ಸರೋಜಿನಿ ಮಹಿಷಿ ವರದಿ ಜಾರಿಗೆ ಒತ್ತಾಯ; ಪ್ರತಿಭಟನಾಕಾರರು ಬಂದ್ ಕೈಬಿಡುವ ವಿಶ್ವಾಸವಿದೆ; ಗೋವಿಂದ ಕಾರಜೋಳ

ಬಿಜೆಪಿ ಸರಕಾರವಿರುವ ರಾಜ್ಯದಲ್ಲಿ ಮೀಸಲಾತಿಗೆ ಧಕ್ಕೆ ತರದಂತೆ ಕಾಪಾಡಿಕೊಂಡು ಹೋಗ್ತೇವೆ. ಎಲ್ಲಿವರೆಗೂ ಅಸ್ಪೃಶ್ಯತೆ, ಅಸಮಾನತೆ ಈ ಸಮಾಜದಲ್ಲಿ ಇರುತ್ತದೆಯೋ ಅಲ್ಲಿಯವರೆಗೆ ಅಂತವರನ್ನು ಮೇಲೆತ್ತಲು ಸಂವಿಧಾನದ ಆಶಯಕ್ಕನುಗುಣವಾಗಿ ಬಿಜೆಪಿ ಕೆಲಸ ಮಾಡುತ್ತದೆ ಎಂದು ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಡಿಸಿಎಂ ಕೋವಿಂದ ಕಾರಜೋಳ

ಡಿಸಿಎಂ ಕೋವಿಂದ ಕಾರಜೋಳ

 • Share this:
  ಬಾಗಲಕೋಟೆ (ಫೆಬ್ರವರಿ 12); ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಎಂದು ಒತ್ತಾಯಿಸಿ ಗುರುವಾರ ರಾಜ್ಯದ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಇರುವ ಪ್ರತಿಭಟನೆಯನ್ನು ಕೈಬಿಡಬಹುದು ಎಂಬ ವಿಶ್ವಾಸ ನನಗೆ ಇದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.

  ರಾಜ್ಯದಲ್ಲಿ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಆಶಯವನ್ನು ಹೊಂದಿರುವ ಡಾ. ಸರೋಜಿನಿ ಮಹಿಷಿ ವರದಿಯನ್ನು ಜಾರಿಗೆ ತರಲು ಆಗ್ರಹಿಸಿ ರಾಜ್ಯದ ಸುಮಾರು 500ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಗುರುವಾರ ಕರ್ನಾಟಕ ಬಂದ್​ಗೆ ಕರೆ ನೀಡಿವೆ. ಆದರೆ, ನಾರಾಯಣಗೌಡ ಹಾಗೂ ಪ್ರವೀಣ್ ಶೆಟ್ಟಿ ನೇತೃತ್ವದ ಕನ್ನಡ ಪರ ಸಂಘಟನೆಗಳು ಈ ಬಂದ್ಗೆ ಬೆಂಬಲ ಸೂಚಿಸಿಲ್ಲ. ಖಾಸಗಿ ಶಾಲೆಗಳು, ರಸ್ತೆ ಸಾರಿಗೆ ಸಂಸ್ಥೆಗಳೂ ಸಹ ಬಂದ್ಗೆ ಕೇವಲ ನೈತಿಕ ಬೆಂಬಲವಷ್ಟೇ ನೀಡಿವೆ.

  ಆದರೂ ನಾಳೆ ರಾಜ್ಯದಲ್ಲಿ ಬಂದ್ ನಡೆಯುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಈ ಹಿನ್ನೆಲೆಯಲ್ಲಿ ಬಂದ್ ಕುರಿತು ಬಾಗಲಕೋಟೆಯಲ್ಲಿ ಹೇಳಿಕೆ ನೀಡಿರುವ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, “ಈಗಾಗಲೇ ಸರ್ಕಾರದ ಮಟ್ಟದಲ್ಲಿ ಹೋರಾಟಗಾರರ ಜೊತೆಗೆ ಸಂಬಂಧ ಪಟ್ಟ ಸಚಿವರು ಮಾತುಕತೆ ನಡೆಸಿದ್ದಾರೆ. ಭವಿಷ್ಯದಲ್ಲಿ ಈ ವರದಿಗೆ ಸಂಬಂಧಿಸಿದಂತೆ ಏನೇನು ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂಬುದನ್ನು ತಿಳಿಸಿದ್ದಾರೆ. ಹೀಗಾಗಿ ಪ್ರತಿಭಟನಾಕಾರರು ನಾಳಿನ ಕರ್ನಾಟಕ ಬಂದ್ ಅನ್ನು ಕೈಬಿಡಬಹುದು ಎಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

  ಇದೇ ಸಂದರ್ಭದಲ್ಲಿ ಎಸ್​ಸಿ/ಎಸ್​ಟಿ ಮೀಸಲಾತಿ ಕುರಿತು ಮಾತನಾಡಿರುವ ಅವರು, "ಎಸ್ ಸಿ,ಎಸ್ ಟಿ ಮೀಸಲಾತಿ ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟಿದ್ದು ಎಂದು ಸುಪ್ರೀಂ ತೀರ್ಪು ನೀಡಿದೆ. ಸಮಾಜದಲ್ಲಿ ತುಳಿತಕ್ಕೆ,ಅಸ್ಪೃಶ್ಯತೆಯಿಂದ ಬಳಲುವವರನ್ನು ಮೇಲೆತ್ತಲು ಮೀಸಲಾತಿ ವ್ಯವಸ್ಥೆಯಿದೆ. 2012 ರಲ್ಲಿ ಉತ್ತರಾಖಂಡ್ ರಾಜ್ಯ ತೆಗೆದುಕೊಂಡ ನಿರ್ಧಾರ ಕೋರ್ಟ್ ಗೆ ಹೋಯ್ತು. ಅಂದಿನ ಕಾಂಗ್ರೆಸ್ ಸರಕಾರ ಮಾಡಿದ ತಪ್ಪಿನಿಂದ ಇವತ್ತು ಜಡ್ಜ್ ಮೆಂಟ್ ಬಂದಿದೆ.

  ಬಿಜೆಪಿ ಸರಕಾರವಿರುವ ರಾಜ್ಯದಲ್ಲಿ ಮೀಸಲಾತಿಗೆ ಧಕ್ಕೆ ತರದಂತೆ ಕಾಪಾಡಿಕೊಂಡು ಹೋಗ್ತೇವೆ. ಎಲ್ಲಿವರೆಗೂ ಅಸ್ಪೃಶ್ಯತೆ, ಅಸಮಾನತೆ ಈ ಸಮಾಜದಲ್ಲಿ ಇರುತ್ತದೆಯೋ ಅಲ್ಲಿಯವರೆಗೆ ಅಂತವರನ್ನು ಮೇಲೆತ್ತಲು ಸಂವಿಧಾನದ ಆಶಯಕ್ಕನುಗುಣವಾಗಿ ಬಿಜೆಪಿ ಕೆಲಸ ಮಾಡುತ್ತದೆ" ಎಂದು ಗೋವಿಂದ ಕಾರಜೋಳ ತಿಳಿಸಿದ್ದಾರೆ.

  ಇದನ್ನೂ ಓದಿ : ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಬಂದ್; ಇಷ್ಟಕ್ಕೂ ವರದಿಯಲ್ಲಿನ ಶಿಫಾರಸ್ಸುಗಳೇನು? ಕನ್ನಡಿಗರಿಗೇನು ಲಾಭ?
  First published: