ದೊಡ್ಡ ದೊಡ್ಡ ನಗರಗಳಲ್ಲಿ (City) ಶುಕ್ರವಾರ ಬಂದರೆ ಸಾಕು ವೀಕೆಂಡ್ (Weekend Party) ಮಸ್ತಿ ಅಂದು ರಾತ್ರಿಯಿಂದಲೇ ಶುರುವಾಗುತ್ತೆ. ಶನಿವಾರ, ಭಾನುವಾರವಂತೂ ಪಬ್, ಪಾರ್ಟಿ ಅಂತಾ ತಮ್ಮ ಜಂಜಾಟವನ್ನೆಲ್ಲಾ ಮರೆತು ಈ ಎರಡು ದಿನಗಳಲ್ಲಿ ಕುಡಿದು, ಕುಣಿದು ಕುಪ್ಪಳಿಸುತ್ತಾರೆ. ವರ್ಕ್ ಹಾರ್ಡ್, ಪಾರ್ಟಿ ಹಾರ್ಡ್ (Work Hard, Party Hard) ಎನ್ನುವ ಪರಿಕಲ್ಪನೆ ಹೆಚ್ಚಾಗಿದೆ. ವಾರದ ಐದೂ ದಿನ ಕೆಲಸ ಮಾಡಿ ವಾರದ ಕೊನೆಯಲ್ಲಿ ಪಾರ್ಟಿ ಮಾಡಲು ಯುವ ಮನಸ್ಸುಗಳು (Youths) ಹಾತೊರೆಯುತ್ತವೆ. ಹಲವು ಕಂಪನಿಗಳು (Company) ಕೂಡ ಇದೇ ಮಾನದಂಡ ಇಟ್ಟುಕೊಂಡು ಉದ್ಯೋಗಿಗಳನ್ನು ಪ್ರೋತ್ಸಾಹಿಸುತ್ತವೆ.
ಪಾರ್ಟಿ ಎಂದರೆ ಮೊದಲ ಆದ್ಯತೆಯೇ ಮದ್ಯಪಾನ. ಕೆಲವರಂತೂ ಎದ್ದು ನಿಲ್ಲಲೂ ಸಾಧ್ಯವಾಗದಷ್ಟು ಕಂಠಪೂರ್ತಿ ಕುಡಿದು ವಾಲಾಡುತ್ತಾರೆ. ಇನ್ನೂ ಕೆಲವರು ವಾಂತಿ ಮಾಡುವಷ್ಟು ಕುಡಿದು ಎಲ್ಲರ ನಗೆಪಾಟಲಿಗೆ ತುತ್ತಾಗುತ್ತಾರೆ.
ಪಾರ್ಟಿಯಲ್ಲಿ ಕುಡಿದು ತೇಲಾಡಿದ ಉದ್ಯೋಗಿ
ಇದೇ ರೀತಿ ಕಂಪನಿಯ ಟೀಮ್ ಜೊತೆ ಪಾರ್ಟಿ ಮಾಡುವಾಗ ಬೆಂಗಳೂರಿನ ಸ್ಟಾರ್ಟ್‌ಅಪ್ ಉದ್ಯೋಗಿಯೊಬ್ಬರು ಕಂಠಪೂರ್ತಿ ಕುಡಿದು, ಅಲ್ಲೇ ವಾಂತಿ ಮಾಡಿ, ಎದ್ದು ನಿಲ್ಲಲು ಆಗದ ಸ್ಥಿತಿಯಲ್ಲಿ ಕಂಡು ಬಂದಿದ್ದಾನೆ.
ಟ್ವಿಟರ್‌ನಲ್ಲಿ ಫೋಟೋ ಹಂಚಿಕೊಂಡ ಟ್ವಿಟರ್ ಬಳಕೆದಾರ
ಈ ಎಲ್ಲಾ ದೃಶ್ಯಾವಳಿಗಳನ್ನು ಯುಟ್ಯೂಬರ್ ಮತ್ತು ಟ್ವಿಟರ್ ಬಳಕೆದಾರ ಕ್ಯಾಲೆಬ್ ಫ್ರೈಸೆನ್ ಫೋಟೋ ಸಮೇತ ಹಂಚಿಕೊಂಡಿದ್ದಾರೆ. ವರ್ಕ್ ಹಾರ್ಡ್, ಪಾರ್ಟಿ ಹಾರ್ಡ್ ಮನೋಭಾವ ಹೊಂದಿರುವ ಸ್ಟಾರ್ಟ್‌ಅಪ್ ಸಂಸ್ಥಾಪಕರಿಗೆ ಎಚ್ಚರಿಕೆಯ ಸಂದೇಶವಾಗಿ ಈ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ಕ್ಯಾಲೆಬ್ ತಮ್ಮ ಪೋಸ್ಟ್ ಮೂಲಕ, ಯಾವುದೇ ಒಂದು ಸ್ಟಾರ್ಟಪ್ ಸಂಸ್ಥೆಗೆ ಈ ರೀತಿಯ ಪಾರ್ಟಿ ಮೂಲಕ ಉದ್ಯೋಗಿಯನ್ನು ಕಳೆದುಕೊಳ್ಳುವುದು ಉತ್ತಮವಾದುದಲ್ಲ ಎಂಬ ಸಂದೇಶವನ್ನೂ ಸಹ ಎಚ್ಚರಿಕೆಯಂತೆ ರವಾನಿಸಿದ್ದಾರೆ. ಟ್ವಿಟರ್‌ನಲ್ಲಿ ಉದ್ಯೋಗಿ ಕುಡಿದು ಬಿದ್ದಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಪಾನಮತ್ತ ಉದ್ಯೋಗಿ
ಸರಣಿ ಟ್ವೀಟ್ ಮಾಡಿರುವ ಕ್ಯಾಬೆಲ್ ಇನ್ನೂ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ ಕಂಪನಿಯ ಎಲ್ಲಾ ಉದ್ಯೋಗಿಗಳು ಡ್ಯಾನ್ಸ್ ಮಾಡುತ್ತಾ ಪಾರ್ಟಿ ಎಂಜಾಯ್ ಮಾಡುತ್ತಿರುವಾಗ ಈ ಉದ್ಯೋಗಿ ಮಾತ್ರ ನಶೆಯಲ್ಲಿ ತೇಲುತ್ತಾ ಪಕ್ಕದ ಒಂದು ಸೋಫಾದ ಮೇಲೆ ಮಲಗಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಪ್ರಮುಖ ಸ್ಟಾರ್ಟ್‌ಅಪ್‌ನ ಯುವ ಉದ್ಯೋಗಿ ಟೀಮ್ ಜೊತೆ ಪಾರ್ಟಿ ಮಾಡುವಾಗ ಮಿತಿ ಮೀರಿ ಕುಡಿದಿದ್ದಾನೆ. ಎಲ್ಲರೂ ಪಾರ್ಟಿ ಮಾಡುತ್ತಿದ್ದರೆ ಈತ ಏಳಲು ಸಹ ಆಗದಷ್ಟು ಮಿತಿ ಮೀರಿ ಕುಡಿದಿದ್ದಾನೆ ಎಂದು ಕ್ಯಾಲೆಬ್ ತಮ್ಮ ಸರಣಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಅಲ್ಲದೇ ವಾಂತಿ ಮಾಡಿಕೊಂಡು ಉಸಿರುಗಟ್ಟಿದಂತೆ ಕೂಡ ಆತನಿಗೆ ಆಗಿದೆ. ತಕ್ಷಣ ಅಲ್ಲಿದ್ದ ಕೆಲ ಪಬ್ ಸಿಬ್ಬಂದಿ ಆತನನ್ನು ಕರೆದೊಯ್ದು ಮಲಗಿಸಿದ್ದಾರೆ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಸ್ಟಾರ್ಟಪ್ ಸಂಸ್ಥಾಪಕರಿಗೆ ಸಲಹೆ
“ನನ್ನ ಹೆಂಡತಿಯೊಂದಿಗೆ ಮೇಲಿನ ಮಹಡಿಯಲ್ಲಿ ಕುಳಿತಿದ್ದಾಗ ಯುವಕ ಹೀಗೆ ಎದ್ದೇಳಲು ಸಹ ಕಷ್ಟಪಡುತ್ತಿರುವದನ್ನ ನಾನು ಮೇಲಿಂದ ನೋಡಿದೆ. ತಕ್ಷಣ ಹೋಗಿ ನೋಡಿದರೆ ಆತ ಮಂಚದಿಂದ ಬಿದ್ದಿದ್ದರು, ಅದೃಷ್ಟವಶಾತ್ ಯಾವುದೇ ಹಾನಿಯಾಗಿಲ್ಲ ಎಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ನಂತರದ ಟ್ವೀಟ್‌ನಲ್ಲಿ, ಅವರು ಸ್ಟಾರ್ಟಪ್ ಸಂಸ್ಥಾಪಕರಿಗೂ ಸಲಹೆ ನೀಡಿದ್ದು, "ಯಾವಾಗಲೂ ಮದ್ಯಪಾನ ಮಾಡದ ಮೇಲ್ವಿಚಾರಕರನ್ನು ಟೀಮ್ ಜೊತೆ ಕಳುಹಿಸಿ, ಅವರ ಮೇಲೆ ಕಣ್ಣಿಡಲು ಮತ್ತು ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಖಚಿತಪಡಿಸಿಕೊಳ್ಳಿ. ಇದು ಅನಾಹುತಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ" ಎಂದಿದ್ದಾರೆ.
Reminder to the "work hard, party harder" startup founders out there: no party is worth losing an employee.
Spotted a young man from a prominent Bengaluru startup choking on his own vomit tonight, face up, alone in a bar, while his team partied. pic.twitter.com/Q0yu09BNV5
— Caleb Friesen (@caleb_friesen2) March 17, 2023
ಕ್ಯಾಲೆಬ್ ಟ್ವಿಟರ್‌ನಲ್ಲಿ ಈ ಪೋಸ್ಟ್ ಹಂಚಿಕೊಳ್ಳುತ್ತಾ ಇದ್ದ ಹಾಗೆ ಹಲವರು ಆ ಯುವ ಉದ್ಯೋಗಿಯ ಆರೋಗ್ಯ ವಿಚಾರಿಸಿದ್ದಾರೆ. ಇನ್ನು ಕೆಲವರು ಕಂಪನಿಯ ಸಂಸ್ಥಾಪಕರನ್ನು ದೂಷಿಸಿದ್ದಾರೆ. ಈ ರೀತಿ ಪಾರ್ಟಿ ಮಾಡುವಾಗ ಯುವಕರು ತಮ್ಮ ಸುರಕ್ಷತೆ ಬಗ್ಗೆ ಯೋಚಿಸಬೇಕು ಎಂದು ಹಲವು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Karnataka Rains: ಇಂದಿನಿಂದ ಮೂರು ಈ ದಿನ ಭಾಗದಲ್ಲಿ ಗುಡುಗು ಮಿಂಚು ಸಹಿತ ಅಬ್ಬರದ ಮಳೆ
ಯುವ ಜನತೆ ಪಾರ್ಟಿ ಎಂದರೆ ಮೈಮೇಲಿನ ಪರಿವೇ ಇಲ್ಲದೇ ಕುಡಿದು ಕುಣಿಯುತ್ತಾರೆ. ಹೀಗೆ ಎಂಜಾಯ್ ಮಾಡುವಾಗ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ