ಶಿವಮೊಗ್ಗ ಜಿಲ್ಲೆಯಲ್ಲಿ ನಡುಗಿದ ಭೂಮಿ, ಬೆಚ್ಚಿಬಿದ್ದ ಜನರು.!

ಮಧ್ಯರಾತ್ರಿ 1 ಗಂಟೆ 40 ನಿಮಿಷದ ಸಮಯದಲ್ಲಿ ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದೆ ಎನ್ನಲಾಗಿದೆ. ಇದರ ಪರಿಣಾಮವಾಗಿ ಭಯಭೀತರಾಗಿ ಜನರು ಮನೆಯಿಂದ ಹೊರ ಬಂದಿದ್ದರು. ಮನೆಯ ಪಾತ್ರೆಗಳು ನೆಲಕ್ಕೆ ಉರುಳಿವೆ ಎನ್ನಲಾಗಿದೆ

G Hareeshkumar | news18
Updated:February 3, 2019, 1:08 PM IST
ಶಿವಮೊಗ್ಗ ಜಿಲ್ಲೆಯಲ್ಲಿ ನಡುಗಿದ ಭೂಮಿ, ಬೆಚ್ಚಿಬಿದ್ದ ಜನರು.!
ಸಾಂದರ್ಭಿಕ ಚಿತ್ರ
  • News18
  • Last Updated: February 3, 2019, 1:08 PM IST
  • Share this:
ಶಿವಮೊಗ್ಗ ( ಫೆ.03) : ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ತಾಲೂಕಿನ ವರಾಹಿ ಜಲ ವಿದ್ಯುತ್ ಯೋಜನಾ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿದೆ. ವರಾಹಿ ಜಲವಿದ್ಯುತ್ ಯೋಜನಾ ಪ್ರದೇಶದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬರೋಬ್ಬರಿ 30 ಸೆಕೆಂಡ್ ಗಳ ಕಾಲ ಭೂಮಿ ಕಂಪಿಸಿದೆ.

ಮಧ್ಯರಾತ್ರಿ 1 ಗಂಟೆ 40 ನಿಮಿಷದ ಸಮಯದಲ್ಲಿ ಭಾರಿ ಶಬ್ದದೊಂದಿಗೆ ಭೂಮಿ ಕಂಪಿಸಿದೆ ಎನ್ನಲಾಗಿದೆ. ಇದರ ಪರಿಣಾಮವಾಗಿ ಭಯಭೀತರಾಗಿ ಜನರು ಮನೆಯಿಂದ ಹೊರ ಬಂದಿದ್ದರು. ಮನೆಯ ಪಾತ್ರೆಗಳು ನೆಲಕ್ಕೆ ಉರುಳಿವೆ ಎನ್ನಲಾಗಿದೆ.

ಇದನ್ನೂ ಓದಿ :  ಚಿಕ್ಕಮಗಳೂರಿನಲ್ಲಿ ಮಂಗನ ಕಾಯಿಲೆ ಭೀತಿ! ಎಚ್ಚರದಿಂದ ಇರುವಂತೆ ಜನರಿಗೆ ಜಿಲ್ಲಾಡಳಿತ ಸೂಚನೆ

ತೀರ್ಥಹಳ್ಳಿಯ ಮೇಗರವಳ್ಳಿ, ಹನಸ, ಕರುಣಾಪುರ, ಗಾಡ್ರಗದ್ದೆ ಶುಂಠಿ ಹಕ್ಲು, ಹೊಸನಗರದ ಯಡೂರು ಸುತ್ತಮುತ್ತ ಭೂಮಿ ಕಂಪಸಿದ್ದು ಯಾವುದೇ ಅನಾಹುತ ಆಗಿರುವ ಬಗ್ಗೆ ವರದಿಯಾಗಿಲ್ಲ.

ಇನ್ನೂ ಈ ಭೂಕಂಪನದ ಬಗ್ಗೆ  ಶಿವಮೊಗ್ಗ ಜಿಲ್ಲಾಧಿಕಾರಿ ಕೆ ಎ ದಯಾನಂದ ಅಧಿಕೃತ ಮಾಹಿತಿಯನ್ನು ನೀಡಿದ್ದು, ತೀರ್ಥಹಳ್ಳಿ ತಾಲೂಕಿನ ವಿಠಲನಗರ ಭೂಕಂಪನದ ಕೇಂದ್ರ ದಲ್ಲಿ ರಿಕ್ಟರ್ ಮಾಪನದಲ್ಲಿ 2.2 ರಷ್ಟು ತೀವ್ರತೆ ದಾಖಲಾಗಿದೆ  ಎಂದು ತಿಳಿಸಿದ್ದಾರೆ.  

 
First published:February 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ