಿ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಸುಮಾರು 9 ಗಂಟೆ 10 ನಿಮಿಷಕ್ಕೆ ಭೂಕಂಪದ ಅನುಭವವಾಗಿರುವ ಬಗ್ಗೆ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ದೂರು ಬಂದಿದೆ.

  ರಿಕ್ಟರ್ ಮಾಪಕ 2.3 ರಷ್ಟು ಭೂಕಂಪನ

  ಇದನ್ನು ಪರಿಶೀಲಿಸಿದಾಗ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ‌ ಕೇಂದ್ರ, ಬೆಂಗಳೂರು ಇವರ ಮಾಹಿತಿಯ ಪ್ರಕಾರ ಮಡಿಕೇರಿ ತಾಲ್ಲೂಕಿನ ಕರಿಕೆ ಗ್ರಾಮದಿಂದ 4.7  ಕಿಮೀ ವಾಯುವ್ಯ ದಿಕ್ಕಿನಲ್ಲಿ ಭೂಮಿಯ 10 ಕಿ.ಮೀ. ಆಳದಲ್ಲಿ ರಿಕ್ಟರ್ ಮಾಪಕ 2.3 ರಷ್ಟು ಭೂಕಂಪನವಾಗಿದೆ. ಹಾಗೆಯೇ‌ ಮಾನ್ಯ ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾಗಿರುವ ರಾಷ್ಟ್ರೀಯ ಭೂಕಂಪನ ಅಧ್ಯಯನ ಕೇಂದ್ರದ ಪ್ರಕಾರ ಕೊಡಗು ಜಿಲ್ಲೆಗೆ ಹೊಂದಿಕೊಂಡ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ ರಿಕ್ಟರ್ ಮಾಪಕ 2.8 ರಷ್ಟು ಭೂಕಂಪನ ಆಗಿರುವುದಾಗಿ ವರದಿಯಾಗಿದೆ.

  ಇದನ್ನೂ ಓದಿ: Bengaluru University: ಮೊದಲು ಡಿಸ್ಟಿಂಕ್ಷನ್​ನಲ್ಲಿ ಪಾಸ್ ಅಂದ್ರು ಆಮೇಲೆ ನೀವೆಲ್ಲಾ ಫೇಲ್ ಅಂದ್ರು; ಬೆಂಗಳೂರು ವಿವಿ ಎಡವಟ್ಟಿಗೆ ವಿದ್ಯಾರ್ಥಿಗಳ ಸಿಟ್ಟು

  ಯಾರಿಗೂ ಜೀವ ಹಾನಿಯಾದ ಬಗ್ಗೆ ವರದಿಯಾಗಿಲ್ಲ

  ಈ ಭೂಕಂಪನದಲ್ಲಿ ಯಾರಿಗೂ ಜೀವ ಹಾನಿಯಾದ ಬಗ್ಗೆ ವರದಿಯಾಗಿಲ್ಲ. ಆದರೆ ಹಲವು ಸೆಕೆಂಡ್ ಗಳಷ್ಟು ಸಮಯ ಕಂಪನದ ಅನುಭವವಾಗಿದೆ.  ಕೊಡಗು‌ ಜಿಲ್ಲೆ‌ ಭೂಕಂಪನದ ವಲಯ ಮೂರರಲ್ಲಿ ಬರುತ್ತದೆ.  ಹೀಗಾಗಿ ಭೂಕಂಪನದ‌ ಅನುಭವ ಸಂಪಾಜೆ, ಪೆರಾಜೆ ಸ್ಥಳಗಳಲ್ಲಿ ಆಗಿರುವ ಸಾಧ್ಯತೆ ‌ಇದೆ. ಆದರೆ ಈ ಕಂಪನದಿಂದ ಭಯ ಪಡುವ ಅಗತ್ಯವಿಲ್ಲ. ಹೆಚ್ಚೆಂದರೆ ಮನೆಯಲ್ಲಿರುವ‌ ವಸ್ತು ಅಲುಗಾಡಬಹುದು.  ಜನತೆ ಗಾಬರಿ ಆಗುವ‌ ಅವಶ್ಯಕತೆಯಿಲ್ಲ ಎಂದು ಹೇಳಿದೆ.

  ಕರಿಕೆ, ಚೆಂಬು, ಸಂಪಾಜೆಯಲ್ಲಿ ಕಂಪಿಸಿದ ಭೂಮಿ

  ಆದರೆ ಎರಡು ದಿನಗಳ ಹಿಂದೆ ಮಡಿಕೇರಿ ತಾಲ್ಲೂಕಿನ ದೇವಸ್ತೂರು ಸೋಮವಾರಪೇಟೆ ತಾಲ್ಲೂಕಿನ ನೇಗಳ್ಳೆ, ಅಮ್ಮಳ್ಳಿ ಗ್ರಾಮ ಮತ್ತು ಸೋಮವಾರಪೇಟೆ ಪಟ್ಟಣದ ರೇಂಜರ್ ಬ್ಲಾಕ್ ಗಳಲ್ಲಿ ಭೂಕಂಪನವಾಗಿತ್ತು. ಇದೀಗ ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಕಂಪನವಾಗಿದ್ದು, ಮಡಿಕೇರಿ ತಾಲ್ಲೂಕಿನ ಕರಿಕೆ, ಚೆಂಬು, ಸಂಪಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೂನಡ್ಕ ಗ್ರಾಮಗಳಲ್ಲಿ ಭೂಕಂಪವಾಗಿರುವುದು ಆತಂಕ ಸೃಷ್ಟಿಸಿದೆ.

  ಇದನ್ನೂ ಓದಿ: Bengaluru: ಬೆಂಗಳೂರಿನ ಟ್ರಾಫಿಕ್ ಕಂಟ್ರೋಲ್ ಮೇಲುಸ್ತುವಾರಿ ಡಿಸಿಪಿಗಳ ಹೆಗಲಿಗೆ: ಸಿಎಂ ಸೂಚನೆ

  ಕೊಡಗಿನ ಜನರಲ್ಲಿ ಮತ್ತೆ ಆತಂಕ

  2018 ರಲ್ಲಿ ಭೂಕುಸಿತ ಮತ್ತು ಪ್ರವಾಹ ಎದುರಾಗುವುದಕ್ಕೂ ಮುಂಚೆ ಕೊಡಗಿನಲ್ಲಿ ಭೂಕಂಪವಾಗಿತ್ತು. ಹೀಗಾಗಿ ಈ ಭಾರಿಯೂ ಮಳೆಗಾಲದಲ್ಲಿ ಮತ್ತೆ ಮತ್ತೆ ಭೂ ಕಂಪನವಾಗುತ್ತಿರುವುದು ಜಿಲ್ಲೆಯಲ್ಲಿ ಈ ಭಾರಿಯೂ ಅನಾವುತ ಕಾದಿದೆಯಾ ಎನ್ನುವ ಆತಂಕ ಉಂಟುಮಾಡಿದೆ.

  ವರದಿ: ರವಿ ಸಾನೆ
  Published by:Pavana HS
  First published: