ಮಂಗಳೂರು (ಡಿ.7): ಕುಡಿದು ತೂರಾಡುತ್ತಿದ್ದವನಿಗೆ 10 ಲಕ್ಷ ರೂಪಾಯಿ ಸಿಕ್ಕಿದೆ. ಪ್ರಕರಣದ ಕುರಿತು ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ( Mangaluru Police Commissioner N. Shashikumar) ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಶಿವರಾಜ್ (Shivaraj) ಎಂಬಾತ ಗಾಡಿ ಕ್ಲೀನ್ ಹಾಗೂ ಮೆಕಾನಿಕ್ ಕೆಲಸ ಮಾಡಿಕೊಂಡಿದ್ದ. ನಿತ್ಯ ಕುಡಿದು ತೂರಾಡಿಕೊಂಡು ಮನೆಗೆ ಹೋಗಿ ಮಲಗುತ್ತಿದ್ದ. ನ 26 ರಂದು ಕುಡಿದು ಹೋಗ್ತಿದ್ದ ಶಿವರಾಜ್ಗೆ ರಸ್ತೆಯಲ್ಲಿ ಬಾಕ್ಸ್ ಮತ್ತು ಕವರ್ ನಲ್ಲಿ ಹಣ (Money) ಸಿಕ್ಕಿದೆ. ದಾರಿಯಲ್ಲಿ ಶಿವರಾಜ್ ಎಂಬ ವ್ಯಕ್ತಿಗೆ ಸಿಕ್ಕ ಹಣ ಪೊಲೀಸರ ಪಾಲಾಗಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡಿತ್ತು.
ಕಂಕನಾಡಿ ಠಾಣಾ ಪೊಲೀಸರು ಶಿವರಾಜ್ನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಶಿವರಾಜ್ ಹಣವನ್ನು ಬೇರೆ ವ್ಯಕ್ತಿಗೆ ನೀಡಿದ್ದ ಬಗ್ಗೆ ಬಾಯ್ಬಿಟ್ಟಿದ್ದ ಎನ್ನಲಾಗಿತ್ತು. ಈ ಬಗ್ಗೆ ಕಮಿಷನರ್ ಎನ್. ಶಶಿಕುಮಾರ್ ಮಾತನಾಡಿದ್ದಾರೆ.
ಸ್ನೇಹಿತನಿ 3 ಲಕ್ಷ ಕೊಟ್ಟ ಶಿವರಾಜ್
ರಸ್ತೆಯಲ್ಲಿ ಸಿಕ್ಕ 3 ಲಕ್ಷ ರೂಪಾಯಿ ಹಣವನ್ನು ಶಿವರಾಜ್ ಸ್ನೇಹಿತನಿಗೆ ನೀಡಿದ್ದ, ನವೆಂಬರ್ 26ರಂದು ಬಾಕ್ಸ್ ಮತ್ತು ಕವರ್ನಲ್ಲಿ ಶಿವರಾಜ್ಗೆ ಹಣ ಸಿಕ್ಕಿದೆ. ಸ್ಪಷ್ಟವಾಗಿ ಅದರಲ್ಲಿ ಎಷ್ಟು ಹಣ ಇತ್ತು ಎಂದು ಆತನಿಗೂ ಗೊತ್ತಿರಲಿಲ್ಲ. ಹಣ ಸಿಕ್ಕಿದ ಸಂದರ್ಭದಲ್ಲಿ ಶಿವರಾಜ್, ತುಕರಾಮ್ ಎಂಬುವವರಿಗೆ 3 ಲಕ್ಷ ರೂಪಾಯಿ ನೀಡಿದ್ದಾನೆ.
ಪೊಲೀಸರಿಗೆ ಹಣ ವಾಪಸ್ ಕೊಟ್ಟ ತುಕರಾಮ್
ಆ ಹಣದಲ್ಲಿ ತುಕರಾಮ್ 500 ರೂಪಾಯಿ ಮಾತ್ರ ಉಪಯೋಗಿಸಿದ್ದಾನೆ. ಮಾಧ್ಯಮಗಳಲ್ಲಿ ಹಣ ಸಿಕ್ಕಿದ ವಿಚಾರ ಗೊತ್ತಾಗಿ ತುಕರಾಮ್ ಆ ಹಣವನ್ನು ಮತ್ತೆ ಠಾಣೆಗೆ ನೀಡಿದ್ದಾನೆ. ತುಕರಾಮ್ ಮತ್ತು ಆತನ ಮನೆಯವರು 2,99,500 ರೂಪಾಯಿ ನೀಡಿದ್ದಾರೆ. ಶಿವರಾಜ್ ನೀಡಿದ ಹಣದಲ್ಲಿ ಐನೂರು ರೂಪಾಯಿಯನ್ನು ತುಕರಾಮ್ ಖರ್ಚು ಮಾಡಿದ್ದಾರೆ ಎಂದು ಶಶಿಕುಮಾರ್ ಮಾಹಿತಿ ನೀಡಿದ್ರು.
ಪೊಲೀಸರ ಬಳಿ ಇದೆ 10 ಲಕ್ಷ ಹಣ
ತುಕರಾಮ್ ಮೊಬೈಲ್ನಲ್ಲಿ ಸುದ್ದಿ ವೈರಲ್ ಆಗಿರೋದನ್ನು ನೋಡಿಠಾಣೆಗೆ ಬಂದು ಹಣ ಕೊಟ್ಟಿದ್ದಾರೆ. ಸದ್ಯ ಮೂರುವರೆ ಲಕ್ಷ ರೂಪಾಯಿ ಹಣವನ್ನು ಸುಪರ್ದಿ ಪಡೆದಿದ್ದೇವೆ. ಘಟನಾ ಸ್ಥಳದ ಸಿಸಿ ಟಿವಿ ಫೂಟೇಜ್ ಅನ್ನು ಪರಿಶೀಲನೆ ಮಾಡುತ್ತಿದ್ದೇವೆ. ಹಣ ಕಳೆದುಕೊಂಡವರು ಪೊಲೀಸ್ ಠಾಣೆಗೆ ಬಂದು ತಮ್ಮದೇ ಹಣ ಎಂದು ಸಾಬೀತು ಮಾಡಬೇಕಿದೆ.
ಹಣ ಕೊಡದಿದ್ರೆ ಬೀಳುತ್ತೆ ಕೇಸ್
ಶಿವರಾಜ್ ನಿಂದ ಹಣ ತೆಗೆದುಕೊಂಡು ಹೋದವರು ಠಾಣೆಗೆ ಬಂದು ಹಣ ಕೊಡಬೇಕು. ಶಿವರಾಜ್ ಮತ್ತು ತುಕರಾಮ್ ಮೇಲೆ ಪ್ರಕರಣ ದಾಖಲಾಗುವುದಿಲ್ಲ. ಯಾರಾದರೂ ಹಣ ತೆಗೆದುಕೊಂಡು ಹೋಗಿ ಮತ್ತೆ ಕೊಡದಿದ್ದರೆ ಪ್ರಕರಣ ದಾಖಲು ಮಾಡುತ್ತೇವೆ ಎಂದು ಕಮಿಷನರ್ ಎಚ್ಚರಿಕೆ ನೀಡಿದರು.
ಹಣ ಕಳೆದುಕೊಂಡವರು ಇದ್ದರೆ ಮುಂದೆ ಬನ್ನಿ
ಶಿವರಾಜ್ಗೆ ಸಿಕ್ಕ ಒಟ್ಟು ಹಣದ ಬಗ್ಗೆ ಪೊಲೀಸರಿಗೂ ಗೊಂದಲವಿದ್ದು,
ಯಾರಾದರೂ ಬಂದರೆ ಅಲ್ಲೇ ಕೊಟ್ಟುಬಿಡೋಣ ಎಂದು ಪೊಲೀಸರು ಠಾಣೆಯಲ್ಲಿ ಹಣ ಇಟ್ಟಿದ್ದಾರೆ. ಹಣ ಕಳೆದುಕೊಂಡವರು ಇದ್ದರೆ ಮುಂದೆ ಬನ್ನಿ. ಪೊಲೀಸರು ತಡವಾಗಿ ಈ ಪ್ರಕರಣದಲ್ಲಿ ಮಾಡಿದ ಬಗ್ಗೆ ವರದಿ ತರಿಸುತ್ತೇನೆ. ಈ ವಿಚಾರದಲ್ಲಿ 75KP ಆ್ಯಕ್ಟ್ ನಡಿ ವಾರೀಸುದಾರರಿಲ್ಲದ ಹಣದ ಪ್ರಕರಣ ದಾಖಲಿಸಿದ್ದೇವೆ ಎಂದು ಎನ್ ಶಶಿಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: Janardhana Reddy: ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿಗೆ ಬಿಗ್ ರಿಲೀಫ್! 4 ಕೇಸ್ ಕ್ಲೋಸ್ ಮಾಡಿದ ಕೋರ್ಟ್
ಶಿವರಾಜ್ಗೆ ಒಟ್ಟು ಎಷ್ಟು ಹಣ ಸಿಕ್ಕಿದೆ ಎಂಬುವುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಆ ಹಣವನ್ನು ಲೆಕ್ಕ ಮಾಡುವಷ್ಟು ಸ್ಥಿತಿಯಲ್ಲಿ ಆಗ ಶಿವರಾಜ್ ಇರಲಿಲ್ಲ. ಕುಡಿದು ಶಿವರಾಜ್ ತೂರಾಡುತ್ತಿದ್ದ. ಶಿವರಾಜ್ ನಿಂದ ಯಾರಾದರೂ ಹಣ ತೆಗೆದುಕೊಂಡು ಹೋಗಿದ್ದಾರಾ ಎನ್ನುವುದನ್ನು ಸಿಸಿ ಕ್ಯಾಮೆರಾ ಪರಿಶೀಲನೆ ಮಾಡುತ್ತೇವೆ ಎಂದು ಎನ್ ಶಶಿಕುಮಾರ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ