ಎಐಎಡಿಎಂಕೆ ಮಾಜಿ ಸಚಿವನಿಗೆ ಸೇರಿದ Rolls Royce, 34 ಲಕ್ಷ ಹಣ, 5 ಕೆಜಿ Gold, Diamonds ಜಪ್ತಿ!

ರೋಲ್ಸ್ ರಾಯ್ಸ್, ಸುಮಾರು 5 ಕೆ.ಜಿ ಯಷ್ಟು ಚಿನ್ನ, 34 ಲಕ್ಷ ರೂ. ನಗದು, 7.2 ಕೆಜಿ ಬೆಳ್ಳಿ, 47 ಗ್ರಾಂ ವಜ್ರಗಳು, ಲೆಕ್ಕವಿಲ್ಲದಷ್ಟು ಬ್ಯಾಂಕ್ ಪಾಸ್‌ಬುಕ್‌ಗಳು ಮತ್ತು ವಿವಿಧ ಸ್ಥಳಗಳಲ್ಲಿ 30 ಆಸ್ತಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ವಶಕ್ಕೆ ಪಡೆಯಲಾದ ಚಿನ್ನಾಭರಣ.

ವಶಕ್ಕೆ ಪಡೆಯಲಾದ ಚಿನ್ನಾಭರಣ.

 • Share this:
  ಡಿವಿಎಸಿ (ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ವಿರೋಧಿ ನಿರ್ದೇಶನಾಲಯ- Directorate of vigilance and anti-corruption) ವಿಭಾಗವು ಗುರುವಾರ ಎಐಎಡಿಎಂಕೆ ಮಾಜಿ ಸಚಿವ ಕೆಸಿ ವೀರಮಣಿ (AIADMK Ex Minister KC Veeramani) ಅವರ ಮನೆ ಮೇಲೆ ದಾಳಿ ನಡೆಸಿ, ಐಷಾರಾಮಿ ಕಾರುಗಳು ಮತ್ತು ಬಗೆಬಗೆಯ ಚಿನ್ನಾಭರಣಗಳನ್ನು ಸೇರಿದಂತೆ ಕೋಟಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದೆ. 100ಕ್ಕೂ ಹೆಚ್ಚು ಅಧಿಕಾರಿಗಳು ಮಾಜಿ ಸಚಿವರ ತವರು ತಿರುಪಟೂರು, ಚೆನ್ನೈ, ವೆಲ್ಲೂರು, ರಾಣಿಪೇಟೆ, ತಿರುವಣ್ಣಾಮಲೈ, ಕೃಷ್ಣಗಿರಿ ಸೇರಿದಂತೆ 30 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದರು. ಕರ್ನಾಟಕದ ಕೆಲವು ಸ್ಥಳಗಳಲ್ಲೂ ಡಿವಿಎಸಿ ವೀರಮಣಿ ಅವರಿಗೆ ಸೇರಿದ ಆಸ್ತಿಯ ಮೇಲೆ ದಾಳಿ ನಡೆಸಿತು.

  ಕೆಸಿ ವೀರಮಣಿ 2016 ರಿಂದ 2021 ರವರೆಗೆ ವಾಣಿಜ್ಯ ತೆರಿಗೆ ಮತ್ತು ನೋಂದಣಿ ಇಲಾಖೆಯನ್ನು ನಿರ್ವಹಿಸುತ್ತಿದ್ದರು. ಭ್ರಷ್ಟಾಚಾರ ತಡೆ ಕಾಯಿದೆ ಅಡಿಯಲ್ಲಿ ಭ್ರಷ್ಟಾಚಾರ ವಿರೋಧಿ ವಿಭಾಗವು ಬುಧವಾರ ಅವರ ವಿರುದ್ಧ ಎಫ್ಐಆರ್ ದಾಖಲಿಸಿದೆ. 2016 ಮತ್ತು 2021 ರ ನಡುವೆ ಅವರು ಮಾಡಿರುವ ಆದಾಯ ಮೂಲಕ್ಕಿಂತ ಶೇ. 654 ಹೆಚ್ಚು ಸಂಪತ್ತನ್ನು ಸಂಪಾದಿಸಿದ್ದಾರೆ ಎಂದು ಎಫ್‌ಐಆರ್  ನಲ್ಲಿ ಹೇಳಲಾಗಿದೆ. ಅವರು ತಮ್ಮ ಆದಾಯಕ್ಕೆ ಅಸಮಾನವಾಗಿ 28.78 ಕೋಟಿ ರೂಪಾಯಿಗಳಷ್ಟು ಸಂಪತ್ತನ್ನು ಗಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅವರು ತಮ್ಮ 80 ವರ್ಷದ  ತಾಯಿಯ ಹೆಸರಿನಲ್ಲಿ ಸಂಪತ್ತನ್ನು ಮಾಡಿದ್ದಾರೆ.

  ದಾಳಿಯ ನಂತರ ಪ್ರತಿಕ್ರಿಯೆ ನೀಡಿದ ಡಿವಿಎಸಿ, ವಶಕ್ಕೆ ಪಡೆದ ವಸ್ತುಗಳಲ್ಲಿ ಒಟ್ಟು ಒಂಬತ್ತು ಐಷಾರಾಮಿ ಕಾರುಗಳು ಸೇರಿವೆ. ಇದರಲ್ಲಿ ರೋಲ್ಸ್ ರಾಯ್ಸ್, ಸುಮಾರು 5 ಕೆ.ಜಿ ಯಷ್ಟು ಚಿನ್ನ, 34 ಲಕ್ಷ ರೂ. ನಗದು, 7.2 ಕೆಜಿ ಬೆಳ್ಳಿ, 47 ಗ್ರಾಂ ವಜ್ರಗಳು, ಲೆಕ್ಕವಿಲ್ಲದಷ್ಟು ಬ್ಯಾಂಕ್ ಪಾಸ್‌ಬುಕ್‌ಗಳು ಮತ್ತು ವಿವಿಧ ಸ್ಥಳಗಳಲ್ಲಿ 30 ಆಸ್ತಿ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದೆ.

  ಇದನ್ನು ಓದಿ: Vaccine Drive: ನಾಳೆ ವಿಶೇಷ ಮಹಾ ಲಸಿಕೆ ಅಭಿಯಾನ; ಬೆಂಗಳೂರಿನಲ್ಲಿ ಒಂದೇ ದಿನ 5 ಲಕ್ಷ ಡೋಸ್ ಹಂಚಿಕೆ ಗುರಿ

  ದಾಳಿಯ ವಿಷಯ ತಿಳಿಯುತ್ತಿದ್ದಂತೆ ಎಐಎಡಿಎಂಕೆ ಕಾರ್ಯಕರ್ತರು ವೀರಮಣಿ ನಿವಾಸದ ಹೊರಗೆ ಜಮಾಯಿಸಿದರು ಮತ್ತು ಕಪ್ಪು ಬಾವುಟಗಳನ್ನು ಹಿಡಿದು ಡಿಎಂಕೆ ವಿರುದ್ಧ ಘೋಷಣೆಗಳನ್ನು ಕೂಗಿದರು. ಮಾಜಿ ಸಚಿವ ಹಾಗೂ ಎಐಎಡಿಎಂಕೆ ಹಿರಿಯ ನಾಯಕ ಜಯಕುಮಾರ್ ಅವರು ಮಾತನಾಡಿ, ರಾಜಕೀಯವಾಗಿ ಸೇಡು ತೀರಿಸಿಕೊಳ್ಳಲು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಮತ್ತು ಪಕ್ಷವನ್ನು ನಿಶ್ಚಲಗೊಳಿಸಲು ಡಿಎಂಕೆ ಸರ್ಕಾರವು ದಾಳಿ ನಡೆಸಲು ಆದೇಶಿಸಿದೆ ಎಂದು ಆರೋಪಿಸಿದ್ದಾರೆ.
  Published by:HR Ramesh
  First published: