‘ಪಕ್ಷ ಸೂಚಿಸಿದ್ರೆ ಕಾರನ್ನ ಇಲ್ಲೇ ಬಿಟ್ಟು ಬಸ್​ನಲ್ಲಿ ಹೋಗ್ತಿನಿ’; ಮತ್ತೊಮ್ಮೆ ಸಚಿವ ಸ್ಥಾನ ತ್ಯಾಗದ ಮಾತನಾಡಿದ ಕಾರಜೋಳ

ಪಕ್ಷ ಸೂಚಿಸಿದ್ರೆ ಸರ್ಕಾರಿ ಕಾರನ್ನು ಇಲ್ಲೇ ಬಿಟ್ಟು ಬಸ್​ನಲ್ಲಿ ಹೋಗ್ತೀನಿ. ಆದರೆ, ಜಾತಿ ಸಚಿವ ಸ್ಥಾನಕ್ಕಾಗಿ ಜಾತಿ ಆಧಾರದ ಮೇಲೆ ಒತ್ತಡ ತರುವುದು ಸರಿಯಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಅಭಿಪ್ರಾಯಪಟ್ಟಿದ್ದಾರೆ.

ಡಿಸಿಎಂ ಗೋವಿಂದ ಕಾರಜೋಳ.

ಡಿಸಿಎಂ ಗೋವಿಂದ ಕಾರಜೋಳ.

  • Share this:
ಚಿಕ್ಕಮಗಳೂರು (ಜನವರಿ 28); ಬಿಜೆಪಿ ಪಕ್ಷದ ಒಳಗೆ ಸಚಿವ ಸ್ಥಾನಕ್ಕಾಗಿ ಒಳ ಜನಗಳ ಆರಂಭವಾಗುತ್ತಿದ್ದಂತೆ ಕಳೆದ ಒಂದು ವಾರದಿಂದ ಸಿಎಂ ಹಾಗೂ ಪಕ್ಷ ಸೂಚಿಸಿದರೆ ತಾನು ರಾಜೀನಾಮೆ ನೀಡಲೂ ಸಿದ್ಧ ಎಂದು ಹೇಳಿಕೆ ನೀಡಿ ಗಮನ ಸೆಳೆದಿದ್ದ ಡಿಸಿಎಂ ಗೋವಿಂದ ಕಾರಜೋಳ ಇಂದೂ ಸಹ ತಮ್ಮ ಮಾತನ್ನು ಪುನರುಚ್ಚರಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಇಂದು ತಮ್ಮ ಸಚಿವ ಸ್ಥಾನವನ್ನು ತ್ಯಾಗ ಮಾಡುವ ಕುರಿತು ಮತ್ತೊಮ್ಮೆ ಹೇಳಿಕೆ ನೀಡಿರುವ ಗೋವಿಂದ ಕಾರಜೋಳ, “ಪಕ್ಷ ಸೂಚಿಸಿದ್ರೆ ಸರ್ಕಾರಿ ಕಾರನ್ನು ಇಲ್ಲೇ ಬಿಟ್ಟು ಬಸ್​ನಲ್ಲಿ ಹೋಗ್ತೀನಿ. ಆದರೆ, ಜಾತಿ ಸಚಿವ ಸ್ಥಾನಕ್ಕಾಗಿ ಜಾತಿ ಆಧಾರದ ಮೇಲೆ ಒತ್ತಡ ತರುವುದು ಸರಿಯಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಂಪುಟ ವಿಸ್ತರಣೆ ಕುರಿತು ಮಾತನಾಡಿರುವ ಅವರು, “ಶೀಘ್ರದಲ್ಲೇ ಸಚಿವ ಸಂಪುಟ ವಿಸ್ತರಣೆಯಾಗುತ್ತೆ. ಕೆಲವೊಂದು ವಿಚಾರಗಳು ಪಕ್ಷದ ಆಂತರಿಕ ವಿಚಾರಗಳಾಗಿರುತ್ತವೆ. ಈ ಕುರಿತು ಪಕ್ಷದ ರಾಷ್ಟ್ರಾಧ್ಯಕ್ಷ, ಪ್ರಧಾನಿ ಹಾಗೂ ಸಿಎಂ ಚರ್ಚೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಪಕ್ಷದ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಯಾವುದೇ ರಾಜಕಾರಣಿಗೆ ಪಕ್ಷ ತಾಯಿ ಇದ್ದಂತೆ. ಪಕ್ಷದ ನಿರ್ಣಯವನ್ನು ಗೌರವಿಸದಿದ್ದರೆ ಸಮಾಜದಲ್ಲಿ ಬೆಳೆಯಲು ಸಾಧ್ಯವಿಲ್ಲ. ಹೀಗಾಗಿ ಪಕ್ಷ ಸೂಚಿಸಿದರೆ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ನೀಡಲೂ ಸಿದ್ದ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ : ಬಳ್ಳಾರಿಯಲ್ಲೊಬ್ಬ ‘ವಾಕ್ ಮ್ಯಾನ್’! ವಾಹನ ಹತ್ತಿಲ್ಲ, ಚಪ್ಪಲಿ ಧರಿಸಲ್ಲ, ಕಾಲ್ನಡಿಗೆಯೇ ಜೀವನ; ಕಾರಣವೇನಿರಬಹುದು?
First published: