ಧಾರವಾಡದ ದುರ್ಗಾದೇವಿ ಪೂಜೆ ಮಾಡಿದ್ರೇ ಚುನಾವಣೆಯಲ್ಲಿ ಗೆಲುವು ಗ್ಯಾರಂಟಿ....!

news18
Updated:May 1, 2018, 3:56 PM IST
ಧಾರವಾಡದ ದುರ್ಗಾದೇವಿ ಪೂಜೆ ಮಾಡಿದ್ರೇ ಚುನಾವಣೆಯಲ್ಲಿ ಗೆಲುವು ಗ್ಯಾರಂಟಿ....!
news18
Updated: May 1, 2018, 3:56 PM IST
- ಮಂಜುನಾಥ್ ಯಡಳ್ಳಿ, ನ್ಯೂಸ್ 18 ಕನ್ನಡ 

ಧಾರವಾಡ (ಮೇ.01) :  ಹಲವು ಐತಿಹಾಸಿ ಸ್ಥಳಗಳಿಗೆ ಭೇಟಿ ನೀಡಿದ್ರೆ ಅಧಿಕಾರ ಕಳೆದುಕೋಳ್ಳುತ್ತೆವೆ ಎಂಬ ನಂಬಿಕೆ ಇದ್ರೆ. ಇನ್ನೂ ಕೆಲವು ದೇವಾಲಯಕ್ಕೆ ಭೇಟಿ ನೀಡಿದ್ರೆ ಅಧಿಕಾರ ಸಿಗುತ್ತೆ ಎಂಬ ನಂಬಿಕೆ ಸಹ ಇದೆ. ಅಂದಹಾಗೇ ಇಲ್ಲೊಂದು ದೇವಸ್ಥಾನ ಇದೆ. ಈ ದೇವಿ ರಾಜಕಾರಣಿಗಳ ಸೋಲು-ಗೆಲುವಿನ ಲೆಕ್ಕಗಳನ್ನು ಹೇಳುತ್ತಾಳಂತೆ. ಆ ದೇವಿ ಸನ್ನಿಧಿಗೆ ಬಂದು, ಅಭಿಷೇಕ ಮಾಡಿ ಎಲೆ ಪೂಜೆ ಮಾಡಿ ಭಕ್ತಿಯಿಂದ ನಡೆದುಕೊಂಡರೆ ಸಾಕು  ಚುನಾವಣೆಯಲ್ಲಿ ಪ್ರಚಂಡ ಬಹುಮತ ಗ್ಯಾರಂಟಿ.  ಹೀಗಾಗಿ ಈ ದೇವಿಗೆ ಈ ದೇವತೆಯ ದರ್ಶನ ಮಾಡಿ ಚುನಾವಣಾ ಪ್ರಚಾರ ಪ್ರಾರಂಭ ಮಾಡುತ್ತಿದ್ದಾರೆ.

ಇದು ಧಾರವಾಡ ತಾಲೂಕಿನ ಶಿವಳ್ಳಿಯ ಶ್ರೀ ದುರ್ಗಾದೇವಿ ದೇವಸ್ಥಾನ. ರಾಜ್ಯದಲ್ಲಿ ಸದ್ಯ ವಿಧಾನಸಭೆ ಚುನಾವಣೆ ಗೆಲ್ಲೋದಕ್ಕೆ ನಾನಾ ಕಸರತ್ತುಗಳು ನಡೆದಿವೆ. ಅದರಲ್ಲಿಯೂ ದೇವರ ಮೋರೆ ಹೋಗುವುದು ಕೂಡ ಒಂದು. ಅದೇ ರೀತಿ ಇವರಿಬ್ಬರೂ ಕೂಡ ಶಿವಳ್ಳಿ ಗ್ರಾಮದ ದುರ್ಗಾದೇವಿಯ ಮೊರೆ ಹೋಗಿದ್ದಾರೆ.

ಈ ದೇವಿಗೆ ಪೂಜೆ ಸಲ್ಲಿಸಿ, ಅಭಿಷೇಕ ಮಾಡಿ, ಎಲೆ ಪೂಜೆ ಕಟ್ಟಿಸಿ ಸೀರೆಯ ಊಡಿ ತುಂಬಿ ಭಕ್ತಿಯಿಂದ ನಡೆದುಕೊಂಡರೇ ದೇವಿ ಒಲೆಯುತ್ತಾಳೇ ಅನ್ನೋ ಪ್ರತೀತಿ ಇದೆ. ಅದೇ ಕಾರಣಕ್ಕೆ ವಿನಯ ಕುಲಕರ್ಣಿ ಮತ್ತು ಅಮೃತ ದೇಸಾಯಿ ಇಬ್ಬರೂ ಸಹ ಇದೇ ದೇವಿಗೆ ಪೂಜೆ ಸಲ್ಲಿಸುವ ಮೂಲಕ ತಮ್ಮ ಪ್ರಚಾರ ಆರಂಭಿಸಿದ್ದಾರೆ.

ರಾಜಕಾರಣಿಗಳ ಪಾಲಿನ ಆರಾಧ್ಯ ದೇವಿಯಾಗಿರುವ ಶಿವಳ್ಳಿಯ ದುರ್ಗಾದೇವಿಗೆ ಧಾರವಾಡ ಮಾತ್ರವಲ್ಲ. ಉತ್ತರ ಕರ್ನಾಟಕದ ವಿವಿಧ ಕಡೆಯಿಂದ ರಾಜಕಾರಣಿಗಳು ಆಗಮಿಸುತ್ತಾರೆ. ಈ ಹಿಂದಿನಿಂದಲೂ ವಿನಯ ಕುಲಕರ್ಣಿ ಇಲ್ಲಿಂದಲೇ ಪ್ರಚಾರ ಆರಂಭಿಸಿ ವಿಧಾನಸಭೆ ಚುನಾವಣೆಯಲ್ಲಿ ಗೆಲವು ಸಾಧಿಸಿದ್ರಂತೆ. ಈಗಲೂ ಸಹ ಇಲ್ಲಿಂದಲೇ ಪ್ರಚಾರ ಆರಂಭಿಸಿದ್ದಾರೆ.

ಇನ್ನೂ ಇದೇ ಕ್ಷೇತ್ರದ ಅಮೃತ ದೇಸಾಯಿ ಈ ಹಿಂದೆ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾದಾಗಿನಿಂದಲೂ ಈ ದೇವಿಗೆ ಪೂಜೆ ಮಾಡಿಯೇ ಪ್ರಚಾರ ಆರಂಭಿಸಿದವರು. ಹೀಗಾಗಿ ಈ ಸಲವೂ ಇಲ್ಲಿಂದಲೇ ಪ್ರಚಾರ ಆರಂಭಿಸಿದ್ದಾರೆ. ಈ ಹಿಂದೆ ಸೀಮಾ ಮಸೂತಿ ಸಹ ಇದೇ ದೇವಿಯ ಕೃಪೆಯಿಂದ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿ ಆಯ್ಕೆಯಾಗಿದ್ದರು. ಇದರ ಜತೆಗೆ  ಸ್ಥಳೀಯವಾಗಿಯೂ ಸಹ ಅನೇಕರು ದೇವಿ ಕೃಪೆಯಿಂದಲೇ ಗ್ರಾಮ ಪಂಚಾಯ್ತಿಗೆ ಆಯ್ಕೆಯಾಗಿದ್ದಾರೆ.

ಒಟ್ಟಾರೆಯಾಗಿ ಕಾಂಗ್ರೆಸ್  ಅಭ್ಯರ್ಥಿ ಸಚಿವ ವಿನಯ್ ಕುಲಕರ್ಣಿ ಹಾಗೂ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿ ಇಬ್ಬರೂ ಎದುರಾಳಿಗಳು ಒಂದೇ ದೇವಿಗೆ ಮೊರೆ ಹೋಗಿದ್ದು, ಈ ದೇವಿ ಯಾರ ಭಕ್ತಿಗೆ ಒಲಿಯುತ್ತಾಳೇ ಅನ್ನೋದನ್ನು ಮೇ 15 ರವರೆಗೂ ಕಾದು ನೋಡಬೇಕಿದೆ.
First published:May 1, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...