Kolara: ರೈತನ ದೂರಿನಿಂದ ಬಯಲಾಯ್ತು ಅಂತರರಾಜ್ಯ ಗೊಬ್ಬರ ಮಾರಾಟ ಜಾಲ!

ಹಿಪ್ಪು ನೇರಳೆ ಬೆಳೆಗೆ ಗೊಬ್ಬರ ಹಾಕಲು ಚೀಲ ತೆರೆದಾಗ, ಮರಳು ಮಿಶ್ರಿತ ಗೊಬ್ಬರ ಇರುವುದು ಬೆಳಕಿಗೆ ಬಂದಿತ್ತು. ಮರಳಿಗೆ ಗೊಬ್ಬರದ ಬಣ್ಣವನ್ನೆ ಹಾಕಿ ಕಲಬೆರಕೆ ಮಾಡಿದ್ದು, ರೈತರನ್ನ ವಂಚಿಸುವ ಕೆಲಸ ಮಾಡಲಾಗ್ತಿದೆ ಎಂದು ರೈತ ರಾಜೇಶ್ ಆಕ್ರೋಶ ವ್ಯಕ್ತಪಡಿಸಿದ್ದರು.

ಹಣ

ಹಣ

  • Share this:
ಕೋಲಾರ(ಜೂ.17): ಬಯಲುಸೀಮೆ ಕೋಲಾರ (Kolara) ಜಿಲ್ಲೆಯಲ್ಲಿ ಯಾವುದೇ ನೀರಾವರಿ ಮೂಲಗಳು ಇಲ್ಲದೆ ಇದ್ದರು, ಮಳೆಯಾಧಾರಿತ ಕೃಷಿ, ಹಾಗು ಬೋರೆ ವೆಲ್ ಸಹಾಯದಿಂದ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು (Farming) ಮುಂದುವರೆಸಿದ್ದಾರೆ. ಸಾಲಾ ಸೋಲಾ ಮಾಡಿ ಕಷ್ಟಪಟ್ಟು ಬೆಳೆ ಹಾಕಿದರು ಹಲವು ಬಾರಿ ರೈತನಿಗೆ ಹಾಕಿದ ಬಂಡವಾಳವೂ ವಾಪಾಸ್ ಸಿಗುವ ಭರವಸೆಯಿಲ್ಲ. ಆದರು  ಕೋಲಾರದ ಅನ್ನದಾತರು ವಿಧ ವಿಧವಾದ ಬೆಳೆಗಳನ್ನು ಬೆಳೆಯುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಆದರೆ ಹೀಗೆ ಕಷ್ಟ ಪಟ್ಟು ಬೆವರು ಸುರಿಸುವ ರೈತನಿಗೆ ನಕಲಿ ಗೊಬ್ಬರ (Fertilizer) ಮಾರಾಟ ಮಾಡುವ ಮೂಲಕ, ರೈತರನ್ನ ವಂಚನೆ ಮಾಡುವ ಧಂದೆಯೂ ಎಗ್ಗಿಲ್ಲದೆ ನಡೆಯುತ್ತಿದೆ.

ಮುಳಬಾಗಿಲು ಪಟ್ಟಣದ ಕಮಲ್ ಟ್ರೇಸರ್ಸ್ ನ ಗೊಬ್ಬರದ ಅಂಗಡಿಯಲ್ಲಿ ಅರವಿಂದ್ ಎನ್ನುವರ ಬಳಿ, ಮುಳಬಾಗಿಲು ತಾಲೂಕಿನ ರೈತ ರಾಜೇಶ್ ಎನ್ನುವರು, ಡಿ.ಎ.ಪಿ ಗೊಬ್ಬರ ಹಾಗು 20:20 ಗೊಬ್ಬರವನ್ನ ಕಳೆದ ಮೇ ತಿಂಗಳ 2 ರಂದು  ಖರೀದಿ ಮಾಡಿದ್ದರು. ಆದರೆ ತೋಟದಲ್ಲಿನ ಹಿಪ್ಪು ನೇರಳೆ ಬೆಳೆಗೆ ಗೊಬ್ಬರ ಹಾಕಲು ಚೀಲ ತೆರೆದಾಗ, ಮರಳು ಮಿಶ್ರಿತ ಗೊಬ್ಬರ ಇರುವುದು ಬೆಳಕಿಗೆ ಬಂದಿತ್ತು. ಮರಳಿಗೆ ಗೊಬ್ಬರದ ಬಣ್ಣವನ್ನೆ ಹಾಕಿ ಕಲಬೆರಕೆ ಮಾಡಿದ್ದು, ರೈತರನ್ನ ವಂಚಿಸುವ ಕೆಲಸ ಮಾಡಲಾಗ್ತಿದೆ ಎಂದು ರೈತ ರಾಜೇಶ್ ಆಕ್ರೋಶ ವ್ಯಕ್ತಪಡಿಸಿದ್ದರು.

ನಕಲಿ ಗೊಬ್ಬರದ ಮಾಹಿತಿ ತಿಳಿದ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ, ತಮಗಾದ ಮೋಸವನ್ನ ಹೊರಹಾಕಿದ್ದ ರೈತ ರಾಜೇಶ್, ಗೊಬ್ಬರ ಮಾರಾಟ ಮಾಡಿದ ಮಳಿಗೆ ಮಾಲೀಕರನ್ನ ಪ್ರಶ್ನಿಸಿದ್ದಾರೆ.

ಇದಕ್ಕೆ ಹಾರಿಕೆ ಉತ್ತರ ನೀಡಿರುವ ಮಳಿಗೆಯವರು ನಾವು ಗೊಬ್ಬರ ತಯಾರಿಸಿಲ್ಲ, ಕಂಪನಿಯಿಂದ ತರಿಸಿರೋದು, ಅವರಿಗೆ ದೂರು ನೀಡುವುದಾಗಿ ಸಮಜಾಯುಶಿ ನೀಡಿದ್ದಾರೆ. ನಕಲಿ ಗೊಬ್ಬರ ಮಾರಾಟ ಮಾಡಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದು, ರೈತರ ಗೊಬ್ಬರದಲ್ಲು ವಂಚನೆ ಮಾಡಿರುವ ವಿರುದ್ದ ಕ್ರಿಮಿನಲ್ ಕೇಸ್ ದಾಖಲು ಮಾಡುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ರೈತ ರಾಜೇಶ್, ಸಾವಿರಾರು ರೂಪಾಯಿ ಖರ್ಚು ಮಾಡಿ ಗೊಬ್ಬರ ಖರೀದಿ ಮಾಡಿದರು, ನಕಲಿ ಗೊಬ್ಬರ ನೀಡಿದ್ದಾರೆ, ಇದರ ತಯಾರಕರ ವಿರುದ್ದ ಕಠಿಣ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದರು.

ಇದನ್ನೂ ಓದಿ: Cauvery: ಕಾವೇರಿ ನದಿಪಾತ್ರದ ಒತ್ತುವರಿ ಜಾಗ ತೆರವಿಗೆ ನಿರ್ಧಾರ; ಇತ್ತ ಸ್ಥಳೀಯರಿಂದ ಆಕ್ರೋಶ

ಮುಳಬಾಗಿಲು ತಾಲೂಕಿನ ಕೆಲವೆಡೆ ನಕಲಿ ಬಿತ್ತನೆ ಬೀಜ ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದೀಗ ನಕಲಿ ಗೊಬ್ಬರ ಪತ್ತೆಯಾಗಿರುವುದರ ಬಗ್ಗೆ ರೈತ ಮುಖಂಡ ನಾರಾಯಣ ಗೌಡ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದರು.

ಅದರಂತೆ ಎಚ್ಚೆತ್ತುಕೊಂಡಿದ್ದ  ಕೃಷಿ ಇಲಾಖೆಯ ಅಧಿಕಾರಿಗಳು ಗೊಬ್ಬರದ ಮಾದರಿಯನ್ನ ಪರೀಕ್ಷೆಗೆ ಕಳುಹಿಸಿತ್ತು,  ಗೊಬ್ಬರ ನಕಲಿಯೆಂದು ತಿಳಿದುಬಂದಿದ್ದು, ಮುಳಬಾಗಿಲು ಪೊಲೀಸ್ ಠಾಣೆಯಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ದೂರು ನೀಡಿದ್ದರು.

ನಕಲಿ ಗೊಬ್ಬರ ಮಾರಾಟ ಜಾಲ  ಪತ್ತೆ ಹಚ್ಚಿದ ಪೊಲೀಸರು. ಮೂವರ ಬಂಧನ

ಮುಳಬಾಗಿಲು ತಾಲೂಕಿನಲ್ಲಿ ನಕಲಿ ಗೊಬ್ಬರ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ತಲೆಮರೆಸಿಕೊಂಡಿದ್ದ, ಮೂರ್ತಿ ಟ್ರೇಡರ್ಸ್ ಮಾಲೀಕ ಕೃಷ್ಣಮೂರ್ತಿ ಹಾಗೂ ಕಮಲ್ ಟ್ರೇಡರ್ಸ್ ಮಾಲೀಕ ಅರವಿಂದ್ ರನ್ನ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ,  ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಗೊಬ್ಬರ  ವ್ಯಾಪಾರಿ ಕಾಮರಾಜ್ ಎನ್ನುವರನ್ನ ಬಂಧಿಸಿದ್ದು, ಮತ್ತೊಬ್ಬ ಪ್ರಮುಖ ಅರೋಪಿ ಶರವಣಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಇದನ್ನೂ ಓದಿ: Hassan: ಅಮ್ಮ ಬರ್ತಾಳೆ ಅಂತ ಕಾಯ್ತಿದ್ದ ಮಗನಿಗೆ ಶಾಕ್; ಕೆರೆಯಲ್ಲಿ ಮುಳುಗಿಸಿ ಕೊಂದ ಕಳ್ಳ!

ಕಳೆದ 3 ವರ್ಷಗಳಿಂದ ತಮಿಳುನಾಡಿನಿಂದ  ನಕಲಿ ರಸಗೊಬ್ಬರ ಸರಬರಾಜಾಗುತ್ತಿದ್ದು ಎಂದು ತಿಳಿದುಬಂದಿದ್ದು, ಕೆಂಪು ಹಾಗೂ ಜೇಡಿ ಮಣ್ಣು ಮಿಶ್ರಿಣ ಮಾಡಿ ಗೊಬ್ಬರ  ಮಾರಾಟ‌ ಮಾಡುತ್ತಿದ್ದರು ಎಂದು ತಿಳಿದುಬಂದಿದೆ, ತನಿಳುನಾಡಿನ ನಾಮಕಲ್ ಜಿಲ್ಲೆಯ ತಿರಚಂಗುರು ಬಳಿ ಇರುವ ನಕಲಿ ರಸಗೊಬ್ಬರ ತಯಾರಿ ಮಾಡುವ ಕಂಪನಿಗೆ ಬೀಗ ಹಾಕಲಾಗಿದೆ ಎಂದು, ಕೋಲಾರದ  ಎಸ್ಪಿ ಡಿ ದೇವರಾಜ್ ಅವರು ಮಾಹಿತಿ ನೀಡಿದ್ದಾರೆ‌.
Published by:Divya D
First published: