HOME » NEWS » State » DYCM LAXMAN SAVADI MET BMTC KSRTC EMPLOYEES WHO PROTESTING IN FREEDOM PARK BENGALURU TPB SESR

ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ; ಧರಣಿ ಕೈ ಬಿಡುವಂತೆ ಸಾರಿಗೆ ನೌಕರರಿಗೆ ಲಕ್ಷ್ಮಣ ಸವದಿ ಮನವಿ

ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ ಬಿಎಂಟಿಸಿ, ಕೆಎಸ್​ಆರ್​ಟಿಸಿ ಸೇರಿದಂತೆ ನಾಲ್ಕು ನಿಗಮ ಮಂಡಳಿಗಳ ನೌಕರರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಾರಿಗೆ ಸಚಿವ ಲಕ್ಷ್ಮಣ ಸವದಿ ಪ್ರತಿಭಟನಾಕಾರರನ್ನು ಮನವೊಲಿಸುವ ಪ್ರಯತ್ನ ಮಾಡಿದರು.

news18-kannada
Updated:February 20, 2020, 12:28 PM IST
ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ; ಧರಣಿ ಕೈ ಬಿಡುವಂತೆ ಸಾರಿಗೆ ನೌಕರರಿಗೆ ಲಕ್ಷ್ಮಣ ಸವದಿ ಮನವಿ
ಡಿಸಿಎಂ ಲಕ್ಷ್ಮಣ ಸವದಿ.
  • Share this:
ಬೆಂಗಳೂರು (ಫೆ.20): ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿ ಬಿಎಂಟಿಸಿ, ಕೆಎಸ್​ಆರ್​ಟಿಸಿ ಸೇರಿದಂತೆ ನಾಲ್ಕು ನಿಗಮ ಮಂಡಳಿಗಳ ನೌಕರರು ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಸಾಕೇಂತಿಕ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಧರಣಿ ಕೈ ಬಿಡುವಂತೆ ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣಸವದಿ ಪ್ರತಿಭಟನಾಕಾರರ ಮನವೊಲಿಕೆಗೆ ಪ್ರಯತ್ನಿಸಿದ್ದಾರೆ.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಲಕ್ಷ್ಮಣ ಸವದಿ, " ಸಾರಿಗೆ ನೌಕರರ ನೋವು, ನಿಮ್ಮ ಹೋರಾಟದ ತೀವ್ರತೆ ಅರ್ಥವಾಗಿದೆ. ನಿಮ್ಮ ಬೇಡಿಕೆ ಕುರಿತು ಚರ್ಚೆ ನಡೆಸಲು ಈಗಾಗಲೇ ಅಧಿಕಾರಿಗಳ ಸಮಿತಿ ರಚನೆ ಮಾಡಿದ್ದು, ಈ ನಿಟ್ಟಿನಲ್ಲಿ ಚರ್ಚೆ ನಡೆಸುತ್ತೇವೆ. ಈ ಹಿಂದೆ ಯಾವುದೇ ಸರ್ಕಾರವೂ ಕೂಡ ಈ ಕುರಿತು ಚರ್ಚಿಸಲು ಸಮಿತಿ ರಚಿಸಿರಲಿಲ್ಲ. ಆದರೆ, ನಾವು ಆ ಕಾರ್ಯಕ್ಕೆ ಮುಂದಾಗಿದ್ದೇವೆ, ಎಂದು ಅರ್ಥೈಸುವ ಪ್ರಯತ್ನ ನಡೆಸಿದರು.

ಅಧಿವೇಶನ ನಡೆಯುತ್ತಿರುವ ಕಾರಣಕ್ಕೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದ ಅವರು, "ಈಗ ರಚನೆಯಾಗಲಿರುವ ಸಮಿತಿ ಬೇರೆ ರಾಜ್ಯಗಳಿಗೂ ತೆರಳಿ ಅಧ್ಯಯನ ನಡೆಸಿದ್ದು, ಈ ಕುರಿತು ಸವಿವರ ವರದಿ ಪಡೆಯಲಿದ್ದೇವೆ. ಸಾರಿಗೆ ನಿಗಮಕ್ಕೆ ಸರ್ಕಾರಿ ಇಲಾಖೆ ಮಾನ್ಯತೆ ನೀಡಿದಲ್ಲಿ, ಉಳಿದ ನಿಗಮಗಳಿಂದಲೂ ಬೇಡಿಕೆ ಬರಬಹುದು. ಹೀಗಾಗಿ ಈ ಬಗ್ಗೆ ಗಂಭೀರ ಆಲೋಚಿಸುತ್ತಿದ್ದೇವೆ.  ಸದ್ಯ ಅಧಿವೇಶನ ನಡೆಯುತ್ತಿರುವ ಹಿನ್ನೆಲೆ ಈ ಕುರಿತು ನಾನು ಯಾವುದೇ ನಿರ್ದಿಷ್ಟ ಭರವಸೆ ನೀಡುವಂತಿಲ್ಲ. ಆದರೆ, ನಿಮ್ಮ ಬೇಡಿಕೆ ಸಿಎಂ ಗಮನಕ್ಕೆ ತರುವ ಪ್ರಯತ್ನ ನಡೆಸುತ್ತೇನೆ," ಎಂದರು.

"ನಿಗಮ‌ಗಳ ನಷ್ಟಕ್ಕೆ ಹಿಂದಿನ ಸರ್ಕಾರ ಕಾರಣ. ಟಿಕೆಟ್ ದರ ಹೆಚ್ಚಿಸದ ಹಿಂದೆ ರಾಜಕಾರಣ ಮಾಡಲಾಗಿದೆ ಇದರಿಂದ ಈಗ ನಿಗಮ ನಡೆಸಲು ಹಣಕಾಸಿನ ತೊಂದರೆಯಾಗಲಿದೆ. 3950 ಕೋಟಿ ರೂ. ಸರ್ಕಾರದಿಂದ ಬರಬೇಕಿತ್ತು. 6 ವರ್ಷಗಳಿಂದ ಸರ್ಕಾರದಿಂದ ಹಣ ಬಾಕಿಯಿದೆ. ಈ ನಷ್ಟದಿಂದಾಗಿಯೇ ಸವಲತ್ತು ಕೊಡಲಾಗುತ್ತಿಲ್ಲ,"  ಎಂದು ಅವರು ಹೇಳಿದರು.

ಇದನ್ನು ಓದಿ: ಮುಂದುವರೆದ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಗೊಂದಲ; ದಿನೇಶ್​ ಗುಂಡೂರಾವ್​ ಜೊತೆ ಚರ್ಚೆ ನಡೆಸಿದ ಹೈ ಕಮಾಂಡ್

ಇದೇ ವೇಳೆ ಇಂದು ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಯಾವುದೇ ನೌಕರರ ವೇತನ ಕಡಿತ ಮಾಡುವುದಿಲ್ಲ ಎಂದು ಭರವಸೆ ನೀಡಿದ ಅವರು, ಬೇಡಿಕೆ ಈಡೇರಿಸಲು ಪ್ರಾಮಾಣಿಕ ಯತ್ನ ನಡೆಸುವುದಾಗಿ ತಿಳಿಸಿದರು.

ಪರೋಕ್ಷ ಎಚ್ಚರಿಕೆ:ತಮ್ಮನ್ನು ಸರ್ಕಾರಿ ನೌಕರರನ್ನಾಗಿ ಮಾಡಿ ಎಂದು ತೆಲಂಗಾಣ ರಾಜ್ಯ ಸಾರಿಗೆ ಇಲಾಖೆ ನೌಕರರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮುಖ್ಯಮಂತ್ರಿ ಚಂದ್ರಶೇಖರ್​ ರಾವ್​ 48 ಸಾವಿರ ಸಾರಿಗೆ ನೌಕರರನ್ನು ವಜಾ ಮಾಡಿದ್ದರು. ಈ ವಿಚಾರದ ಬಗ್ಗೆ ಮಾತನಾಡಿರುವ ಸೌದಿ, ಪರೋಕ್ಷ ಎಚ್ಚರಿಕೆ ನಿಡಿದ್ದಾರೆ. "ತೆಲಂಗಾಣದಲ್ಲಿ ಸಾರಿಗೆ ನೌಕರರ ಪರಿಸ್ಥಿತಿ ಏನಾಗಿದೆ ಎನ್ನುವುದು ನಿಮಗೆ ಗೊತ್ತಿದೆ," ಎಂದು ಹೇಳಿದರು.
Youtube Video
First published: February 20, 2020, 12:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories