ಬೆಂಗಳೂರು(ಮೇ.29): ಶಾಲೆ ಆರಂಭವಾದ್ರೂ (School Open) ಪಠ್ಯಪುಸ್ತಕ ವಿವಾದ ಇನ್ನೂ ಮುಗಿಯುತ್ತಿಲ್ಲ. ಪಠ್ಯಪುಸ್ತಕ (Textbook) ಪ್ರಿಂಟ್ (Print) ಆಗಿದೆ ಅಂತ ಸರ್ಕಾರ (Govt) ಹೇಳುತ್ತೆ. ಆದರೆ ಅಸಲಿಗೆ ಖಾಸಗಿ, ಅನುದಾನಿತ ಶಾಲೆಯಲ್ಲಿ ಬುಕ್ಸ್ ಇನ್ನೂ ಬಂದಿಲ್ಲ. ಸರ್ಕಾರಿ ಶಾಲೆಯಲ್ಲಿ (Govt School) ಅಲ್ಲಲ್ಲಿ ಪೂರೈಕೆಯಾದ್ರೂ ವಿವಾದಿತ ಪುಸ್ತಕ ಇನ್ನೂ ಪೂರೈಕೆಯಾಗಿಲ್ಲ. ಇದು ನ್ಯೂಸ್ 18 ರಿಯಾಲಿಟಿ ಚೆಕ್ ವೇಳೆ ಬಹಿರಂಗವಾದ ಸತ್ಯ. ಪ್ರತಿ ವರುಷ ಶಾಲೆ ಆರಂಭವಾದ ಮೊದಲ ವಾರವೇ ಪಠ್ಯ ಪೂರೈಕೆ ಆಗ್ತಿತ್ತು.ಆದರೆ ಈ ವರುಷ 15 ದಿನ ಮುಂಚಿತವಾಗಿ ಶಾಲೆ ಶುರುವಾದ್ರೂ ನೋ ಬುಕ್ಸ್ ಎಂಬ ಪರಿಸ್ಥಿತಿಯಿದೆ.
ಇದುವರೆಗೆ ಖಾಸಗಿ, ಅನುದಾನಿತ ಶಾಲೆಯಲ್ಲಿ ಪಠ್ಯಪುಸ್ತಕ ಇನ್ನೂ ಪೂರೈಕೆಯಾಗಿಲ್ಲ. ಸರಕಾರಿ ಶಾಲೆಯ ಶೇ.15ರಷ್ಟು ಮಾತ್ರ ಪೂರೈಕೆ ಆಗಿರುವುದು ನ್ಯೂಸ್ 18 ರಿಯಾಲಿಟಿ ಚೆಕ್ ನಲ್ಲಿ ಕಂಡುಬಂದಿದೆ. ಶಿಕ್ಷಣ ಇಲಾಖೆ ದಿವ್ಯ ನಿರ್ಲಕ್ಷ್ಯ ಬಹಿರಂಗಗೊಂಡಿದೆ.
ಮೂರು ತಿಂಗಳ ಹಿಂದೆ ದುಡ್ಡು ಕೊಟ್ಟರೂ ಬುಕ್ಸ್ ಸಿಕ್ಕಿಲ್ಲ
ಖಾಸಗಿ, ಅನುದಾನಿತ, ಸರ್ಕಾರಿ ಶಾಲೆಗೆ ನ್ಯೂಸ್ 18 ಭೇಟಿ ಮಾಡಿದಾಗ ಖಾಸಗಿ, ಅನುದಾನ ರಹಿತ ಶಾಲಾ ಮಕ್ಕಳಿಗೆ ಇದುವರೆಗೆ ಒಂದೇ ಪಠ್ಯವೂ ಸರಬರಾಜಾಗದೇ ಇರುವುದು ಗಮನಕ್ಕೆ ಬಂದಿದೆ.ರಾಜ್ಯದಲ್ಲಿ 70 ಸಾವಿರ ಸರ್ಕಾರಿ, ಅನುದಾನ, ಖಾಸಗಿ ಶಾಲೆಗಳಿವೆ. 97 ಲಕ್ಷ ವಿದ್ಯಾರ್ಥಿಗಳು 1-10ನೇ ತರಗತಿ ನೋಂದಣಿ ಆಗಿದ್ದಾರೆ. ಮೂರು ತಿಂಗಳ ಮುಂಚಿತವಾಗಿಯೇ ಖಾಸಗಿ ಶಾಲೆಗಳು ಬುಕ್ಸ್ ಇಂಡೆಂಟ್ ಹಾಕಿ ದುಡ್ಡು ಕೊಟ್ಟರೂ ಪಠ್ಯಪುಸ್ತಕ ಪೂರೈಸಿಲ್ಲ.
ಜೂನ್ನಲ್ಲಿಯೂ ಬುಕ್ ಸಿಗೋದು ಡೌಟ್
ಇನ್ನು ಅನುದಾನಿತ ಶಾಲೆಯಲ್ಲಿ ಸಹ ಪಠ್ಯಪುಸ್ತಕ ಪೂರೈಕೆ ಮಾಡಿಲ್ಲ. ರಾಜ್ಯದೆಲ್ಲೆಡೆ ಜೂನ್ 1ರಿಂದ ಪಠ್ಯದ ಪಾಠ ಮಾಡಬೇಕಿದೆ. ಆದರೆ ಇನ್ನೊಂದು ತಿಂಗಳು ಕಳೆದರೂ ಖಾಸಗಿ ಶಾಲೆಗಳಿಗೆ ಪಠ್ಯ ಸಿಗೋದು ಡೌಟು. ಸದ್ಯ ಮೇ 15ರಿಂದ ಕಲಿಕಾ ಚೇತರಿಕೆ ಬ್ರಿಡ್ಜ್ ಕೋರ್ಸ್ ಜರುಗುತ್ತಿದೆಯಷ್ಟೆ.
ಇದನ್ನೂ ಓದಿ: Chakravarti Sulibele: ಮಕ್ಕಳು ಜಾಣರು, ಶಾಸಕರು-ಸಂಸದರಿಗಾಗಿ ಪಠ್ಯ ಪುಸ್ತಕ ಪರಿಷ್ಕರಣೆ! ಸೂಲಿಬೆಲೆ ಟಾಂಗ್
ದುಡ್ಡು ಕೊಟ್ಟು ಇಂಡೆಂಟ್ ಹಾಕಿದ್ರೂ ಪಠ್ಯಪುಸ್ತಕ ಪೂರೈಸಿದೆ ಇದರಲ್ಲೂ ರಾಜಕಾರಣ ಮಾಡ್ತಿದೆ ಎಂದು ರುಪ್ಸಾ ಖಾಸಗಿ ಶಾಲಾ ಸಂಘಟನೆಯ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಆಕ್ರೋಶ ವ್ಯಕ್ತಪಡಿಸಿದ್ರೆ, ಇನ್ನೊಂದು ವಾರದಲ್ಲಿ ಬುಕ್ಸ್ ಸಿಗುವ ನಿರಿಕ್ಷೆಯಿದೆ ಎಂದು ಕುಮಾರಪಾರ್ಕ್ ಬಳಿಯ ಅನುದಾನಿತ ಶಾಲೆಯ ಹೆಚ್ಎಂ ಹೇಮಲತಾ ಪ್ರತಿಕ್ರಿಯೆ ನೀಡ್ತಾರೆ.
ವಿವಾದಿತ ಪಠ್ಯಪುಸ್ತಕಗಳು ಇನ್ನೂ ಪೂರೈಕೆಯಾಗಿಲ್ಲ
ಸರ್ಕಾರಿ ಶಾಲೆಗಳಿಗೆ ಭೇಟಿ ವೇಳೆ ಕೆಲ ಶಾಲೆಗಳಿಗೆ ಪಠ್ಯ ಪೂರೈಕೆಯಾಗಿದೆ. ಆದರೆ ವಿವಾದಿತ ಪಠ್ಯಪುಸ್ತಕಗಳು ಇನ್ನೂ ಪೂರೈಕೆಯಾಗಿಲ್ಲ. 10ನೇ ತರಗತಿ ಕನ್ನಡ, ಸಮಾಜ ವಿಜ್ಞಾನ ಪಠ್ಯ ಅಲಭ್ಯ. ಇದರ ಜೊತೆ 8, 9 ಕನ್ನಡ ಹಾಗೂ 8ನೇ ತರಗತಿ ಸಮಾಜ ಪಠ್ಯವೂ ಪೂರೈಕೆ ಆಗಿಲ್ಲ.
ಪರಿಷ್ಕೃತ ಪಠ್ಯವೂ ಬೇಗನೆ ಪೂರೈಕೆ
ಕೇವಲ ಪ್ರೌಢಶಾಲೆಯ ಪಠ್ಯಪುಸ್ತಕ ಮಾತ್ರವಲ್ಲ, ಪ್ರಾಥಮಿಕ ಶಾಲೆಯ ಪಠ್ಯಗಳು ಸಂಪೂರ್ಣ ಪೂರೈಕೆಯಾಗಿಲ್ಲ. ಸರ್ಕಾರಿ ಶಾಲೆಯ 8, 9, 10ನೇ ಕನ್ನಡ ಪಠ್ಯ ಪೂರೈಕೆ ಇಲ್ಲ. 10ನೇ ತರಗತಿ ಇಂಗ್ಲಿಷ್ ಪಠ್ಯ ಪುಸ್ತಕ ಪೂರೈಕೆ ಆಗಿಲ್ಲ. ಶೇ.75ರಷ್ಟು ಪ್ರಿಂಟ್ ಆಗಿದ್ದು ಆಯಾ ಶಾಲೆಗಳಿಗೆ ಪೂರೈಕೆ ಮಾಡಲಾಗುತ್ತದೆ. ಪರಿಷ್ಕೃತ ಪಠ್ಯವೂ ಬೇಗನೆ ಪೂರೈಕೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳುತ್ತಾರೆ.
ಇದನ್ನೂ ಓದಿ: Belagavi Politics: ಲಖನ್ ಜಾರಕಿಹೊಳಿ ಬೆಂಬಲ ನಮಗೆ ಬೇಕಿಲ್ಲ; ಉಮೇಶ್ ಕತ್ತಿ ಖಡಕ್ ಮಾತು
ಪ್ರತಿ ವರುಷ ನವೆಂಬರ್ ನಲ್ಲಿ ಪಠ್ಯಪುಸ್ತಕಕ್ಕೆ ಆರ್ಡರ್ ಕೊಡುತ್ತಿದ್ರು. ಈ ಬಾರಿ ಫೆಬ್ರವರಿಯಲ್ಲಿ ಆರ್ಡರ್ ಕೊಟ್ಟಿದ್ದಾರೆ. 4 ತಿಂಗಳು ತಡವಾಗಿ ಪಠ್ಯಪುಸ್ತಕಕ್ಕೆ ಆರ್ಡರ್ ನೀಡಿದೇ ಇರುವುದು ಕಾಗದೆ ಕೊರತೆ ಪುಸ್ತಕ ಪ್ರಿಂಟ್ ವಿಳಂಬಕ್ಕೆ ಕಾರಣವಾಗಿದೆ. 5 ಕೋಟಿ 65 ಲಕ್ಷದ 25,228 ಸಫ್ಲೆ ಆಗಬೇಕಾದ ಪುಸ್ತಕ ಪುಸ್ತಕ ಸಫ್ಲೆ ಮಾಡಲು 21 ಜನ ಪ್ರಿಂಟರ್ಸ್ ಇದ್ದಾರೆ. ಇಲ್ಲಿಯವರೆಗೂ 72% ಪುಸ್ತಕ ಸಫ್ಲೆ ಆಗಿದೆ. 3 ಕೋಟಿ 70 ಲಕ್ಷ ಪುಸ್ತಕ ಪ್ರಿಂಟ್ ಆಗಿದೆ. ಇನ್ನು 25% ಪುಸ್ತಕ ಪುಸ್ತಕ ಮುದ್ರಣವಾಗಿ ತಲುಪಬೇಕಾಗಿದೆ. ಈ ಬಾರಿ ಪೂರ್ಣ ಪ್ರಮಾಣದಲ್ಲಿ ಮಕ್ಕಳಿಗೆ ಪುಸ್ತಕ ತಲುಪಲು 1 ತಿಂಗಳು ಸಮಯಾವಕಾಶ ಬೇಕಾಗುತ್ತೆ. ಅಲ್ಲಿಯವರೆಗೆ ಮಕ್ಕಳಿಗೆ ಆಟವೇ ಗತಿ!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ