ಬೆಂಗಳೂರು; ನಾಳೆಯಿಂದ ರಾಜ್ಯದಲ್ಲಿ ಡ್ರೈರನ್ ಅರಂಭವಾಗಲಿದ್ದು, ರಾಜ್ಯದ 5 ಜಿಲ್ಲೆಗಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆ. ಬೆಂಗಳೂರು, ಬೆಳಗಾವಿ, ಕಲಬುರಗಿ, ಮೈಸೂರು ಶಿವಮೊಗ್ಗದಲ್ಲಿ ಡ್ರೈರನ್ ನಡೆಯಲಿದೆ. ಈಗಾಗಲೇ 6.22 ಲಕ್ಷ ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಆರೋಗ್ಯ ಇಲಾಖೆ ಲಸಿಕೆ ವಿಭಾಗದ ಉಪ ನಿರ್ದೇಶಕಿ ಡಾ.ರಜನಿ ಮಾಹಿತಿ ನೀಡಿದರು.
ಬೇರೆ ರಾಜ್ಯದಲ್ಲಿ ಈಗಾಗಲೇ ಡ್ರೈರನ್ ಆರಂಭವಾಗಿದೆ. ಅದೇ ರೀತಿ ನಾಳೆಯಿಂದ ಇಲ್ಲಿ ಶುರು ಮಾಡಲಾಗ್ತಿದೆ. ತಾಲೂಕು, ಜಿಲ್ಲಾಸ್ಪತ್ರೆಗಳಲ್ಲಿ ನಡೆಯಲಿದೆ. ಕೋವಿಡ್ ಹೇಗೆ ವ್ಯಾಕ್ಸಿನ್ ಬಳಕೆಯಾಗಲಿದೆ ಅನ್ನೋದರ ಕುರಿತು ಮಾಹಿತಿ ಸಿಗಲಿದೆ. ಮೂರು ಸೆಷನ್ ಸೈಟ್ ಮಾಡಲಾಗಿದೆ. ಮೂರು ರೂಂ ಇರಬೇಕು. ಈಗಾಗಲೇ ಆರೋಗ್ಯ ಸಿಬ್ಬಂದಿ ನೋಂದಾಯಿಸಿಕೊಂಡಿದ್ದಾರೆ. ಅವರನ್ನು ಕರೆಸಿಕೊಂಡು ನಾಳೆ ವ್ಯಾಕ್ಸಿನ್ ಬಗ್ಗೆ ಹಾಗೂ ಬರುವ ಸಮಯದ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಅವರನ್ನು ವ್ಯಾಕ್ಸಿನೇಷನ್ ಪ್ರೊಸೀಜರ್ಗೆ ಕಳಿಸಲಾಗುತ್ತೆ. ಆದರೆ ನಾಳೆ ಯಾವುದೇ ವ್ಯಾಕ್ಸಿನ್ ನೀಡುವುದಿಲ್ಲ. ಎಲ್ಲಾ ಸೆಷನ್ ಸೈಟ್ನಲ್ಲಿ 5 ಜನರು ಇರಬೇಕು. ವ್ಯಾಕ್ಸಿನೇಷನ್ ಆದ್ಮೇಲೆ ಕೋವಿಡ್ ಪೋರ್ಟನ್ನಲ್ಲಿ ರೆಕಾರ್ಡ್ ಆಗಲಿದೆ. ನಮ್ಮ ಸಿಬ್ಬಂದಿ, ವ್ಯಾಕ್ಸಿನ್ ಕಿಟ್ ಎಲ್ಲಾ ರೆಡಿ ಇರುತ್ತೆ ಎಂದು ಮಾಹಿತಿ ನೀಡಿದರು.
ಇದನ್ನು ಓದಿ: ಅತ್ಯುತ್ತಮ ಆರೋಗ್ಯ ಸೇವೆ ನೀಡಲು ಹೆಲ್ತ್ ವಿಶನ್ ಗ್ರೂಪ್ ರಚನೆ; ಸಚಿವ ಡಾ.ಕೆ. ಸುಧಾಕರ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ