• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Ramanagara: ಜಿಲ್ಲೆಯಲ್ಲಿ ಪೌರಕಾರ್ಮಿಕರ ಪ್ರತಿಭಟನೆ ಬಿಸಿ! ತುಂಬಿತುಳುಕುತ್ತಿರುವ ಕಸದ ರಾಶಿ

Ramanagara: ಜಿಲ್ಲೆಯಲ್ಲಿ ಪೌರಕಾರ್ಮಿಕರ ಪ್ರತಿಭಟನೆ ಬಿಸಿ! ತುಂಬಿತುಳುಕುತ್ತಿರುವ ಕಸದ ರಾಶಿ

ಅಲ್ಲಲ್ಲಿ ಕಸದ ರಾಶಿ ಬಿದ್ದಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತೆ ಆಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರ ಕಾರ್ಮಿಕರೂ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಸಿಬ್ಬಂದಿ ಕಳೆದ ನಾಲ್ಕು ದಿನದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಈಗ ಕೈಬಿಟ್ಟಿದ್ದಾರೆ.

ಅಲ್ಲಲ್ಲಿ ಕಸದ ರಾಶಿ ಬಿದ್ದಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತೆ ಆಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರ ಕಾರ್ಮಿಕರೂ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಸಿಬ್ಬಂದಿ ಕಳೆದ ನಾಲ್ಕು ದಿನದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಈಗ ಕೈಬಿಟ್ಟಿದ್ದಾರೆ.

ಅಲ್ಲಲ್ಲಿ ಕಸದ ರಾಶಿ ಬಿದ್ದಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತೆ ಆಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರ ಕಾರ್ಮಿಕರೂ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಸಿಬ್ಬಂದಿ ಕಳೆದ ನಾಲ್ಕು ದಿನದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಈಗ ಕೈಬಿಟ್ಟಿದ್ದಾರೆ.

ಮುಂದೆ ಓದಿ ...
  • Share this:

ರಾಮನಗರ(ಜು.07): ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಹೊರ ಗುತ್ತಿಗೆ ಪೌರ ಕಾರ್ಮಿಕರ ಮುಷ್ಕರದಿಂದಾಗಿ ಸ್ವಚ್ಛತಾ ಸೇವೆಯಲ್ಲಿ ವ್ಯತ್ಯಯ ಆಗಿದೆ. ಅಲ್ಲಲ್ಲಿ ಕಸದ ರಾಶಿ ಬಿದ್ದಿದ್ದು, ಸಾರ್ವಜನಿಕರು ತೊಂದರೆ ಅನುಭವಿಸುವಂತೆ ಆಗಿದೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪೌರ ಕಾರ್ಮಿಕರೂ ಸೇರಿದಂತೆ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ಸಿಬ್ಬಂದಿ ಕಳೆದ ನಾಲ್ಕು ದಿನದಿಂದ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಈಗ ಕೈಬಿಟ್ಟಿದ್ದಾರೆ. ಕೇವಲ ಕಾಯಂ ಪೌರಕಾರ್ಮಿಕರಷ್ಟೇ ಸ್ವಚ್ಛತಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಕಸ ಸಂಗ್ರಹಣೆ ಮತ್ತು ವಿಲೇವಾರಿಯಲ್ಲಿ ವ್ಯತ್ಯಯವಾಗಿದೆ.


ಕಸ ವಿಲೇವಾರಿಯಲ್ಲಿ ಸಮಸ್ಯೆ


ರಾಮನಗರ ನಗರಸಭೆ ಒಂದರಲ್ಲಿಯೇ ನೇರ ಪಾವತಿ ವ್ಯವಸ್ಥೆ ಅಡಿ ನೇಮಿಸಿಕೊಳ್ಳಲಾದ 70 ಪೌರ ಕಾರ್ಮಿಕರು ಇದ್ದಾರೆ. ಇವರಲ್ಲದೆ ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿಯ 25 ಹಾಗೂ ಕಿಯೋನಿಕ್ಸ್ ಮೂಲಕ ನೇಮಿಸಿಕೊಳ್ಳಲಾದ 28 ಆಟೊ ಚಾಲಕರೂ ಕೈ ಜೋಡಿಸಿದ್ದರು. ಇದರಿಂದಾಗಿ ಮನೆಮನೆಯಿಂದ ಕಸ ಸಂಗ್ರಹಣೆ ಕಾರ್ಯವೂ ಸರಾಗವಾಗಿ ನಡೆದಿಲ್ಲ. ಕಳೆದ ಒಂದು ವಾರದಿಂದಲೂ ಕಸ ವಿಲೇವಾರಿಯಲ್ಲಿ ಸಮಸ್ಯೆ ಉಂಟಾಗಿದೆ.


ಕಸದ ತೊಟ್ಟಿ ಇದ್ದಲ್ಲಿ ಕಸ ಎಸೆಯುತ್ತಿರುವ ಜನ


'ಮನೆಮನೆಯಿಂದ ಕಸ ಸಂಗ್ರಹಣೆ ಸರಿಯಾದ ರೀತಿಯಲ್ಲಿ ನಡೆದಿದೆ. ಎಷ್ಟು ದಿನ ಎಂದು ಮನೆಯಲ್ಲಿ ಕಸ ಇಟ್ಟುಕೊಳ್ಳುವುದು. ಹೀಗಾಗಿ ಅನಿವಾರ್ಯವಾಗಿ ಕಸದ ತೊಟ್ಟಿಗಳು ಇರುವ ಕಡೆಗಳಲ್ಲಿ ಚೆಲ್ಲಿ ಬರುತ್ತಿದ್ದೇವೆ' ಎಂದು ನಗರ ನಿವಾಸಿಗಳು ತಿಳಿಸಿದ್ದಾರೆ.


ಉಳಿದೆಡೆಯೂ ಇದೇ ಸ್ಥಿತಿ:


ಜಿಲ್ಲೆಯ ಉಳಿದ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಅಲ್ಲಿಯೂ ಹೆಚ್ಚಿನವರು ಗುತ್ತಿಗೆ ಸಿಬ್ಬಂದಿ ಇದ್ದು, ಅವರೆಲ್ಲ ಮುಷ್ಕರದಲ್ಲಿ ಪಾಲ್ಗೊಂಡಿದ್ದ ಕಾರಣ ಸ್ವಚ್ಛತೆ ಸೇರಿದಂತೆ ವಿವಿಧ ಸೇವೆಗಳಲ್ಲಿ ವ್ಯತ್ಯಯ ಆಗಿದೆ.


ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ತ್ಯಾಜ್ಯದ ಗುಡ್ಡ


ಬಿಡದಿ ಪುರಸಭೆ ವ್ಯಾಪ್ತಿಯ ಅಲ್ಲಲ್ಲಿ ಕಸದ ರಾಶಿ ಬಿದ್ದಿದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ತ್ಯಾಜ್ಯದ ಗುಡ್ಡ ಕಾಣತೊಡಗಿದೆ. ಇದರಿಂದ ಜನರು ಮೂಗು ಮುಚ್ಚಿಕೊಂಡು ಓಡಾಡುವಂತೆ ಆಗಿದೆ. ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದು, ಅವು ಕಸವನ್ನು ಎಳೆದಾಟುವ ದೃಶ್ಯ ಸಾಮಾನ್ಯವಾಗಿದೆ.


ಸಾರ್ವಜನಿಕರ ಓಡಾಟಕ್ಕೆ ತೊಂದರೆ


ಕಸ ವಿಲೇವಾರಿ ಸಮಸ್ಯೆ ಎದುರಾಗಿದೆ. ಸಾರ್ವಜನಿಕರು ರಾಶಿ ರಾಶಿ ಕಸ ಗುಡ್ಡೆಯನ್ನು ಮುಖ್ಯ ರಸ್ತೆಯಲ್ಲಿ ಬಿದ್ದಿದ್ದು, ಸಾರ್ವಜನಿಕರ ಓಡಾಟಕ್ಕೆ ವೃದ್ಧರು, ಮಕ್ಕಳು ತೊಂದರೆಯಾಗಿದೆ. ಇದೇ ರೀತಿ ಮುಂದುವರೆದರೆ ಜನ ಸಾಮಾನ್ಯರು ರಸ್ತೆಯಲ್ಲಿ ಓಡಾಡುವುದು ತುಂಬ ಕಷ್ಟಕರವಾಗುತ್ತದೆ. ಕಸದ ರಾಶಿಯನ್ನು ನಾಯಿಗಳ ಹಾವಳಿಯಿಂದ ರಸ್ತೆ ತುಂಬಾ ಎಳೆದಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.


ಇದನ್ನೂ ಓದಿ: Dogs Love: ನಾಯಿಗೆ ಇದ್ದ ನಿಯತ್ತು ಮನುಷ್ಯನಿಗೆ ಇಲ್ಲವಾಯಿತೇ? ಇದು ಚಾರ್ಲಿ ಅಲ್ಲ, ಗುರೂಜಿಯ ಪ್ರಿನ್ಸ್!


'ಸರ್ಕಾರದ ಅನುಮತಿಯಿಲ್ಲದೆ ನಾವು ಯಾವುದೇ ಕಾರ್ಮಿಕರನ್ನು ನೇಮಿಸಿಕೊಳ್ಳಲು ಅವಕಾಶ ಇಲ್ಲ. ಇದು ಮುಷ್ಕರ ನಿರತರಿಗೂ ಗೊತ್ತಿದೆ. ಅವರ ಮನವೊಲಿಸುವ ಪ್ರಯತ್ನ ನಡೆದಿದೆ' ಎಂದು ಸಂಬಂಧಿಸಿದ ನಗರಸಭೆ - ಪುರಸಭೆ ಅಧಿಕಾರಿಗಳ ವರ್ಗ ತಿಳಿಸಿದ್ದಾರೆ.


ಕನಕಪುರದಲ್ಲೂ ಅದೇ ಕಥೆ:


ಇಲ್ಲಿನ ನಗರಸಭೆ ಗುತ್ತಿಗೆ ಪೌರ ಕಾರ್ಮಿಕರ ಪ್ರತಿಭಟನೆಯಿಂದ ನಗರದಲ್ಲಿ ಮನೆ ಮನೆ ಕಸ ಸಂಗ್ರಹಣೆಗೆ ಮಾತ್ರ ಹೆಚ್ಚು ತೊಂದರೆ ಆಗಿದ್ದು ಉಳಿದಂತೆ ಬೇರೆ ಕೆಲಸಗಳನ್ನು ಕಾಯಂ ಪೌರ ಕಾರ್ಮಿಕರು, ನೌಕರರು, ಸಿಬ್ಬಂದಿಗಳಿಂದ ನಿರ್ವಹಣೆ ಮಾಡಲಾಗಿದೆ.


ಇದನ್ನೂ ಓದಿ: Karnataka Weather Report: ಮೂರು ಜಿಲ್ಲೆಗೆ ರೆಡ್ ಅಲರ್ಟ್, ನಾಲ್ಕು ಜಿಲ್ಲೆಗೆ ಆರೆಂಜ್; ರಜೆ ವಿಸ್ತರಣೆ


ಈಗ ಕಾರ್ಮಿಕರು ತಮ್ಮ ಹೋರಾಟವನ್ನ ಮೊಟಕು ಮಾಡಿದ್ದರೂ ಸಹ ನಗರದಲ್ಲಿ ತುಂಬಿರುವ ಕಸವನ್ನ ತೆರವು ಮಾಡಲು ಇನ್ನು 2 ದಿನವಾದರೂ ಬೇಕಾಗಿದೆ. ಈಗ ಜಿಲ್ಲೆಯಲ್ಲಿ ಮಳೆಯ ಅಬ್ಬರವೂ ಇದ್ದು ಜನಸಾಮಾನ್ಯರು ಮೂಗುಮುಚ್ಚಿಕೊಂಡು ರಸ್ತೆಯಲ್ಲಿ ಓಡಾಡುವ ದುಸ್ಥಿತಿ ನಿರ್ಮಾಣ ಆಗಿದೆ. ಚನ್ನಪಟ್ಟಣದ ಎಂ.ಜಿ.ರಸ್ತೆ, ಅಂಚೆಕಚೇರಿ ರಸ್ತೆ, ಚರ್ಚ್ ರಸ್ತೆ, ಕೋಟೆ, ಹಳೇ ಬಸ್ ನಿಲ್ಧಾಣದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ.

Published by:Divya D
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು