ನಿನ್ನೆ ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು(ACB Raid) ರಾಜ್ಯಾದ್ಯಂತ 15 ಸರ್ಕಾರಿ ಅಧಿಕಾರಿಗಳ (15 Govt Officials) ಮನೆ, ಆಸ್ತಿಗಳ ಮೇಲೆ ದಾಳಿ ನಡೆಸಿದ್ದರು. ಆರೋಪಿತ ಭ್ರಷ್ಟ ಅಧಿಕಾರಿಗಳ ಆಸ್ತಿ, ಮನೆಯ ಲಾಕರ್ನಲ್ಲಿದ್ದ ಧನಕನಕಗಳ ಭಂಡಾರ ಕಂಡು ಎಸಿಬಿ ಅಧಿಕಾರಿಗಳೇ (ACB Officers) ಬೆಚ್ಚಿ ಬಿದ್ದಿದ್ದರು. ಈ ಎಲ್ಲದರ ಮಧ್ಯೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿ ಗಮನ ಸೆಳೆದ ಸಂಗತಿ ವಾಟರ್ ಪೈಪ್ನಿಂದ ಕಂತೆ ಕಂತೆ ನೋಟು (Money in Water Pipe) ಸಿಕ್ಕಿದ್ದು. ಕಲಬುರಗಿಯ ಲೋಕೋಪಯೋಗಿ ಇಲಾಖೆಯ ಕಿರಿಯ ಇಂಜಿನಿಯರ್ ಆಗಿರುವ ಶಾಂತನಗೌಡ ಬಿರಾದಾರ್ (Engineer Shanta Gowda Biradar) ಮನೆಯ ಪೈಪ್ ನಲ್ಲಿ ನೋಟಿನ ಕಂತೆಗಳು ಪತ್ತೆಯಾಗಿದ್ದವು. ನೀರಿನ ಪೈಪ್ನಿಂದ ಬರೋಬ್ಬರಿ 13 ಲಕ್ಷ ಹಣವನ್ನು ಅಧಿಕಾರಿಗಳು ಬಕಿಟ್ಗೆ ಇಳಿಸಿಕೊಂಡಿದ್ದರು. ನೀರಿನ ಪೈಪ್ನಿಂದ ಹಣ ತೆಗೆಯುವ ವಿಡಿಯೋ ಸದ್ಯ ದೇಶಾದ್ಯಂತ ವೈರಲ್ ಆಗಿದೆ. ಪೈಪ್ನಲ್ಲಿ ಬಚ್ಚಿಟ್ಟಿದ್ದ ಹಣ ಪತ್ತೆಯಾಗಿದ್ದರ ಹಿಂದೆ ರೋಚಕ ಕಥೆ ಇಲ್ಲಿದೆ.
15 ನಿಮಿಷ ಬಾಗಿಲನ್ನೇ ತೆರೆಯಲಿಲ್ಲ
ನಿನ್ನೆ ಬೆಳ್ಳಂಬೆಳಗ್ಗೆಯೇ ಎಸಿಬಿ ಅಧಿಕಾರಿಗಳು ಬಿರಾದಾರ್ ಮನೆಯ ಬಾಗಿಲು ಬಡಿದಿದ್ದರು. ದಾಳಿಯ ಸುಳಿವು ಸಿಗುತ್ತಿದ್ದಂತೆ ಸರ್ಕಾರಿ ಅಧಿಕಾರಿ ಬಿರಾದಾರ್ 15 ನಿಮಿಷಗಳ ಕಾಲ ಮನೆಯ ಬಾಗಿಲನ್ನೇ ತೆರೆಯಲಿಲ್ಲ. ಈ ಸಮಯದಲ್ಲಿ ಮನೆಯಲ್ಲಿದ್ದ ಲಕ್ಷ ಲಕ್ಷ ನಗದನ್ನು ಬಚ್ಚಿಡಲು ಮುಂದಾಗಿದ್ದಾರೆ. ಕೈ ಸಿಕ್ಕಷ್ಟು ಹಣವನ್ನು ಗಾಬರಿಯಲ್ಲಿ ಬಚ್ಚಿಡಲು ಮುಂದಾಗಿದ್ದಾರೆ. ಈ ವೇಳೆ ಮನೆಯ ಟೆರೆಸ್ ಮೇಲಿನ ಪೈಪ್ ಒಳಗೆ ಆತುರಾತುರವಾಗಿ ಹಣ ತುರುಕಿದ್ದಾರೆ. ಗಾಬರಿಯಲ್ಲಿ ಹಣ ತುರುಕಿ ಬಳಿಕ ಪೈಪ್ ಮೇಲೆ ಕಲ್ಲಿಟ್ಟು ಕೆಳಗೆ ಬಂದಿದ್ದರು.
ಮಗನ ಎಡವಟ್ಟಿನಿಂದ ಸಿಕ್ಕಿಬಿದ್ದ ಅಧಿಕಾರಿ
ಅಧಿಕಾರಿಗಳು ಮನೆಯೊಳಗೆ ಕಾಲಿಟ್ಟ ಬಳಿಕ ಸಾಮಾನ್ಯವಾಗಿರು ಬಿರಾದಾರ್ ಹಾಗೂ ಅವರ ಮಗ ಪ್ರಯತ್ನಿಸಿದ್ದಾರೆ. ಆದರೆ ಮಗನ ಎಡವಟ್ಟಿನಿಂದ ಪೈಪ್ನಲ್ಲಿ ಬಚ್ಚಿಟ್ಟಿದ್ದ ಹಣ ಎಸಿಬಿ ಅಧಿಕಾರಿಗಳ ಕಣ್ಣಿಗೆ ಬಿದ್ದೇ ಬಿಟ್ಟಿತು. ಅಧಿಕಾರಿಗಳು ಮನೆಯಲ್ಲಿ ಪರಿಶೀಲನೆ ನಡೆಸುತ್ತಿರುವಾಗ ಮಗ ಟೆರೆಸ್ ಮೇಲೆ ತಿರುಗಾಡುತ್ತಿದ್ದ. ದಾಳಿ ವೇಳೆ ಪೈಪ್ನ ಸುತ್ತಲೇ ಓಡಾಡುತ್ತಿದ್ದ. ಇದರಿಂದ ಅನುಮಾನಗೊಂಡ ಎಸಿಬಿ ಅಧಿಕಾರಿಗಳು ಪೈಪ್ ಮೇಲಿನ ಕಲ್ಲು ತೆಗೆದು ನೋಡಿದ್ದಾರೆ. ಕಲ್ಲು ತೆಗೆಯುತ್ತಿದ್ದಂತೆ ಒಂದು ನೋಟು ಕಾಣಿಸಿರು.
ಇದನ್ನೂ ಓದಿ: ACB Raid ವೇಳೆ ಯಾರ ಮನೆಯಲ್ಲಿ ಎಷ್ಟು ಚಿನ್ನ-ಬೆಳ್ಳಿ-ಹಣ ಸಿಕ್ಕಿದೆ? ಇಲ್ಲಿದೆ ನೋಡಿ ಧನಕನಕಗಳ Photos
ಬರೋಬ್ಬರಿ 13 ಲಕ್ಷ ತುರುಕಿದ್ದರು..!
ಒಂದು ನೋಟು ಎಳೆಯುತ್ತಿದ್ದಂತೆ ಒಳಗೆ ಕಂತೆ ಕಂತೆ ಹಣ ಇರುವುದು ಅಧಿಕಾರಿಗಳ ಗಮನಕ್ಕೆ ಬಂತು. ಬಳಿಕ ಮೊಣ ಕೈ ತನಕ ಹಣ ಹೊರ ತೆಗೆದಿದ್ದರು. ಬಳಿಕ ಪ್ಲಂಬರ್ ಕರೆಯಿಸಿ ಪೈಪ್ ಕಟ್ ಮಾಡಿಸಿ ಹಣ ತೆಗೆಸಲಾಯಿತು. ಬರೋಬ್ಬರಿ ಪೈಪ್ನಲ್ಲಿ 13 ಲಕ್ಷ ಹಣವನ್ನು ತಂದೆ-ಮಗ ಬಚ್ಚಿಟ್ಟಿದ್ದರು.
ಪೈಪ್ ಸುತ್ತಲೇ ತಂದೆ-ಮಗನ ಓಡಾಟ
ಇನ್ನು ಹಣ ಬಚ್ಚಿಟ್ಟಿದ್ದ ಪೈಪನ್ನು ವಾಷಿಂಗ್ ಮಷಿನ್ ನಿಂದ ನೀರು ಹೋಗಲು ನಿರ್ಮಿಸಿದ್ದರು. ನೀರು ಹೊರ ಹೋಗಲು ಸಂಪರ್ಕ ನೀಡಿದ್ದ ಪೈಪ್ ಇದಾಗಿತ್ತು. ಆದರೆ ಕಳೆದ ಎರಡು ತಿಂಗಳಿಂದ ವಾಷಿಂಗ್ ಮಷಿನ್ ಬಳಸಿರಲಿಲ್ಲ. ಇದರಿಂದ ನೋಟಿನ ಕಂತೆಗಳಿಗೆ ಯಾವುದೇ ಹಾನಿ ಆಗುವುದಿಲ್ಲ ಎಂದು ತಿಳಿದಿದ್ದೇ ಬಿರಾದಾರ್ ಹಣವನ್ನು ಪೈಪ್ ಒಳಗೆ ತುರುಕಿದ್ದರು. ಅವಸರದಲ್ಲಿ ಹಣ ಹಾಕಿ ಪೈಪ್ ಮೇಲೆ ಪ್ಲೇಟ್ ಬದಲಾಗಿ ಮೇಲೆ ಕಲ್ಲು ಇಟ್ಟಿದ್ದರು. ಶಾಂತಗೌಡ ಬಿರಾದರ್ ಮನೆಯ ಟಾಯ್ಲೆಟ್ ಬಳಿ ವಾಷಿಂಗ್ ಮಷಿನ್ ಇಡಲಾಗಿದೆ. ದಾಳಿ ವೇಳೆ ಪದೇ ಪದೇ ಟಾಯ್ಲೆಟ್ ಗೆ ಹೋಗಿ ಬರೋದಾಗಿ ಹೇಳಿ ಪೈಪ್ ಬಳಿ ಬಿರಾದಾರ್ ಹಾಗೂ ಅವರ ಪತ್ರ ಹೋಗುತ್ತಿದ್ದರು. ಪೈಪ್ ಬಳಿಯೇ ಹೆಚ್ಚು ಓಡಾಟ ನಡೆಸಿದ್ದರು. ಇದರಿಂದ ಅನುಮಾನಗೊಂಡು ಪೈಪ್ ಮೇಲಿನ ಕಲ್ಲು ತಳ್ಳಿದ್ದ ಎಸಿಬಿ ಸಿಬ್ಬಂದಿಗೆ ಹಣ ಇರೋದು ಕಾಣಿಸಿತ್ತು. ನಂತರ ಮನೆ ಹೊರಗಡೆಯಿಂದ ಪೈಪ್ ಕತ್ತರಿಸಿದಾಗ ಕಂತೆ ಕಂತೆ ಹಣ ಸಿಕ್ಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ