ರಾಮನಗರ: ಇತ್ತೀಚಿಗಷ್ಟೇ ಲೋಕಾರ್ಪಣೆಗೊಂಡ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇನಲ್ಲಿ (Bengaluru Mysuru Expressway) ಪ್ರಯಾಣ ಮಾಡುವ ಸವಾರರೊಬ್ಬರಿಗೆ ಬಿಗ್ ಶಾಕ್ ಎದುರಾಗಿದ್ದು, ಒಮ್ಮೆ ದಶಪಥ ಮಾರ್ಗದಲ್ಲಿ (10- lane) ಸಂಚಾರ ಮಾಡಿದ್ದಕ್ಕೆ ಮೂರು ಮೂರು ಬಾರಿ ಟೋಲ್ (Toll) ಹಣ ಕಟ್ ಆಗಿದೆ. ಮೊಬೈಲ್ಗೆ (Mobile) ಸಂದೇಶ ಬರುತ್ತಿದ್ದಂತೆ ಪ್ರಯಾಣಿಕ ಶಾಕ್ ಆಗಿದ್ದು, ಕೂಡಲೇ ಸಿಬ್ಬಂದಿಯನ್ನು ಪ್ರಶ್ನೆ ಮಾಡಿದ್ದಾರೆ. ಆದರೆ ಹಣ ಕಟ್ ಆಗಿರುವ ಬಗ್ಗೆ ಸಂದೇಶ ತೋರಿಸಿದರು ಟೋಲ್ ಸಿಬ್ಬಂದಿ ತಾಂತ್ರಿಕ ಸಮಸ್ಯೆಯಿಂದ (Technical Problem) ಈ ರೀತಿ ಆಗಿದೆ ಅಂತ ಹಾರಿಕೆ ಉತ್ತರ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಟೋಲ್ ಸಿಬ್ಬಂದಿಯ ಉತ್ತರಕ್ಕೆ ಪ್ರಯಾಣಿಕ ಅಸಮಾಧಾನಗೊಂಡಿದ್ದು, ಸಿಬ್ಬಂದಿಗೆ ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.
ಏನಿದು ಘಟನೆ?
ಮೈಸೂರು ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಸಂಚಾರ ಮಾಡುವ ಪ್ರಯಾಣಿಕರು ತಮ್ಮ ವಾಹನದಲ್ಲಿ ಫಾಸ್ಟ್ಟ್ಯಾಗ್ ಹೊಂದಿದ್ದಾರೆ ಒಮ್ಮೆ ನಿಮ್ಮ ಫಾಸ್ಟ್ಟ್ಯಾಗ್ ಬ್ಯಾಲೆನ್ಸ್ ಚೆಕ್ ಮಾಡಿಕೊಳ್ಳುವುದು ಒಳ್ಳೆಯದು. ಏಕೆಂದರೆ ಒಂದು ಬಾರಿ ಟೋಲ್ ಪಾಸ್ ಆದರೂ ಎರಡು ಮೂರು ಬಾರಿಯ ಹಣ ಕಟ್ ಆಗುತ್ತೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪ್ರಯಾಣಿಕರೊಬ್ಬರು ಟೋಲ್ ಸಂಗ್ರಹಣೆಯ ಮತ್ತೊಂದು ಅವಾಂತರವನ್ನು ಅನಾವರಣ ಮಾಡಿದ್ದಾರೆ.
ಟೆಕ್ನಿಕಲ್ ಸಮಸ್ಯೆ ಅಷ್ಟೇ ಎಂದು ಟೋಲ್ ಸಿಬ್ಬಂದಿ ಉತ್ತರ
ಮಂಡ್ಯದ ಸವಾರರೊಬ್ಬರಿಗೆ ಒಂದು ಬಾರಿ ಪ್ರಯಾಣ ಮಾಡಿದರೆ ಮೂರು ಪಟ್ಟು ಹಣ ಕಟ್ ಆಗಿದೆ. ಇದರಿಂದ ವಾಹನ ಸವಾರ ಹೆದ್ದಾರಿ ಪ್ರಾಧಿಕಾರ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಮೂರು ಬಾರಿ ಹಣ ಕಟ್ ಆಗಿದ್ದನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಇದು ಟೆಕ್ನಿಕಲ್ ಸಮಸ್ಯೆ ಅಷ್ಟೇ ಎಂದು ಟೋಲ್ ಸಿಬ್ಬಂದಿ ಉತ್ತರ ನೀಡಿದ್ದು, ಹಣ ವಾಪಸ್ ನೀಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: PM Modi: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ನಮೋ ಟಾಂಗ್; ಖರ್ಗೆ, ಸಿದ್ದು ಹೆಸರು ಪ್ರಸ್ತಾಪಿಸದೆ ಪ್ರಧಾನಿ ಮೋದಿ ವಾಗ್ದಾಳಿ
ಬಿಡದಿ ಬಳಿಯ ಶೇಷಗಿರಿ ಟೋಲ್ ಫ್ಲಾಜಾದಲ್ಲಿ ಘಟನೆ ನಡೆದಿದ್ದು, ನಾವು ಪ್ರಶ್ನೆ ಮಾಡಿದ್ದಕ್ಕೆ ಹಣ ವಾಪಸ್ ಕೊಡುವುದಾಗಿ ಹೇಳುತ್ತಿದ್ದೀರಿ. ಆದರೆ ಯಾರು ಪ್ರಶ್ನೆ ಮಾಡದಿದ್ದರೆ ಕಟ್ ಆಗಿರುವ ಹಣ ಏನಾಗುತ್ತಿತ್ತು. ಇದೇ ವೇಳೆ ಲಕ್ಷಾಂತರ ಹಣ ಕೊಳ್ಳೆ ಹೊಡೆಯುತ್ತಿದ್ದೀರಾ ಅಂತ ಟೋಲ್ ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ