• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Ramesh Jarkiholi CD Case: ಅನಾರೋಗ್ಯದ ಸಮಸ್ಯೆ ಹಿನ್ನಲೆ ಎಸ್​ಐಟಿ ವಿಚಾರಣೆಗೆ ರಮೇಶ್​ ಜಾರಕಿಹೊಳಿ ಗೈರು

Ramesh Jarkiholi CD Case: ಅನಾರೋಗ್ಯದ ಸಮಸ್ಯೆ ಹಿನ್ನಲೆ ಎಸ್​ಐಟಿ ವಿಚಾರಣೆಗೆ ರಮೇಶ್​ ಜಾರಕಿಹೊಳಿ ಗೈರು

ರಮೇಶ್​ ಜಾರಕಿಹೊಳಿ.

ರಮೇಶ್​ ಜಾರಕಿಹೊಳಿ.

ಅನಾರೋಗ್ಯದ ಹಿನ್ನಲೆ ಕೂಡ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರು ಗೋಕಾಕ್​ನಲ್ಲಿಯೇ ಇದ್ದಾರೆ. ಎಲ್ಲೂ ಹೋಗಿಲ್ಲ

  • Share this:

    ಬೆಂಗಳೂರು (ಏ. 2): ಎಸ್​ಐಟಿ ಮುಂದೆ ಇಂದು ವಿಚಾರಣೆಗೆ ಹಾಜರಾಗಬೇಕಿದ್ದ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಗೈರಾಗಿದ್ದಾರೆ. ಈ ಕುರಿತು ಮಾತನಾಡಿರುವ ಅವರ ಪರ ವಕೀಲರಾದ ಶ್ಯಾಮ್​ ಸುಂದರ್​, ರಮೇಶ್​ ಜಾರಕಿಹೊಳಿಗೆ ಆರೋಗ್ಯ ಸಮಸ್ಯೆಯಾಗಿದೆ. ಈ ಹಿನ್ನಲೆ ಇಂದು ವಿಚಾರಣೆಗೆ ಹಾಜರಾಗಿಲ್ಲ. ಈ ಕುರಿತು ಎಸ್​ಐಟಿ ತಂಡದ ಗಮನಕ್ಕೆ ತರಲಾಗಿದ್ದು, ಎರಡು ದಿನ ಕಾಲಾವಕಾಶ ಕೇಳಲಾಗಿದೆ. ಅವರು ಮತ್ತೊಮ್ಮೆ ನೊಟೀಸ್​ ಕೊಡುವುದಾಗಿ ತಿಳಿಸಿದ್ದಾರೆ.ಅವರಿಗೆ ಯಾವುದೇ ಬಂಧನದ  ಭೀತಿ ಇಲ್ಲ. ಅನಾರೋಗ್ಯದ ಹಿನ್ನಲೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಅವರು ಗೋಕಾಕ್​ನಲ್ಲಿಯೇ ಇದ್ದಾರೆ. ಎಲ್ಲೂ ಹೋಗಿಲ್ಲ ಎಂದು ತಿಳಿಸಿದರು. 


    ಈಗಾಗಲೇ ಎರಡು ಬಾರಿ ಎಸ್​ಐಟಿ ಮುಂದೆ ರಮೇಶ್​ ಜಾರಕಿಹೊಳಿ ವಿಚಾರಣೆಗೆ ಹಾಜರಾಗಿದ್ದಾರೆ. ಸಂತ್ರಸ್ತೆ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ ಬಳಿಕ ರಮೇಶ್​ ಜಾರಕಿಹೊಳಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಹೆಚ್ಚಿನ ವಿಚಾರಣೆಗೆ ಇಂದು ಹಾಜರಾಗುವಂತೆ ಅವರಿಗೆ ಎಸ್​ಐಟಿ ಇಂದು ನೋಟಿಸ್​ ನೀಡಿತ್ತು. ಅವರು ಇಂದು ವಿಚಾರಣೆಗೆ ಹಾಜರಾಗುವುದು ಬಹುತೇಕ ಅನುಮಾನ ಎನ್ನಲಾಗಿತ್ತು. ಈಗ ಅವರ ಪರ ವಕೀಲರು ಎಸ್​ಐಟಿ ಮುಂದೆ ಹಾಜರಾಗಿ, ಅವರ ಗೈರಿನ ಬಗ್ಗೆ ಮಾಹಿತಿ ನೀಡಿದ್ದಾರೆ.


    ವಿಚಾರಣೆಗೆ ಹಾಜರಾದ ಸಂತ್ರಸ್ತೆ


    ಕಳೆದೆರಡು ಮೂರು ದಿನಗಳಿಂದ ಎಸ್​ಐಟಿ ವಿಚಾರಣೆಗೆ ಹಾಜರಾಗಿರುವ ಸಂತ್ರಸ್ತ ಯುವತಿ ಇಂದು ಕೂಡ ಎಸ್​ಐಟಿ ವಿಚಾರಣೆ ಹಾಜರಾಗಿದ್ದಾರೆ. ಕಳೆದೆರಡು ದಿನಗಳಿಂದ ಸ್ಥಳ ಮಹಜರು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದ ಸಂತ್ರಸ್ತೆಯನ್ನು ಇಂದು ಅಧಿಕಾರಿಗಳು ಪ್ರಶ್ನಿಸಲಿದ್ದಾರೆ. ಪೊಲೀಸ್​ ಭದ್ರತೆಯೊಂದಿಗೆ ಸಂತ್ರಸ್ತೆಯನ್ನು ಆಡುಗೋಡಿ ಟೆಕ್ನಿಕಲ್ ಸೆಲ್​ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಮಹಜರು ವೇಳೆ ಯುವತಿಯಿಂದ ಪಡೆದ ಹೇಳಿಕೆ ಆಧಾರದ ಮೇಲೆ ಇಂದು ಎಸ್​ಐಟಿ ಅಧಿಕಾರಿಗಳು ಯುವತಿಯ ವಿಚಾರಣೆ ನಡೆಸಲಿದ್ದಾರೆ.


    ಟೆಕ್ನಿಕಲ್ ಸೆಲ್​ಗೆ ತನಿಖಾಧಿಕಾರಿ ಎಸಿಪಿ ಕವಿತಾ, ಎಸ್​ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ, ಇನ್ಸ್‌ಪೆಕ್ಟರ್ ಮಾರುತಿ, ಕುಮಾರಸ್ವಾಮಿ  ಇಂದು ಸುದೀರ್ಘ ವಿಚಾರಣೆ ನಡೆಸಲಿದ್ದಾರೆ

    Published by:Seema R
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು