• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Oxygen shortage : ಕೊರೋನಾದಿಂದಾಗಿ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಆಕ್ಸಿಜನ್​​ಗೆ ಅಭಾವ

Oxygen shortage : ಕೊರೋನಾದಿಂದಾಗಿ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಆಕ್ಸಿಜನ್​​ಗೆ ಅಭಾವ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಉಸಿರಾಟದ ತೊಂದರೆಯಿರುವ ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಪೂರೈಕೆಗೆ ಸರ್ಕಾರ ಮೊದಲ ಆದ್ಯತೆ ನೀಡಿದೆ. ಅಷ್ಟೆ ಅಲ್ಲದೆ ಆಕ್ಸಿಜನ್ ಪೂರೈಕೆ ಕಂಪನಿಗಳು ಸಹ ಆರೋಗ್ಯಕ್ಕೆ ಮನ್ನಣೆ ಕೊಟ್ಟು ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಮಾಡುತ್ತಿವೆ. ಹೀಗಾಗಿ ಕೈಗಾರಿಕೆಗಳಿಗೆ ಆಕ್ಸಿಜನ್ ಪೂರೈಕೆ ಕಡಿಮೆಯಾಗಿದ್ದು, ಆಕ್ಸಿಜನ್ ಅಭಾವ ಎದುರಾಗಿದೆ

ಮುಂದೆ ಓದಿ ...
  • Share this:

ನೆಲಮಂಗಲ(ಅಕ್ಟೋಬರ್​. 17): ಒಂದು ಕಾಲದಲ್ಲಿ ಹಳ್ಳಿಗಾಡುಗಳಿಂದ ಉದ್ಯೋಗವನ್ನ ಅರಸಿ ಬೆಂಗಳೂರಿಗೆ ಬಂದ ಜನ ಮೊದಲು ಕೆಲಸಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದದ್ದು ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶವನ್ನ, ಲಕ್ಷಾಂತರ ಜನ ಇದೇ ಪೀಣ್ಯಾ ಕೈಗಾರಿಕಾ ಪ್ರದೇಶದಿಂದ ತಮ್ಮ ಬದುಕು ಕಟ್ಟಿಕೊಂಡು ನೆಮ್ಮದಿ ಜೀವನ ನಡೆಸುತಿದ್ದರು. ಆದರೆ, ಈ ಕೊರೋನಾ ರೋಗ ಎಲ್ಲರ ಬದುಕನ್ನ ಬೀದಿಗೆ ತಳ್ಳಿಬಿಟ್ಟಿದೆ. ಪೀಣ್ಯಾ ಕೈಗಾರಿಕ ಪ್ರದೇಶದಲ್ಲಿ ಅದೆಷ್ಟೋ ಕಾರ್ಖಾನೆಗಳು ನಷ್ಟಕ್ಕೆ ಸಿಲುಕಿ, ಕಾರ್ಮಿಕರು ಮಾಲಿಕರೆನ್ನದೇ ಎಲ್ಲರೂ ಬೀದಿಗೆ ಬಿದ್ದಿದ್ದಾರೆ. ಈ ನಡುವೆ ಕೊಂಚ ಲಾಭದಲ್ಲಿದ್ದ ಹಾಗೂ ತಮ್ಮ ಅಸ್ತಿತ್ವ ಉಳಿಸಿಕೊಂಡಿದ್ದ ಕಲೆ ಕಾರ್ಖಾನೆಗಳಿಗೆ ಸದ್ಯ ಸಂಕಷ್ಟ ಎದುರಾಗಿದೆ. ಕೊರೋನಾದಿಂದ ಕಾರ್ಖಾನೆಗಳಿಗೆ ಪೂರೈಕೆಯಾಗಿದ್ದ ಆಕ್ಸಿಜನ್ ಗೆ ಅಭಾವ ಉಂಟಾಗಿದ್ದು, ಕೆಲ ಕಾರ್ಖಾನೆಗಳಂತು ಕೆಲಸ ಮಾಡುವುದು ಹೇಗೆ ಎಂದು ಯೋಚಿಸುವ ಪರಿಸ್ಥತಿ ಎದುರಾಗಿದೆ.


ಉಸಿರಾಟದ ತೊಂದರೆಯಿರುವ ಕೊರೋನಾ ಸೋಂಕಿತರಿಗೆ ಆಕ್ಸಿಜನ್ ಪೂರೈಕೆಗೆ ಸರ್ಕಾರ ಮೊದಲ ಆದ್ಯತೆ ನೀಡಿದೆ. ಅಷ್ಟೆ ಅಲ್ಲದೆ ಆಕ್ಸಿಜನ್ ಪೂರೈಕೆ ಕಂಪನಿಗಳು ಸಹ ಆರೋಗ್ಯಕ್ಕೆ ಮನ್ನಣೆ ಕೊಟ್ಟು ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಮಾಡುತ್ತಿವೆ. ಹೀಗಾಗಿ ಕೈಗಾರಿಕೆಗಳಿಗೆ ಆಕ್ಸಿಜನ್ ಪೂರೈಕೆ ಕಡಿಮೆಯಾಗಿದ್ದು, ಆಕ್ಸಿಜನ್ ಅಭಾವ ಎದುರಾಗಿದೆ. ಈ ಹಿಂದೆ ಒಂದು ಕೆ ಜಿ 12 ರಿಂದ 14 ರೂಪಾಯಿ ಇದ್ದ ಆಕ್ಸಿಜನ್ ಬೆಲೆ ಸದ್ಯ 18 ರಿಂದ 20 ರೂಪಾಯಿ ಆಗಿದೆ. ಈ ರೀತಿ ಆಕ್ಸಿಜನ್ ಬೆಲೆ ಹೆಚ್ಚಳವಾದರೆ ಬಹುಪಾಲು ಕಾರ್ಖಾನೆಗಳು ನಷ್ಟಕ್ಕೆ ಸಿಲುಕಲಿವೆ.


ಕೈಗಾರಿಕೋತ್ಪನ್ನಗಳ ಉತ್ಪಾದನಾ ವೆಚ್ಚ ದುಪ್ಪಟ್ಟು ಆಗಲಿದ್ದು, ಗ್ರಾಹಕರು ಖರೀದಿಸಲು ಮುಂದಾಗುವುದಿಲ್ಲ. ಉತ್ಪನ್ನಗಳು ಮಾರಾಟವಾಗದೆ ಕೈಗಾರಿಕೆಗಳು ನಷ್ಟಕ್ಕೆ ಸಿಲುಕಲಿವೆ. ಅಷ್ಟ ಅಲ್ಲದೆ ಈ ಹಿಂದೆ ಆರ್ಡರ್ ಮಾಡಿದ ಕೆಲ ಗಂಟೆಗಳಲ್ಲಿ ಆಕ್ಸಿಜನ್ ತಲುಪುತ್ತಿತ್ತು. ಆದರೆ, ಸದ್ಯ ದಿನಗಟ್ಟಲೆ ಕಾಯಬೇಕು ಎಂದು ಕೈಗಾರಿಕೋದ್ಯಮಿಯೊಬ್ಬರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.


ಇದನ್ನೂ ಓದಿ : ಪ್ರವಾಹ ತುರ್ತು ಪರಿಹಾರ ಕಾರ್ಯಕ್ಕೆ 85 ಕೋಟಿ ರೂ ಬಿಡುಗಡೆ; ಸಂತ್ರಸ್ತರ ಅಗತ್ಯ ಸೇವೆಗೆ ಸಿಎಂ ಸೂಚನೆ


ಕೈಗಾರಿಕೆಗಳು ಜೀವ ಹಾಗೂ ಜೀವನ ಪ್ರಶ್ನೆ ಆಗಿದ್ದು ಕೈಗಾರಿಕೆಗಳ ಜೀವ ಇದ್ರೆ ನಮ್ಮ ಜೀವನ ನಡೆಯುತ್ತೆ. ಕಟಿಂಗ್, ಟೂಲಿಂಗ್, ಲೇಜರ್ ಕಟಿಂಗ್ ಗೆ ಆಕ್ಸಿಜನ್ ಬೇಕು ಬೇಕು, ಇಲ್ಲದೆ ಹೋದರೆ ಕೈಗಾರಿಕೆ ಇಲ್ಲ. ಬೇರೆ ಮೆಡಿಕಲ್ ಆಕ್ಸಿಜನ್ ಜನರೇಟ್ ಮಾಡಬೇಕು. ಕೈಗಾರಿಕೆ ವಲಯಕ್ಕೆ ಸೀಮಿತವಾಗಿರುವ ಆಕ್ಸಿಜನ್ ಬಳಸಿದ್ರೆ ಕೈಗಾರಿಕೆಗಳಿಗೆ ತೊಂದರೆ ಆಗುತ್ತೆ, ಈಗಾಗಿ ಸರ್ಕಾರ ಆಕ್ಸಿಜನ್ ಉತ್ಪಾದನೆಗೆ ಹೆಚ್ಚು ಮಹತ್ವ ನೀಡುವುದರೊಂದಿಗೆ ಕೈಗಾರಿಕೆಗಳಿಗೆ ಆಕ್ಸಿಜನ್ ಪೂರೈಕೆ ಮಾಡಲು ಅನುವು ಮಾಡಬೇಕು ಎಂದು ಕೈಗಾರಿಕೋದ್ಯಮಿಗಳು ಮನವಿ ಮಾಡಿಕೊಂಡಿದ್ದಾರೆ.


ಒಟ್ಟಾರೆ ಕೊರೋನಾ ಎಲ್ಲಾ ಉದ್ಯಮಗಳು ಸೇರಿದಂತೆ ಸಾಮಾನ್ಯ ಜನರ ಜೀವನದ ಮೇಲೂ ದುಷ್ಪರಿಣಾಮ ಬೀರಿದ್ದು, ಕೈಗಾರಿಕೆಗಳ ಜೀವ ಉಳಿದರೆ ಜನರ ಜೀವನ ನಡೆಯಲಿದೆ ಎನ್ನುವಂತಾಗಿದೆ. ಸರ್ಕಾರ ಕೈಗಾರಿಕೆ ಹಾಗೂ ಆಸ್ಪತ್ರೆಗಳಿಗೆ ಪ್ರತ್ಯೇಕ ಆಕ್ಸಿಜನ್ ಉತ್ಪಾದನೆ ಹಾಗೂ ಪೂರೈಕೆ ಮಾಡಲು ಮುಂದಾಗಿ ಜೀವ ಹಾಗೂ ಜೀವನ ಉಳಿಸಲು ಮುಂದಾಗಬೇಕಿದೆ.

Published by:G Hareeshkumar
First published: