Exam Season: ವಿದ್ಯಾರ್ಥಿಗಳಿಗೆ ಶುರುವಾಗಿದೆ ಪರೀಕ್ಷೆ ಭಯ: ನಗರದ ದೇವಸ್ಥಾನಗಳಲ್ಲಿ ಶಾಲಾ ಮಕ್ಕಳ ಪೂಜೆ

ಈಗಿನ ಸ್ಪರ್ಧಾತ್ಮಕ ಸಂದರ್ಭಗಳಲ್ಲಿ ಎಷ್ಟು ಅಂಕ ತೆಗೆದರೂ ಅದು ಕಡಿಮೆಯೇ ಎನಿಸುವಂತಿದೆ. ಹಾಗಾಗಿ ಹೆಚ್ಚು ಅಂಕ ಬರಲಿ, ಆತಂಕ ಕಡಿಮೆ ಆಗಲಿ.  ನಮ್ಮ ಪ್ರಯತ್ನದ ಜೊತೆ ದೇವರ ಆಶೀರ್ವಾದ ಕೂಡ ಇರಬೇಕು ಎಂದು ವಿದ್ಯಾರ್ಥಿಗಳು ದೇವರ ಮೊರೆ ಹೋಗುತ್ತಿದ್ದಾರೆ

ಪೂಜೆಯಲ್ಲಿ ನಿರತರಾಗಿರುವ ವಿದ್ಯಾರ್ಥಿ

ಪೂಜೆಯಲ್ಲಿ ನಿರತರಾಗಿರುವ ವಿದ್ಯಾರ್ಥಿ

  • Share this:
ಬೆಂಗಳೂರು (ಫೆ.18): ನಗರದ ಬಹುತೇಕ ದೇವಾಲಗಳು ಈಗ ವಿದ್ಯಾರ್ಥಿಗಳಿಂದ ತುಂಬಿ ಹೋಗಿದೆ. ಇದೇನಿದು ಶಾಲೆ-ಕಾಲೇಜುಗಳಲ್ಲಿರಬೇಕಾದ ವಿದ್ಯಾರ್ಥಿಗಳು ದೇವಾಲಯದಲ್ಲಿ ಪೂಜೆ ಪುನಸ್ಕಾರದಲ್ಲಿ ತೊಡಗಿದ್ದಾರೆ ಎಂಬ ಅಚ್ಚರಿ ಇತರೆ ಭಕ್ತರಲ್ಲಿ ಕಾಡುತ್ತಿದೆ. ಇದಕ್ಕೆ ಕಾರಣ ಪರೀಕ್ಷೆ ಭಯ.

ಶಾಲಾ ಕಾಲೇಜ್​ಗಳಲ್ಲಿ ಪರೀಕ್ಷೆ ಸಮಯ ಆರಂಭವಾಗಿದ್ದು, ಹಾಲ್​ ಟಿಕೆಟ್​ ವಿತರಣೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಲ್ಲಿಯೂ ಕೂಡ ಈ ಪರೀಕ್ಷೆ ಭಯ ಆವರಿಸಿದ್ದು, ಇದಕ್ಕಾಗಿ ದೇವರ ಮೊರೆ ಹೋಗಿದ್ದಾರೆ.

ಕಳೆದ 10 ತಿಂಗಳ ಕಾಲ ಓದಿದ ಪಾಠಗಳು ನೆನಪಿನಲ್ಲಿ ಉಳಿಯಲಿ, ಪರೀಕ್ಷೆ ಭಯ ತಮ್ಮನ್ನು ಕಾಡದೆ ಇರಲಿ, ಮನನ ಮಾಡಿದ ಪಾಠಗಳೇ  ಪರೀಕ್ಷೆ ಬಂದು ಪಾಸಾಗಿ, ಉತ್ತಮ ಅಂಕ ಸಿಗಲಿ ಎಂದು ವಿದ್ಯಾರ್ಥಿಗಳು ಬೇಡಿಕೊಳ್ಳುತ್ತಿದ್ದಾರೆ.

 ಇನ್ನು ವಿದ್ಯಾರ್ಥಿಗಳ ಆಂತಕವನ್ನು ಗಮನಿಸಿದ ದೇವಾಲಗಳು ಇದನ್ನೇ ಬಂಡವಾಳ ಮಾಡಿಕೊಂಡು ವಿಶೇಷ ಪೂಜೆ ಪುನಸ್ಕಾರಗಳನ್ನು ಕೂಡ ಹಮ್ಮಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಕೂಡ ಭಕ್ತಿಯಿಂದ ದೇವರಿಗೆ ನಮಿಸುತ್ತಾ, ನಿಂಬೆ ಹಣ್ಣಿನ ಆರತಿ, ಹೆಜ್ಜೆ ನಮಸ್ಕಾರ, ಕುಂಕುಮಾರ್ಚನೆಯಲ್ಲಿ ತೊಡಗಿದ್ದಾರೆ.



ಇನ್ನು ಈ ಕುರಿತು ಮಾತನಾಡಿರುವ ರಾಜರಾಜೇಶ್ವರಿ ನಗರದ ರಾಘವೇಂದ್ರ ಮಠದ ಅರ್ಚಕರು, ಪರೀಕ್ಷೆ ಹಿನ್ನೆಲೆ ವಿಶೇಷ ಪೂಜೆಗಾಗಿ ಈಗಾಗಲೇ ಸುಮಾರು 115ಕ್ಕೂ ವಿದ್ಯಾರ್ಥಿಗಳು ಹೆಸರು ನೊಂದಾಯಿಸಿದ್ದಾರೆ. ಸಂಜೆ ಪೂಜೆಗೆ ಕುಟುಂಬ ಸಮೇತ ಹಾಜರಾಗಿ ವಿಶೇಷ ಪೂಜೆಯಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕೆಲವು ಪೋಷಕರು ಮಕ್ಕಳ ಭವಿಷ್ಯಕ್ಕಾಗಿ ವಿಶೇಷ ಹೋಮ-ಹವನಗಳನ್ನು ನಡೆಸುತ್ತಿದ್ದು, ಇದಕ್ಕಾಗಿ ಎಷ್ಟಾದರೂ ಖರ್ಚು ಮಾಡಲು ಸಿದ್ಧರಾಗಿದ್ದಾರೆ ಎನ್ನುತ್ತಾರೆ.

ಇದನ್ನು ಓದಿ: ನಾಪತ್ತೆಯಾದ ಮಗು ಸಂಪ್​ನಲ್ಲಿ ಶವವಾಗಿ ಪತ್ತೆ; ಹೆಣ್ಣುಮಗು ಎಂಬ ಕಾರಣಕ್ಕೆ ಹೆತ್ತವರಿಂದಲೇ ಕೃತ್ಯ ಶಂಕೆ

ಈಗಿನ ಸ್ಪರ್ಧಾತ್ಮಕ ಸಂದರ್ಭಗಳಲ್ಲಿ ಎಷ್ಟು ಅಂಕ ತೆಗೆದರೂ ಅದು ಕಡಿಮೆಯೇ ಎನಿಸುವಂತಿದೆ. ಹಾಗಾಗಿ ಹೆಚ್ಚು ಅಂಕ ಬರಲಿ, ಆತಂಕ ಕಡಿಮೆ ಆಗಲಿ. ನಮ್ಮ ಪ್ರಯತ್ನದ ಜೊತೆ ದೇವರ ಆಶೀರ್ವಾದ ಕೂಡ ಇರಬೇಕು ಎಂಬುದು ವಿದ್ಯಾರ್ಥಿಗಳ ಅಂಬೋಣ.
First published: