ಮಾಂಡೌಸ್ ಚಂಡಮಾರುತದಿಂದಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಶೀತ ವಾತಾವರಣ ನಿರ್ಮಾಣವಾಗಿದೆ. ಕಳೆದ ನಾಲ್ಕು ದಿನದಿಂದ ಜಿಟಿ ಜಿಟಿ ಮಳೆಯ ಜತೆಗೆ ಶೀತಗಾಳಿ (Cold Wind) ಬೀಸುತ್ತಿದೆ. ಇದರಿಂದ ಜನರ ಆರೋಗ್ಯದಲ್ಲಿ (Health) ಏರುಪೇರು ಕಂಡುಬಂದಿದೆ. ಹೀಗಾಗಿ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ (Health Department Guidelines) ಬಿಡುಗಡೆ ಮಾಡಿದೆ. ಮಕ್ಕಳು, (Children) ವೃದ್ಧರು, ಗರ್ಭಿಣಿಯರು ಹೆಚ್ಚು ಕಾಳಜಿಯಿಂದ ಇರಲು ಸೂಚನೆ ನೀಡಲಾಗಿದೆ.
ಆರೋಗ್ಯ ಇಲಾಖೆ ಮಾರ್ಗಸೂಚಿ
* ಬೆಚ್ಚಗಿನ ನೀರು ಅಥವಾ ಸೂಪ್ ಕುಡಿಯುವುದು
* ಜೀರ್ಣವಾಗುವ ಆಹಾರ ಅಥವಾ ತಾಜಾ ಆಹಾರವನ್ನು ಸೇವಿಸೋದು
* ಮನೆಯ ಹೊರಗೂ ಒಳಗೂ ಸ್ವೆಟರ್ ಹಾಗೂ ಕಿವಿ ಮುಚ್ಚುವ ಟೋಪಿ ಹಾಕಿಕೊಳ್ಳಿ
* ಸ್ನಾನಕ್ಕೆ ಬೆಚ್ಚಗಿನ ನೀರನ್ನೇ ಬಳಸುವುದು ಉತ್ತಮ
* ಅನಗತ್ಯವಾಗಿ ಹೊರಗಿನ ಓಡಾಟ ತಪ್ಪಿಸಿ
* ನೆಗಡಿ, ಕೆಮ್ಮ ಹಾಗೂ ಜ್ವರ ಇರುವವರಿಂದ ಅಂತರ ಕಾಯ್ದುಕೊಳ್ಳಿ
* ಕೈ-ಕಾಲುಗಳನ್ನು ಅಗಾಗ್ಗೆ ಸೋಪು ಬಳಸಿ ತೊಳೆಯಿರಿ
* ಜ್ವರ ಹಾಗೂ ಫ್ಲೂ ಲಕ್ಷಣಗಳಿದ್ದರೆ ವೈದ್ಯರ ಸಲಹೆ ಪಡೆದು ಔಷಧಿ ತೆಗೆದುಕೊಳ್ಳಿ
ಏನು ಮಾಡಬಾರದು..?
* ತಣ್ಣಗಿನ ಪಾನೀಯ, ಐಸ್ ಕ್ರೀಮ್ ಗಳನ್ನು ಸೇವಿಸಬಾರದು
* ಫ್ರಿಡ್ಜ್ ನಲ್ಲಿಟ್ಟ ನೀರು ಕುಡಿಯಬಾರದು
* ವೀಕೆಂಡ್ ಟೂರ್ ಹಾಗೂ ಗಿರಿಧಾಮಗಳಿಗೆ ಹೋಗುವುದನ್ನು ತಪ್ಪಿಸಿ
* ಹೆಚ್ಚಿನ ಮಸಾಲ ಇರೋ ಆಹಾರ & ಜಂಕ್ ಫುಡ್ ಅವಾಯ್ಡ್ ಮಾಡಿಬಿಡಿ
ಡಿಸೆಂಬರ್ 14 ರಂದು ನಮ್ಮ ಕ್ಲಿನಿಕ್ ಓಪನ್
ಆರೋಗ್ಯ ಇಲಾಖೆ ಕಚೇರಿಯಲ್ಲಿ ಸಚಿವ ಸುಧಾಕರ್ (Minister Sudhakar) ತುರ್ತು ಸುದ್ದಿಗೋಷ್ಠಿ ನಡೆಸಿದ್ದರು. ಇದೇ ವೇಳೆ ಮಾತಾಡಿದ ಸಚಿವರು ಡಿಸೆಂಬರ್ 14 ರಂದು ನಮ್ಮ ಕ್ಲಿನಿಕ್ (Namma Clinic) ಲೋಕಾರ್ಪಣೆಗೊಳ್ಳಲಿದೆ ಎಂದು ಹೇಳಿದ್ದಾರೆ. ರಾಜ್ಯಾದ್ಯಂತ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರು ನಮ್ಮ ಕ್ಲಿನಿಕ್ ಯೋಜನೆ ಜಾರಿ ಮಾಡಲಿದ್ದು, ಧಾರವಾಡದಿಂದ ಸಿಎಂ ಬೊಮ್ಮಾಯಿ ಅವರು ನಮ್ಮ ಕ್ಲಿನಿಕ್ಗೆ ಚಾಲನೆ ನೀಡಲಿದ್ದಾರೆ. ಒಟ್ಟು 438 ನಮ್ಮ ಕ್ಲಿನಿಕ್ ಲೋಕಾರ್ಪಣೆಯಾಗಲಿದೆ ಎಂದು ಸಚಿವ ಸುಧಾಕರ್ ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ 150 ನಮ್ಮ ಕ್ಲಿನಿಕ್
20 ಸಾವಿರ ಜನರಿಗೆ ಒಂದು ನಮ್ಮ ಕ್ಲಿನಿಕ್ ಎಂಬ ಅನುಪಾತದಲ್ಲಿ ನಮ್ಮ ಕ್ಲಿನಿಕ್ ಸೇವೆ ಒದಗಿಸಲಿದೆ. ಈ ಕ್ಲಿನಿಕ್ಗಳಲ್ಲಿ 12 ಪ್ರಮುಖ ಸೇವೆಗಳನ್ನು ಒದಗಿಸಲಾಗುತ್ತದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
ಇದನ್ನೂ ಓದಿ: Mysuru: ಬಿಲ್ಡಿಂಗ್ ಬಾಡಿಗೆ ಕೇಳಿದ್ದಕ್ಕೆ ರಂಪಾಟ; KSRTC ಡಿಪೋ ಅಧಿಕಾರಿಗೆ ಮಚ್ಚು ತೋರಿಸಿ ಧಮ್ಕಿ
12 ಪ್ರಮುಖ ಸೇವೆ ಒದಗಿಸಲಿರುವ ನಮ್ಮ ಕ್ಲಿನಿಕ್
ಗರ್ಭಿಣಿ ಹಾರೈಕೆ
ಶಿಶುವಿನ ಹಾರೈಕೆ
ಮಕ್ಕಳ ಸೇವೆ
ಕುಟುಂಬ ಕಲ್ಯಾಣ ಸೇವೆ
ಸಾಂಕ್ರಾಮಿಕ ರೋಗಗಳ ನಿರ್ವಹಣೆ
ಸಂಪೂರ್ಣ ಓಪಿಡಿ ಸೇವೆಗಳು
ಮಧುಮೇಹ, ರಕ್ತದೊತ್ತಡ ಚೆಕ್ ಅಪ್
ಕ್ಯಾನ್ಸರ್ ಸ್ಕ್ರೀನಿಂಗ್ ಸೇವೆ
ಬಾಯಿ ಆರೋಗ್ಯ ಸಮಸ್ಯೆಗಳು ಸೇವೆ
ಕಣ್ಣಿನ ತಪಾಸಣೆ
ಮೂಗು, ಗಂಟಲು ENT ಸೇವೆಗಳು
ಮಾನಸಿಕ ಆರೋಗ್ಯ ಸ್ಕ್ರೀನಿಂಗ್ ಸೇವೆ
ವೃದ್ಧಾಪ್ಯ ಆರೈಕೆ
ತುರ್ತು ವೈದ್ಯಕೀಯ ಸೇವೆ ಸೇರಿದಂತೆ ಒಟ್ಟು 12 ಪ್ರಮುಖ ಆರೋಗ್ಯ ಸೇವೆಗಳು ನಮ್ಮ ಕ್ಲಿನಿಕ್ ನಲ್ಲಿ ಲಭ್ಯವಿರಲಿದ್ದು, ಎಲ್ಲಾ ಸೇವೆಗಳು ಉಚಿತವಾಗಿ ಸಿಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ