ಕೊಡಗು: ಕಾವೇರಿ (Cauvery) ತವರು ಕೊಡಗಿನಲ್ಲಿ (Kodagu) ವರುಣ ಭಾರೀ ಅವಾಂತರವನ್ನೇ ಸೃಷ್ಟಿಸಿದ್ದಾನೆ. ಧಾರಾಕಾರ ಮಳೆ (Heavy Rain), ಭೀಕರ ಭೂ ಕುಸಿತ (Landslides), ಜಲಸ್ಫೋಟ (water explosion), ಪ್ರವಾಹಕ್ಕೆ (Flood) ಜಿಲ್ಲೆ ತತ್ತರಿಸಿ ಹೋಗಿದೆ. ಈ ಬಾರಿಯ ಮಳೆಗಾಲ ಜಿಲ್ಲೆಯಲ್ಲಿ ಭಾರೀ ನಷ್ಟಕ್ಕೆ (Heavy Loss) ಕಾರಣವಾಗಿದೆ. ಜೂನ್ (June) ತಿಂಗಳ ಅಂತ್ಯ ಮತ್ತು ಜುಲೈ (July) ತಿಂಗಳಿನಲ್ಲಿ ಕೊಡಗಿಗೆ ಎಂಟ್ರಿ ಕೊಟ್ಟ ವರುಣ ಆರಂಭದಲ್ಲೇ ಅಬ್ಬರಿಸಿ ಬೊಬ್ಬಿರಿದಿದ್ದ. ಜುಲೈ ಮಧ್ಯ ಹಾಗೂ ಅಂತ್ಯಕ್ಕಾದರೂ ವರುಣಾರ್ಭಟ ಕಡಿಮೆಯಾಗಬಹುದು ಅಂದುಕೊಂಡಿದ್ದ ಜನರಿಗೆ ಮೇಲಿಂದ ಮೇಲೆ ಶಾಕ್ ಕೊಟ್ಟ ಮಳೆರಾಯ ಅವಾಂತರವನ್ನೇ ಸೃಷ್ಟಿಸಿದ್ದಾನೆ. ಗುಡುಗು ಸಿಡಿಲಿನ ಆರ್ಭಟದೊಂದಿಗೆ ಆರಂಭವಾದ ಮಳೆ ಭೂಕಂಪನ (Earthquake), ಜಲಸ್ಪೋಟದೊಂದಿಗೆ ಜಿಲ್ಲೆಯ ಜನ ಹೈರಾಣಾಗುವಂತೆ ಮಾಡಿದೆ. ಮಳೆಯ ಪರಿಣಾಮ ಕೊಡಗು ಈಗಾಗಲೇ ಸಾವಿರ ಕೋಟಿಗೂ ಅಧಿಕ ನಷ್ಟ ಅನುಭವಿಸಿದೆ.
ಗೋಡೆ ಕುಸಿದು ಸಾವನ್ನಪ್ಪಿದ್ದ ಮಹಿಳೆ
ಇಲ್ಲಿಯವರೆಗೆ ಕೊಡಗು ಜಿಲ್ಲೆಯಲ್ಲಿ ಮಳೆ ಒಬ್ಬರನ್ನು ಬಲಿ ಪಡೆದಿದೆ. ಸೋಮವಾರಪೇಟೆ ತಾಲ್ಲೂಕಿನ ಶನಿವಾರಸಂತೆ ಸಮೀಪದ ನೇಗಳ್ಳೆಯಲ್ಲಿ ಗೋಡೆ ಕುಸಿದು ವಸಂತಮ್ಮ ಎಂಬುವರು ತೀವ್ರ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಿಸಲಾಗಿತ್ತಾದರು ಆ ಬಳಿಕವೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಹೀಗಾಗಿ ಮಳೆಯಿಂದ ಒಬ್ಬರು ಮೃತಪಟ್ಟಿದ್ದಾರೆ.
33 ಜಾನುವಾರು ಸಾವು, 265 ಮನೆಗಳಿಗೆ ಹಾನಿ
ಜೊತೆಗೆ 33 ಜಾನುವಾರುಗಳು ಸಾವನ್ನಪ್ಪಿದ್ರೆ, 265 ಮನೆಗಳಿಗೆ ಹಾನಿಯಾಗಿದೆ. 17 ಮನೆಗಳಿಗೆ ಪ್ರವಾಹದ ನೀರು ನುಗ್ಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಅವರೆಲ್ಲರಿಗೂ ಸದ್ಯ ತಾತ್ಕಾಲಿಕವಾಗಿ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Damaged Road: ಎರಡು ತಿಂಗಳ ಹಿಂದಷ್ಟೇ ಹಾಕಿದ್ದ ಟಾರ್ ಮಳೆ ಪಾಲು! ಕಳಪೆ ಕಾಮಗಾರಿಗೆ ಜನರ ಆಕ್ರೋಶ
ಜಿಲ್ಲೆಯಾದ್ಯಂತ ಅಪಾರ ಪ್ರಮಾಣದ ಹಾನಿ
ಇನ್ನು ಭಾರೀ ನಷ್ಟ ಅಂದ್ರೆ ಅದು ಜಿಲ್ಲೆಯೊಳಗಿನ 1174.41 ಕಿಲೋ ಮೀಟರ್ ರಸ್ತೆಗೆ ಹಾನಿಯಾಗಿದೆ. ಇದೊಂದೆ ಬರೋಬ್ಬರಿ 264 ಕೋಟಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನುಳಿದಂತೆ 83 ಸೇತುವೆಗಳಿಗೆ ಹಾನಿಯಾಗಿದ್ದು, 21 ಕೋಟಿ ನಷ್ಟವಾಗಿದೆ. ಅಲ್ಲದೆ 28 ಪ್ರಾಥಮಿಕ ಆರೋಗ್ಯ ಕೇಂದ್ರ, 150 ಶಾಲೆಗಳು ಹಾಗೂ 39 ಅಂಗನವಾಡಿ ಕೇಂದ್ರಗಳಿಗೆ ಮಳೆಯಿಂದ ಹಾನಿಯಾಗಿದೆ. ಅಷ್ಟೇ ಅಲ್ಲದೆ ಮಳೆಯ ಆರ್ಭಟಕ್ಕೆ ಜುಲೈನಿಂದ ಇಲ್ಲಿಯವರೆಗೆ 1819 ವಿದ್ಯುತ್ ಕಂಬಗಳು ಮುರಿದುಬಿದ್ದಿದ್ದು, 137 ಟ್ರಾನ್ಸ್‌ಫಾರ್ಮರ್ಸ್‌ಗೆ ಹಾನಿಯಾಗಿದೆ.
ಕಾಪಿ ಬೆಳೆಗಾರರಿಗೆ ಹೊಡೆತ ಕೊಟ್ಟ ವರುಣ
ಇನ್ನು ಭಾರೀ ಮಳೆಯಿಂದಾಗಿ ಕೊಡಗಿನ ಪ್ರಮುಖ ವಾಣಿಜ್ಯ ಬೆಳೆ ಕಾಫಿಗೆ ಭಾರೀ ಪ್ರಮಾಣದ ಹಾನಿಯಾಗಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕಾಫಿ ಕಾಯಿ ಕೊಳೆತು ಉದುರುತ್ತಿದೆ. ಸದ್ಯದ ಅಂದಾಜಿನ ಪ್ರಕಾರ ಜಿಲ್ಲೆಯ ಶೇಕಡಾ 20 ಕೋಟಿಗೂ ಅಧಿಕ ಪ್ರಮಾಣದ ಕಾಫಿ ನಷ್ಟವಾಗಿದೆ ಎನ್ನಲಾಗಿದೆ.
ಇಂದು ಮತ್ತಷ್ಟು ಬಿರುಸು ಪಡೆದ ಮಳೆ
ಇಂದೂ ಕೂಡ ಜಿಲ್ಲೆಯಲ್ಲಿ ಮಳೆ ಮತ್ತಷ್ಟು ತೀವ್ರತೆ ಪಡೆದುಕೊಂಡಿದೆ. ಜಿಲ್ಲೆಯಲ್ಲಿ ಮತ್ತೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದ್ದು, ಜಿಲ್ಲೆಯ ಶಾಲೆಗಳಿಗೆ ಶನಿವಾರ ರಜೆ ಕೂಡ ಘೋಷಿಸಲಾಗಿದೆ.
ಇದನ್ನೂ ಓದಿ: Rain Alert: ಚಿಕ್ಕಮಗಳೂರಲ್ಲಿ ಮೂರು ದಿನ ಭಾರೀ ಮಳೆ; ಒಂದು ದಿನ ರೆಡ್, ಎರಡು ಆರೆಂಜ್ ಅಲರ್ಟ್ ಘೋಷಣೆ
ಒಟ್ನಲ್ಲಿ ಭಾರೀ ಮಳೆಗೆ ಸಾವಿರಾರು ಕೋಟಿ ಮೌಲ್ಯದ ಹಾನಿಗೆ ಕೊಡಗು ತುತ್ತಾಗಿದೆ. ಮಳೆಯ ಆರಂಭದ ಹಂತದಲ್ಲಿ ಹೀಗೆ ಅನಾಹುತ ಸಂಭವಿಸ್ತಿರೋದು ಜಿಲ್ಲೆಯ ಜನರನ್ನ ಮತ್ತಷ್ಟು ಆತಂಕದ ಕೂಪಕ್ಕೆ ತಳ್ಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ