ಭಕ್ತಿ ಪರಾಕಾಷ್ಠೆಗೆ ಸಾಕ್ಷಿಯಾಯ್ತು ದುರ್ಗಾದೇವಿ ಜಾತ್ರೆ ...

news18
Updated:June 19, 2018, 4:36 PM IST
ಭಕ್ತಿ ಪರಾಕಾಷ್ಠೆಗೆ ಸಾಕ್ಷಿಯಾಯ್ತು ದುರ್ಗಾದೇವಿ ಜಾತ್ರೆ ...
news18
Updated: June 19, 2018, 4:36 PM IST
- ರಾಚಪ್ಪ ಬನ್ನಿದಿನ್ನಿ, ನ್ಯೂಸ್ 18 ಕನ್ನಡ 

ಬಾಗಲಕೋಟೆ ( ಜೂನ್ 19) :  ತಲೆಗೆ ಸಣ್ಣ ವಸ್ತು ಬಡೆದ್ರೆ ಸಾಕು ಗಾಯವಾಗಿ ರಕ್ತ ಬರುತ್ತೆ. ಆದರೆ  ಇಲ್ಲೊಬ್ಬ ಪೂಜಾರಿ ಬರೋಬರಿ ಮೂವತ್ತು ತೆಂಗಿನಕಾಯಿ ತಲೆಗೆ ಒಡೆದುಕೊಂಡು ಹರಿಕೆ ತೀರಿಸಿದ್ದಾನೆ. ಆದ್ರೆ ತಲೆಗೆ ತೆಂಗಿನ ಕಾಯಿ ಒಡೆದರೂ ರಕ್ತ ಬಂದಿಲ್ಲ ಅಂದ್ರೆ ಭಕ್ತಿಯ ಪರಾಕಾಷ್ಠೆಯೋ, ಪವಾಡವೋ ಎನ್ನುವಂತಾಗಿದೆ.

ಬಾಗಲಕೋಟೆ ನಗರದ ಹರಣಶಿಕಾರಿ ಓಣಿಯಲ್ಲಿ ನಡೆದ ದುರ್ಗಾದೇವಿ ಜಾತ್ರೆಯಲ್ಲಿ ಪೂಜಾರಿ ಮಲ್ಲಪ್ಪ ಎಂಬುವರು ಮೂವತ್ತು ತೆಂಗಿನಕಾಯಿ ತಲೆಗೆ ಪಟಪಟನೆ ಒಡೆದುಕೊಂಡು ಭಕ್ತಿ ಪರಾಕಾಷ್ಟೆ ಮೆರೆದ್ದಾರೆ.  ತಲೆಗೆ ತೆಂಗಿನಕಾಯಿ ಒಡೆದುಕೊಳ್ಳುವದು ನೋಡಿದ್ರೆ ಮೈಜುಮ್ಮ ಎನ್ನುತ್ತದೆ. ಲೋಕ ಕಲ್ಯಾಣಕ್ಕಾಗಿ ಜಾತ್ರೆಯಲ್ಲಿ ಈ ಪದ್ಧತಿ ನಡೆಯುತ್ತದೆ.

ಇನ್ನು ಪ್ರತಿ ವರ್ಷ ಜೂನ್ ತಿಂಗಳಲ್ಲಿ ಈ ಜಾತ್ರೆ ನಡೆಯುತ್ತೆ. ನೂರಾರು ವರ್ಷದಿಂದ ದುರ್ಗಾದೇವಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ.ಕುಟುಂಬಗಳಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಂಡ ಭಕ್ತರು ದೇವಸ್ಥಾನದ ಸುತ್ತಲೂ ಮಕ್ಕಳು ಸಮೇತ ದೀರ್ಘ ದಂಡ ನಮಸ್ಕಾರ ಹಾಕುತ್ತಾರೆ.

ಓಣಿಯಲ್ಲಿ ದುರ್ಗಾದೇವಿ ಪಲ್ಲಕ್ಕಿ ಮೆರವಣಿಗೆ ನಡೆದ ಬಳಿಕ ದುರ್ಗಾ ದೇವಿಯ ದೇಗುಲದ ಎದುರು ಪೂಜಾರಿ ತಲೆಗೆ ತೆಂಗಿನ ಕಾಯಿ ಒಡೆದು ಕೊಳ್ಳುವ ವಿಶೇಷ ಆಚರಣೆ ನಡೆಯಿತು.
First published:June 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ