ನಟ ಸಾರ್ವಭೌಮನಿಗಿಲ್ಲ ಐಟಿ ದಾಳಿಯ ಅಡ್ಡಿ ಎಂದ ಪವನ್​ ಒಡೆಯರ್​: ಪುನೀತ್​ ಹೊಸ ಸಿನಿಮಾಕ್ಕೆ ಬಿತ್ತು ಬ್ರೇಕ್​..!

ನಿನ್ನೆಯಿಂದ ನಡೆಯುತ್ತಿರುವ ಐಟಿ ದಾಳಿಯಿಂದಾಗಿ ಪುನೀತ್​ ಅಭಿಮಾನಿಗಳಿಗೆ ಇಂದು ಒಂದು ಸಿಹಿ ಹಾಗೂ ಒಂದು ಕಹಿ ಸುದ್ದಿ ಸಿಕ್ಕಿದೆ. ಕಹಿ ಸುದ್ದಿ ಎಂದರೆ, ನಿನ್ನೆ ಆರಂಭವಾಗಬೇಕಿದ್ದ ಪುನೀತ್​ ಅವರ ಹೊಸ ಸಿನಿಮಾದ ಮುಹೂರ್ತಕ್ಕೆ ಬ್ರೇಕ್​ ಬಿದ್ದಿದೆ. ಸಿಹಿ ಸುದ್ದಿ ಎಂದರೆ ನಟಸಾರ್ವಭೌಮ ಸಿನಿಮಾದ ಆಡಿಯೋ ಕಾರ್ಯಕ್ರಮ ಯಾವುದೇ ಅಡ್ಡಿಯಿಲ್ಲದೆ ನೆರವೇರಲಿದೆ.

Anitha E | news18
Updated:January 4, 2019, 4:55 PM IST
ನಟ ಸಾರ್ವಭೌಮನಿಗಿಲ್ಲ ಐಟಿ ದಾಳಿಯ ಅಡ್ಡಿ ಎಂದ ಪವನ್​ ಒಡೆಯರ್​: ಪುನೀತ್​ ಹೊಸ ಸಿನಿಮಾಕ್ಕೆ ಬಿತ್ತು ಬ್ರೇಕ್​..!
ಪುನೀತ್​ ರಾಜ್​ಕುಮಾರ್​
  • News18
  • Last Updated: January 4, 2019, 4:55 PM IST
  • Share this:
ಬೆಂಗಳೂರು (ಜ.4): ನಿನ್ನೆ (ಜ.3) ಬೆಳಿಗ್ಗೆಯಿಂದ ಚಂದನವದಲ್ಲಿ ಐಟಿ ದಾಳಿಯ ಮ್ಯಾರಥಾನ್​ ನಡೆಯುತ್ತಿದೆ. ನಟರು ಹಾಗೂ ನಿರ್ಮಾಪಕರ ಮನೆ ಮೇಲೆ ನಡೆದಿರುವ ದಾಳಿಯಿಂದ ಇಡೀ ಸ್ಯಾಂಡಲ್​ವುಡ್​ ಅನ್ನೇ ನಡುಗಿಸಿದೆ.

ನಿನ್ನೆಯಿಂದ ಐಟಿ ಅಧಿಕಾರಿಗಳು ನಟರಾದ ಪುನೀತ್​, ಶಿವರಾಜ್​ಕುಮಾರ್​, ಯಶ್​, ಸುದೀಪ್​, ನಿರ್ಮಾಪಕರಾದ ವಿಜಯ್​ ಕಿರಗಂದೂರ್​ ಸೇರಿದಂತೆ ಹಲವರ ಮನೆಗಳಲ್ಲಿ ಬೀಡು ಬಿಟ್ಟಿದ್ದಾರೆ. ಐಟಿ ದಾಳಿಯಿಂದಲೇ ದೊಡ್ಮನೆ ಹುಡುಗ ಪುನೀತ್​ ಅವರ ಹೊಸ ಚಿತ್ರಕ್ಕೆ ಬ್ರೇಕ್​ ಬಿದ್ದಿದೆ.

ಇದನ್ನೂ ಓದಿ: ಯಶ್​-ಸುದೀಪ್​-ಪುನೀತ್​ರ​ ಹೆಗಲ ಮೇಲೆ ಬಂದೂಕು ಇರಿಸಿ ಹಾರಿಸಲಾಯಿತ ಈ ರಾಜಕೀಯ ಗುಂಡು ...?

ಹೌದು, ಪುನೀತ್ ಒಡೆತನದ ಪಿ. ಆರ್. ಕೆ. ಪ್ರೊಡಕ್ಷನ್ಸ್​ನಲ್ಲಿ ರೆಡಿಯಾಗಬೇಕಿದ್ದ ಹೊಸ ಸಿನಿಮಾದ ಮುಹೂರ್ತ ನಿನ್ನೆ ನಡೆಯಬೇಕಿತ್ತು. ಆದರೆ ಆ ಮೊದಲೇ ಐಟಿ ದಾಳಿಯಾದ ಕಾರಣಕ್ಕೆ ಈ ಕಾರ್ಯಕ್ರಮ ನಡೆಯಲಿಲ್ಲ.

ಈ ಸಿನಿಮಾದಲ್ಲಿ ಡ್ಯಾನಿಷ್ ಸೇಠ್  ಅಭಿನಯಿಸುತ್ತಿದ್ದು,  ಪನ್ನಾಗಭರಣ ನಿರ್ದೇಶನ ಮಾಡುತ್ತಿದ್ದಾರೆ. ಆದರೆ ಇದರ ನಡುವೆಯೇ ಪುನೀತ್​ ಅಭಿನಯಿಸುತ್ತಿರುವ 'ನಟಸಾರ್ವಭೌಮ' ಸಿನಿಮಾ ಕುರಿತ ಮತ್ತೊಂದು ಸುದ್ದಿ ಹೊರ ಬಿದ್ದಿದೆ.

ಐಟಿ ದಾಳಿ‌ ನಡುವೆಯೂ 'ನಟ ಸಾರ್ವಭೌಮ ಆಡಿಯೋ ಬಿಡುಗಡೆಗೆ ಇಲ್ಲ ತೊಂದರೆ

ನಾಳೆ ಹುಬ್ಬಳ್ಳಿಯಲ್ಲಿ 'ನಟ ಸಾರ್ವಭೌಮ' ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ಅಂದುಕೊಂಡಂತೆ ನಾಳೆ (ಜ.5) ಸಂಜೆ 5.30ಕ್ಕೆ  ನಡೆಸಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.

ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​, ಪುನೀತ್ ಭಾಗವಹಸಿಲಿದ್ದಾರೆ. ಈ ಕುರಿತಂತೆ ನಿರ್ದೇಶಕ ಪವನ್​ ಒಡೆಯನ್​ ಮಾತನಾಡಿರುವ ವಿಡಿಯೋ ಇಲ್ಲಿದೆ.

First published: January 4, 2019, 12:25 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading