HD Revanna ಆರೋಪ ಬೆನ್ನಲ್ಲೇ ಸ್ವಯಂ ವರ್ಗಾವಣೆ ಕೋರಿದ DySP

ಡಿವೈಎಸ್​ಪಿ ಉದಯ್ ಭಾಸ್ಕರ್ ಮತ್ತು ಹೆಚ್ ಡಿ ರೇವಣ್ಣ

ಡಿವೈಎಸ್​ಪಿ ಉದಯ್ ಭಾಸ್ಕರ್ ಮತ್ತು ಹೆಚ್ ಡಿ ರೇವಣ್ಣ

ನನ್ನ ಮೇಲಾಧಿಕಾರಿಗಳಿಗೆ ಮಾನಸಿಕ ಒತ್ತಡಗಳನ್ನು ನೀಡುತ್ತಿದ್ದಾರೆ. ರಾಜಕಾರಣಿಗಳು ಈ ಚುನಾವಣಾ ಸಂದರ್ಭದಲ್ಲಿ ನಾನು ಸುಗಮವಾಗಿ ಕೆಲಸ ಮಾಡಲು ಅಡ್ಡಿಪಡಿಸಿ ಗೊಂದಲ ಸೃಷ್ಟಿಪಡಿಸುವುದು ಖಚಿತ.

  • Share this:

ಹಾಸನ: ಮಾಜಿ ಸಚಿವ ಹೆಚ್.ಡಿ.ರೇವಣ್ಣ (Former Minister HD Revanna) ಆರೋಪ ಬೆನ್ನಲ್ಲೇ ಡಿವೈಎಸ್​ಪಿ ಉದಯ್ ಭಾಸ್ಕರ್ (DySP Uday Bhaskar) ಸ್ವಯಂ ವರ್ಗಾವಣೆ ಕೋರಿ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಹಾಸನ ಡಿವೈಎಸ್​ಪಿ ಉದಯ್ ಭಾಸ್ಕರ್ ನಿಷ್ಪಕ್ಷಪಾತವಾಗಿ ಕೆಲಸ (Duty) ಮಾಡುತ್ತಿಲ್ಲ. ಹಾಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ರೇವಣ್ಣ ಮೇಲಾಧಿಕಾರಿಗಳಿಗೆ ಒತ್ತಾಯಿಸಿದ್ದರು. ಇದೀಗ ತಮ್ಮ ವಿರುದ್ಧ ಆರೋಪ (Allegation) ಕೇಳಿ ಬಂದ ಹಿನ್ನೆಲೆ ಮನನೊಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪತ್ರ ಬರೆದು ಸ್ವಯಂ ವರ್ಗಾವಣೆ (Self Transfer) ಕೇಳಿದ್ದಾರೆ.


ನಾನು ನಿಷ್ಪಕ್ಷಪಾತ, ನೇರ ನುಡಿಯ ವ್ಯಕ್ತಿತ್ವವುಳ್ಳವನು. ರಾಜಕಾರಣಿಗಳು ನನ್ನಿಂದ ಕಾನೂನು ಬಾಹಿರ ಕ್ರಮ ಆಪೇಕ್ಷಿಸುತ್ತಿದ್ದಾರೆ. ಅವರ ಒತ್ತಾಯಗಳಿಗೆ ನಾನು ಮಣಿಯದ ಕಾರಣ ನನ್ನ ವಿರುದ್ದ ಅನಗತ್ಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಉದಯ್ ಭಾಸ್ಕರ್ ಹೇಳಿದ್ದಾರೆ.


ಗೊಂದಲ ಸೃಷ್ಟಿಪಡಿಸುವುದು ಖಚಿತ


ನನ್ನ ಮೇಲಾಧಿಕಾರಿಗಳಿಗೆ ಮಾನಸಿಕ ಒತ್ತಡಗಳನ್ನು ನೀಡುತ್ತಿದ್ದಾರೆ. ರಾಜಕಾರಣಿಗಳು ಈ ಚುನಾವಣಾ ಸಂದರ್ಭದಲ್ಲಿ ನಾನು ಸುಗಮವಾಗಿ ಕೆಲಸ ಮಾಡಲು ಅಡ್ಡಿಪಡಿಸಿ ಗೊಂದಲ ಸೃಷ್ಟಿಪಡಿಸುವುದು ಖಚಿತ.


ಇದರಿಂದ ಮೇಲಾಧಿಕಾರಿಗಳಿಗೂ ಇರುಸುಮುರುಸು ಉಂಟಾಗುತ್ತದೆ. ಹೀಗಾಗಿ ಚುನಾವಣಾ ಪ್ರಕ್ರಿಯೆ ಮುಗಿಯುವ ತನಕ ನನ್ನನ್ನು ಹಾಸನ ಜಿಲ್ಲೆಯಿಂದ ತಮಗೆ ಸರಿ ಎನಿಸಿದ ಸ್ಥಳಕ್ಕೆ ತಾತ್ಕಾಲಿಕ ವರ್ಗಾವಣೆಗೆ ಕೋರುತ್ತೇನೆ ಎಂದು ಪತ್ರದಲ್ಲಿ ಉದಯ್ ಭಾಸ್ಕರ್ ಉಲ್ಲೇಖ ಮಾಡಿದ್ದಾರೆ.




ರೆಡ್​​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಭ್ರಷ್ಟ ಅಧಿಕಾರಿ


ಕೆರೆ ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿ ಕಾಮಗಾರಿಗಳ ಬಿಲ್ ಮಂಜೂರು ಮಾಡಲು ಲಂಚ ಸ್ವೀಕಾರಿಸುವಾಗ ಲೋಕಾಯುಕ್ತ ದಾಳಿ ನಡೆಸಿದೆ.


DySP Uday bhaskar letter, hd revanna allegation, hassan politics, kannada news, karnataka news, ಡಿವೈಎಸ್​ಪಿ ಉದಯ್ ಭಾಸ್ಕರ್ ಪತ್ರ, ಹೆಚ್ ಡಿ ರೇವಣ್ಣ ಆರೋಪ,
ಉದಯ್ ಭಾಸ್ಕರ್ ಬರೆದ ಪತ್ರ


ಇದನ್ನೂ ಓದಿ:  Karnataka Elections 2023: ಚುನಾವಣೆ ಹೊತ್ತಲ್ಲಿ ಜೆಡಿಎಸ್‌ನ ಮತ್ತೊಂದು ವಿಕೆಟ್ ಪತನ; ದಳಪತಿಗಳಿಗೆ ಶಾಕ್!

top videos


    ಶಿವಲಿಂಗಸ್ವಾಮಿ ಹಲಗಲಿಮಠ ಎಂಬ ಅಧಿಕಾರಿ ಮೂರು ಕೆರೆ ಅಭಿವೃದ್ಧಿ ಕಾಮಗಾರಿಗಳ ಹಣ ಬಿಡುಗಡೆಗೆ  2,20,000 ಲಂಚ ಕೇಳಿದ್ದ. ಅದರಲ್ಲಿ ₹1,20,000 ಹಣ ಪಡೆಯುವಾಗ ರೆಡ್​​ಹ್ಯಾಂಡ್​ ಆಗಿ ಲೋಕಾಯುಕ್ತ ಕೈಗೆ ಸಿಕ್ಕಿಬಿದ್ದಿದ್ದಾನೆ.

    First published: