ಮೈಸೂರು: ಕುಡಿದ ಮತ್ತ್ತಿನಲ್ಲಿ ವ್ಯಕ್ತಿಯೋರ್ವ ತನ್ನ ಮರ್ಮಾಂಗವನ್ನು (Private Parts) ಕತ್ತರಿಸಿಕೊಂಡ ಘಟನೆ ಮೈಸೂರು ಜಿಲ್ಲೆಯ ಹುಣಸೂರು (Hunasuru, Mysuru) ತಾಲೂಕಿನ ತೊಂಡಾಳು ಗ್ರಾಮದಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ಮದ್ಯ (Alcohol) ಸೇವನೆ ಮಾಡಿದ್ದ ರಾಜಶೆಟ್ಟಿ ಮರ್ಮಾಂಗ ಕತ್ತರಿಸಿಕೊಂಡಿದ್ದಾನೆ. ನೋವಿನಿಂದ ಕೂಗಿಕೊಂಡಿದ್ದಾಗ ಸ್ಥಳೀಯರು ಬಂದು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ರಾಜಶೆಟ್ಟಿಯನ್ನು ಹುಣಸೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಹಿಂದೆ ಮೂಢನಂಬಿಕೆಗೆ ಒಳಗಾಗಿದ್ದ ಅಂಧ ಭಕ್ತನೊಬ್ಬ ನಾಲಿಗೆ ಕತ್ತರಿಸಿಕೊಂಡು ದೇವರಿಗೆ ಅರ್ಪಿಸಿದ್ದನು. ಈ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಉಪ್ಪಾರ ಹೊಸಹಳ್ಳಿ ಗ್ರಾಮದಲ್ಲಿ ನಡೆದಿತ್ತು.
ವೀರೇಶ್ ನಾಲಿಗೆ ಕತ್ತರಿಸಿಕೊಂಡಿದ್ದ ಅಂಧ ಭಕ್ತ. ಇದೇ ವರ್ಷದ ಹಿಂದೆ ತನ್ನ ಬೆರಳು ಕತ್ತರಿಸಿಕೊಂಡು ದೇವರ ವಿಗ್ರಹ ತಲೆ ಮೇಲೆ ಇರಿಸಿದ್ದನು. ಇದೀಗ ನಾಲಿಗೆ ಕಟ್ ಮಾಡಿಕೊಳ್ಳುವ ಮೂಲಕ ಅಂಧ ಭಕ್ತಿ ಪ್ರದರ್ಶನ ಮಾಡಿದ್ದಾನೆ.
ನಾಲಿಗೆ ಕತ್ತರಿಸಿಕೊಂಡಿದ್ದು ಯಾಕೆ?
ವೀರೇಶ್ ಬಲಕುಂದಿ ಗ್ರಾಮದ ಬೆಟ್ಟದ ಮೇಲಿರುವ ಶಂಕರಪ್ಪ ದೇವಸ್ಥಾನಲ್ಲಿ ಪ್ರತಿದಿನ ಪೂಜೆ ಮಾಡುತ್ತಿದ್ದನು. ಶಂಕರಪ್ಪ ದೇವರನ್ನು ಒಲಿಸಿಕೊಳ್ಳಲು ನಾಲಿಗೆ ಕತ್ತರಿಸಿಕೊಂಡಿದ್ದ ಎಂದು ವರದಿಯಾಗಿದೆ.
ಕಾರಿನಲ್ಲಿದ್ದ 1.8 ಲಕ್ಷ ಕದ್ದು ಎಸ್ಕೇಪ್
ಕಾರಿನ ಗಾಜು ಹೊಡೆದು ಕಾರಿನಲ್ಲಿದ್ದ 1 ಲಕ್ಷದ 80 ಸಾವಿರ ಹಣವನ್ನ ದರೋಡೆ ಮಾಡಿರುವ ಘಟನೆ ನೆಲಮಂಗಲದ ಗುರುಭವನದಲ್ಲಿ ನಡೆದಿದೆ.
ಶಿಕ್ಷಕ ನಾಗರಾಜು ಎಂಬವರು ತಮ್ಮ ಸ್ವಿಫ್ಟ್ ಕಾರಿನಲ್ಲಿ ಹಣವಿಟ್ಟಿದ್ರು. ಈ ವೇಳೆ ಅಲ್ಲಿಗೆ ಬಂದ ಕಳ್ಳರು ಕಾರಿನ ಗಾಜು ಒಡೆದು ಹಣ ಕದ್ದು ಎಸ್ಕೇಪ್ ಆಗಿದ್ದಾರೆ.. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ