ವಿಧಾನಸೌಧದಲ್ಲೂ ನಕಲಿ ಸಚಿವ; ಸಾಲ ಕೊಡಿಸುವುದಾಗಿ ಒಂದೂವರೆ ಕೋಟಿ ರೂ. ಪಂಗನಾಮ..!

ಇನ್ನೊಂದು ಆಶ್ಚರ್ಯಕರ ಸುದ್ದಿ ಏನೆಂದರೆ, ಈ ಖದೀಮರು ನಕಲಿ ಸಚಿವನ ಕಚೇರಿಯಾಗಿ ವಿಧಾನಸೌಧವನ್ನೇ ಬಳಸಿಕೊಂಡಿದ್ದಾರೆ.

Latha CG | news18
Updated:February 13, 2019, 4:32 PM IST
ವಿಧಾನಸೌಧದಲ್ಲೂ ನಕಲಿ ಸಚಿವ; ಸಾಲ ಕೊಡಿಸುವುದಾಗಿ ಒಂದೂವರೆ ಕೋಟಿ ರೂ. ಪಂಗನಾಮ..!
ಬಂಧಿತ ಆರೋಪಿಗಳು, (ಎಡಭಾಗದಿಂದ ಮೂರನೇ ವ್ಯಕ್ತಿ ನಕಲಿ ಸಚಿವ)
  • News18
  • Last Updated: February 13, 2019, 4:32 PM IST
  • Share this:
ಬೆಂಗಳೂರು,(ಫೆ.13): ತಾನು ಸಚಿವನೆಂದು ಹೇಳಿಕೊಂಡು ಸರ್ಕಾರದ ವತಿಯಿಂದ ಸಾಲ ಕೊಡಿಸುವುದಾಗಿ ವಂಚಿಸಿದ್ದ ನಕಲಿ ಸಚಿವ ಸೇರಿದಂತೆ 8 ಮಂದಿ ಆರೋಪಿಗಳನ್ನು ಕಬ್ಬನ್​ ಪಾರ್ಕ್ ಠಾಣೆಯ​ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ 7 ಆರೋಪಿಗಳನ್ನು ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಮಣಿಕಂಠ ವಾಸನ್, ಕಾರ್ತಿಕೇಯನ್, ಸುಮನ್, ಅಭಿಲಾಷ್, ಕಾರ್ತಿಕ್, ಪ್ರಭು ಜಾನ್ ಮೂನ್ ಹಾಗೂ ಸಗವರೂಪ್ ಬಂಧಿತ ಆರೋಪಿಗಳು. ಇನ್ನೊಂದು ಆಶ್ಚರ್ಯಕರ ಸುದ್ದಿ ಏನೆಂದರೆ, ಈ ಖದೀಮರು ನಕಲಿ ಸಚಿವನ ಕಚೇರಿಯಾಗಿ ವಿಧಾನಸೌಧವನ್ನೇ ಬಳಸಿಕೊಂಡಿದ್ದಾರೆ.

ಗೋಡಂಬಿ ಬೆಳೆಗೆ ನೂರು ಕೋಟಿ ಲೋನ್​ ಕೊಡಿಸುವುದಾಗಿ ಹೇಳಿ ಒಂದೂವರೆ ಕೋಟಿ ಕಮಿಷನ್​ ಪಡೆದಿದ್ದಾರೆ ಎನ್ನಲಾಗಿದೆ. ನಂತರ ಈ ಖದೀಮರು ಸಾಲ ಕೊಡಿಸುವ ನಾಟಕಕ್ಕಾಗಿ ನಕಲಿ ಸಚಿವನನ್ನು ತಯಾರಿ ಮಾಡಿದ್ದಾರೆ. ಆತ ವಿಧಾನಸೌಧದ ಖಾಲಿ ಕಚೇರಿಯನ್ನೇ ತನ್ನ ಡ್ರಾಮಾಕ್ಕೆ ಬಳಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

ಒಬ್ಬರು ಮದುವೆ ಅಂತಾರೆ, ಮತ್ತೊಬ್ಬರು ವ್ಯವಹಾರ ಅಂತಾರೆ… ಕುತೂಹಲ ಮೂಡಿಸಿವೆ ಮುಂಬೈಗೆ ಹೋದವರು ಕೊಟ್ಟ ಉತ್ತರಗಳು

ಖಾಲಿ ಕಚೇರಿಯಲ್ಲಿ ಕುರ್ಚಿ ಹಾಕಿ ಇದು ತನ್ನದೇ ಕಚೇರಿ ಎಂದು ಬಿಲ್ಡಪ್​ ಕೊಟ್ಟಿದ್ದ. ನಿಮಗೆ ಬೇಕಾಗಿರುವ ಲೋನ್ ನಾನು ಕೊಡಿಸುತ್ತೇನೆ. ಆದರೆ ಯಾವುದೇ ಕಾರಣಕ್ಕೂ ಹೊರಗೆ ತನ್ನ ಹೆಸರು ಹೇಳಬಾರದು ಎಂದು ಧಮ್ಕಿ ಹಾಕಿದ್ದ. ಸಚಿವರಂತೆ ವೇಷ ಧರಿಸಿ ವಿಧಾನಸೌಧದ ಮೊದಲನೇ ಮಹಡಿಯಲ್ಲಿ ಮಾತುಕತೆ ನಡೆಸಿದ್ದ ಎನ್ನಲಾಗಿದೆ.

ಇದಾದ ಬಳಿಕ ಒಂದೂವರೆ ಕೋಟಿ ಕಮಿಷನ್​ ಪಡೆದು ನಕಲಿ ಸಚಿವ ಸೇರಿದಂತೆ 8 ಮಂದಿ ಎಸ್ಕೇಪ್​ ಆಗಿದ್ದರು. ಈ ಬಗ್ಗೆ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಾಗಿತ್ತು. ನಂತರ ಕಬ್ಬನ್ ಪಾರ್ಕ್​​ ಠಾಣೆ ಪೊಲೀಸರು ಪ್ರಕರಣ ತನಿಖೆ ಮಾಡಿ 8 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಖದೀಮರು ಈ ಮೊದಲು ಮೂರ್ನಾಲ್ಕು ಬಾರಿ ವಿಧಾನಸೌಧ ಬಳಸಿಕೊಂಡು ಡೀಲ್ ಮಾಡಿದ್ದರು. ವಿಧಾನಸೌಧದ ಹೌಸ್ ಕೀಪಿಂಗ್ ಸಿಬ್ಬಂದಿ ಹಾಗೂ ಇತರ ಕೆಲವು ಪರಿಚಿತರನ್ನು ಬಳಸಿಕೊಂಡು ಡೀಲ್ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರಿಂದ ತನಿಖೆ ಮುಂದುವರೆದಿದೆ.
First published:February 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading