ಮದ್ಯದ ಅಮಲಿನಲ್ಲಿ ಮರ್ಮಾಂಗ ಕತ್ತರಿಸಿಕೊಂಡ ಭೂಪ!


Updated:September 2, 2018, 5:40 PM IST
ಮದ್ಯದ ಅಮಲಿನಲ್ಲಿ ಮರ್ಮಾಂಗ ಕತ್ತರಿಸಿಕೊಂಡ ಭೂಪ!
(ಪ್ರಾತಿನಿಧಿಕ ಚಿತ್ರ)

Updated: September 2, 2018, 5:40 PM IST
ಮಹೇಶ ವಿ. ಶಟಗಾರ, ನ್ಯೂಸ್ 18 ಕನ್ನಡ

ವಿಜಯಪುರ(ಸ.02): ಕುಡಿದ ಅಮಲಿನಲ್ಲಿ ಭೂಪನೊಬ್ಬ ತನ್ನ ಮರ್ಮಾಂಗ ಕತ್ತರಸಿಕೊಂಡ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಇವಣಗಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿ ಇಂದು ಬೆಳಗ್ಗೆ 11 ಗಂಟೆಗೆ ಈ ಘಟನೆ ನಡೆದಿದೆ. 40 ವರ್ಷದ ರಾಜಕುಮಾರ ಕುಂಬಾರ ತನ್ನ ಮರ್ಮಾಂಗ ಬ್ಲೇಡ್ ಬಳಸಿ ಕತ್ತರಿಸಿಕೊಂಡಿದ್ದಾನೆ.

ಗಾಯಾಳುವಿಗೆ ವಿಜಯಪುರದ ಖಾಸಗಿ ಆಸ್ಪತ್ರೆಗೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದೆ. ಈಗ ಈ ಮಹಾಷಯ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾನೆ. ಕೂಲಿ ಕೆಲಸ ಮಾಡುತ್ತಿದ್ದ ರಾಜಕುಮಾರ ಕುಂಬಾರ ಮಾಡಿಕೊಂಡಿರುವ ಈ ಯಡವಟ್ಟು ಈಗ ಸಾಕಷ್ಟು ಚರ್ಚೆಗ ಗ್ರಾಸ ಒದಗಿಸಿದೆ.

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
First published:September 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...