Pakistan-Taliban: ಪಾಕ್-ತಾಲಿಬಾನ್​ ನಂಟು? ಕಂದಾಹಾರನಿಂದ ಬಂದ 21 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ಗುಜರಾತ್​ನಲ್ಲಿ ವಶ

ಮೊದಲ ಕಂಟೇನರ್‌ನಿಂದ 1999.579 ಕೆಜಿ ಮತ್ತು ಎರಡನೇ ಕಂಟೇನರ್‌ನಿಂದ 988.64 ಕೆಜಿ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ. ಒಟ್ಟು 2988.219 ಕೆಜಿಗಳನ್ನು ಎನ್‌ಡಿಪಿಎಸ್ ಕಾಯ್ದೆ 1985 ರ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.

ವಶಕ್ಕೆ ಪಡೆಯಲಾದ ವಸ್ತುಗಳು.

ವಶಕ್ಕೆ ಪಡೆಯಲಾದ ವಸ್ತುಗಳು.

 • Share this:
  ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಕಳೆದ ವಾರ ಗುಜರಾತ್‌ನ ಮುಂದ್ರಾ ಬಂದರಿನಲ್ಲಿ ಎರಡು ಕಂಟೇನರ್‌ಗಳನ್ನು ವಶಪಡಿಸಿಕೊಂಡಿದ್ದು, ಅದರಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 21,000 ಕೋಟಿ ರೂ. ಮೌಲ್ಯದ ಡ್ರಗ್ಸ್​ಅನ್ನು (Drugs) ಜಪ್ತಿ ಮಾಡಿದ್ದಾರೆ. ಈ ಮಾದಕ ವಸ್ತುಗಳನ್ನು ಭಾರತದಲ್ಲಿ ಹಂಚಿಕೆ ಮಾಡಲು ಸಾಗಿಸಲಾಗುತ್ತಿತ್ತು ಎಂದು ಹೇಳಲಾಗಿದೆ. ಆರಂಭಿಕ ಅಂದಾಜಿನ ಪ್ರಕಾರ ಈ ಡ್ರಗ್ಸ್​ ಮೌಲ್ಯ ರೂ 3,500 ಕೋಟಿ ಎಂದು ಹೇಳಲಾಗಿತ್ತು. ಆದರೆ ಆರು ದಿನಗಳ ತನಿಖೆಯ ನಂತರ, ದೊಡ್ಡ ಪ್ರಮಾಣದ ಹೆರಾಯಿನ್ ಜೊತೆಗೆ ಇದರ ಮೌಲ್ಯ 21,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.

  ಉನ್ನತ ಗುಪ್ತಚರ ಮೂಲಗಳು ಸಿಎನ್ಎನ್-ನ್ಯೂಸ್ 18 ಗೆ ನೀಡಿರುವ ಮಾಹಿತಿ ಪ್ರಕಾರ, ಐಎಸ್ಐ ಮತ್ತು ತಾಲಿಬಾನ್ ಭಯೋತ್ಪಾದನಾ ಚಟುವಟಿಕೆಗಳಿಗೆ ಹಣ ನೀಡುವ ಏಕೈಕ ಮಾರ್ಗ ಈ ಡ್ರಗ್ಸ್ ವ್ಯವಹಾರ ಎಂದು ಹೇಳಿದರು. ಹಿಂದಿನ ಘನಿ ಅಫ್ಘಾನ್ ಸರ್ಕಾರದಲ್ಲಿ ಈ ವಸ್ತುವನ್ನು ನಿಷೇಧಿಸಿತ್ತು. ಆದರೆ ಅದು ಈಗ ಮತ್ತೆ ಆರಂಭವಾಗಿದೆ. ಈಗ ವಶಕ್ಕೆ ಪಡೆಯಲಾದ ಹೆರಾಯಿನ್ ಹೈ ಕ್ವಾಲಿಟಿಯದ್ದು ಎಂದು ಕೇಂದ್ರ ಪ್ರಯೋಗಾಲಯದಿಂದ ಪರಿಶೀಲಿಸಲ್ಪಟ್ಟಿದೆ ಎಂದು ಮೂಲಗಳು ತಿಳಿಸಿವೆ.

  ಉನ್ನತ ಮೂಲಗಳ ಪ್ರಕಾರ, ಪರೋಕ್ಷವಾಗಿ ಅವರಿಗೆ (ತಾಲಿಬಾನ್) ISI ನೊಂದಿಗೆ ಸಂಪರ್ಕ ಇದೆ. ವಿಚಾರಣೆಯ ನಂತರವೇ ಎಲ್ಲವನ್ನೂ ಹೇಳಬಹುದು ಎಂದು ತಿಳಿಸಿವೆ. "ವಿಶ್ವ ಆರ್ಥಿಕತೆಗಳು ತಾಲಿಬಾನ್ ಅನ್ನು ತಿರಸ್ಕರಿಸಿದ ನಂತರ ಅವರು ಐಎಸ್ಐ ಸಹಾಯದಿಂದ ತಮ್ಮನ್ನು ತಾವು ಹಣ ಪಾವತಿ ಮಾಡಿಕೊಳ್ಳುವ ಸಾಧ್ಯತೆಯ ಮಾರ್ಗವಾಗಿದೆ. ಸುಮಾರು 21,000 ಕೋಟಿ ಮೌಲ್ಯದ ಮಾದಕವಸ್ತು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

  ವಿಜಯವಾಡದ M/S ಆಶಿ ಟ್ರೇಡಿಂಗ್ ಕಂಪನಿಯು ಟಾಲ್ಕ್ ಪೌಡರ್ ಆಮದು ಮಾಡಿಕೊಳ್ಳುವುದಾಗಿ ಘೋಷಿಸಿ ಅಫ್ಘಾನಿಸ್ತಾನದಿಂದ ಆಮದು ಮಾಡಿಕೊಳ್ಳಲು ಮುಂದಾಗಿತ್ತು. ಆನಂತರ ಗುಜರಾತಿನ ಅಬ್ಬಾಸ್ ಬಂದರಿನಿಂದ ಮುಂಡ್ರಾ ಬಂದರಿಗೆ ಸಾಗಿಸಲಾಯಿತು ಎಂದು ಗುಪ್ತಚರವು DRI ತಿಳಿಸಿದೆ.

  ಈ ಮಾದಕ ವಸ್ತುಗಳು ಅಫ್ಘಾನಿಸ್ತಾನದಲ್ಲಿ ತಯಾರಿಸಲಾಗಿದ್ದು ಎಂದು ಗುಪ್ತಚರ ಸೂಚಿಸಿದೆ. ಅದರಂತೆ, ಡಿಆರ್‌ಐ ಅಧಿಕಾರಿಗಳು ಮಾದಕದ್ರವ್ಯ ವಸ್ತುಗಳು ಮತ್ತು ಸೈಕೋಟ್ರೋಪಿಕ್ ವಸ್ತು ಕಾಯಿದೆ (ಇನ್ನು ಮುಂದೆ ಎನ್‌ಡಿಪಿಎಸ್ ಎಂದು ಕರೆಯುತ್ತಾರೆ), 1985 ರ ಅಡಿಯಲ್ಲಿ ಪರೀಕ್ಷೆಗೆ ಸರಕುಗಳನ್ನು (ಎರಡು ಕಂಟೈನರ್, 40 ಟನ್) ವಶಕ್ಕೆ ಪಡೆದರು. ಗಾಂಧಿನಗರದ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲಾಯಿತು. ಪರೀಕ್ಷೆಯಲ್ಲಿ ಹೆರಾಯಿನ್ ಇರುವಿಕೆ ಪತ್ತೆಯಾಯಿತು. ಮೊದಲ ಕಂಟೇನರ್‌ನಿಂದ 1999.579 ಕೆಜಿ ಮತ್ತು ಎರಡನೇ ಕಂಟೇನರ್‌ನಿಂದ 988.64 ಕೆಜಿ ಮಾದಕ ವಸ್ತು ವಶಕ್ಕೆ ಪಡೆಯಲಾಗಿದೆ. ಒಟ್ಟು 2988.219 ಕೆಜಿಗಳನ್ನು ಎನ್‌ಡಿಪಿಎಸ್ ಕಾಯ್ದೆ 1985 ರ ಅಡಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.

  ಇದನ್ನು ಓದಿ: Privilege Motion: ಸದನದ ನಿರ್ಧಾರ ಜಾರಿಗೆ ತರದೆ ಅಗೌರವ ತೋರಲಾಗಿದೆ ಎಂದು ಸಭಾಪತಿ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಪ್ರತಾಪ ಚಂದ್ರ ಶೆಟ್ಟಿ!

  ಗುಜರಾತ್‌ನ ಅಹಮದಾಬಾದ್, ದೆಹಲಿ, ಚೆನ್ನೈ, ಗಾಂಧಿಧಾಮ್ ಮತ್ತು ಮಾಂಡ್ವಿಯಲ್ಲಿ ಶೋಧಗಳನ್ನು ನಡೆಸಲಾಗಿದೆ. ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಮತ್ತು ಹಲವಾರು ವ್ಯಕ್ತಿಗಳು ಮತ್ತು ಘಟಕಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ಇಲ್ಲಿಯವರೆಗೆ ನಡೆಸಿದ ತನಿಖೆಯು ಅಫಘಾನ್ ಪ್ರಜೆಗಳ ಒಳಗೊಳ್ಳುವಿಕೆಯನ್ನು ಬಹಿರಂಗಪಡಿಸಿದೆ. ಚೆನ್ನೈ ಮೂಲದ ದಂಪತಿ ಗೋವಿಂದರಾಜು ದುರ್ಗಾಪುರ್ಣ ವೈಶಾಲಿ ಮತ್ತು ಆಕೆಯ ಪತಿ ಮಚ್ಚಾವರಂ ಸುಧಾಕರ್ ಅವರು ಈ ಕಂಟೈನರ್​ಗಳನ್ನು ಆಮದು ಮಾಡಿಕೊಂಡಿದ್ದು ತಾವು ಟಾಲ್ಕಂ ಪೌಡರ್ ಅನ್ನು ಆಮದು ಮಾಡಿಕೊಳ್ಳುವುದಾಗಿ ಹೇಳಿದ್ದರು. ಅವರು ವಿಜಯವಾಡ ಮೂಲದ ಕಂಪನಿ, ಆಶಿ ಟ್ರೇಡಿಂಗ್ ಕಂಪನಿ ಆಮದುದಾರರಾಗಿದ್ದಾರೆ. ಚೆನ್ನೈ ಮೂಲದ ದಂಪತಿಯನ್ನು ಬಂಧಿಸಲಾಗಿದೆ ಮತ್ತು ಅವರನ್ನು ಭುಜ್ ನ್ಯಾಯಾಲಯಕ್ಕೆ ಹಾಜರುಪಡಿಸಿ, 10 ದಿನಗಳ ಕಸ್ಟಡಿಗೆ ಪಡೆಯಲಾಗಿದೆ.
  Published by:HR Ramesh
  First published: