• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Drugs Mafia: ಪ್ರತಿಷ್ಠಿತ ಶಾಲಾ ಮಕ್ಕಳಿಗೆ ಐಸ್​ಕ್ರೀಂನಲ್ಲಿ ಡ್ರಗ್ಸ್; ಸಚಿವ ಸುರೇಶ್ ಕುಮಾರ್ ಅನುಮಾನ

Drugs Mafia: ಪ್ರತಿಷ್ಠಿತ ಶಾಲಾ ಮಕ್ಕಳಿಗೆ ಐಸ್​ಕ್ರೀಂನಲ್ಲಿ ಡ್ರಗ್ಸ್; ಸಚಿವ ಸುರೇಶ್ ಕುಮಾರ್ ಅನುಮಾನ

ಸಚಿವ ಸುರೇಶ್​ ಕುಮಾರ್

ಸಚಿವ ಸುರೇಶ್​ ಕುಮಾರ್

ಶ್ರೀಮಂತ ಕುಟುಂಬಗಳ ವಿದ್ಯಾರ್ಥಿಗಳನ್ನು ಡ್ರಗ್ಸ್ ಬಲೆಗೆ ಕೆಡವಲು ದಂಧೆಕೋರರು, ಮಕ್ಕಳು ತಿನ್ನುವ ಐಸ್ ಕ್ರೀಂ ಅಥವಾ ಹಣ್ಣುಗಳಿಗೆ ಡ್ರಗ್ಸ್ ಸವರಿ ಕೊಡುವ ಅನುಮಾನವಿದೆ ಎಂದು ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.

  • Share this:

ಚಾಮರಾಜನಗರ (ಸೆ. 7): ಪ್ರತಿಷ್ಠಿತ ಶ್ರೀಮಂತ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಮಕ್ಕಳನ್ನು ಸೆಳೆಯಲು ದಂಧೆಕೋರರು ಐಸ್ ಕ್ರೀಂಗೆ ಡ್ರಗ್ಸ್ ಸವರಿ ಕೊಡುವ ದೊಡ್ಡ ಗುಮಾನಿ ಇದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಚಾಮರಾಜನಗರದಲ್ಲಿ ಮಾತನಾಡಿದ ಅವರು, ಶ್ರೀಮಂತ  ಕುಟುಂಬಗಳ ವಿದ್ಯಾರ್ಥಿಗಳನ್ನು ಡ್ರಗ್ಸ್ ಬಲೆಗೆ ಕೆಡವಲು ದಂಧೆಕೋರರು, ಮಕ್ಕಳು ತಿನ್ನುವ ಐಸ್ ಕ್ರೀಂ ಅಥವಾ ಹಣ್ಣುಗಳಿಗೆ ಡ್ರಗ್ಸ್ ಸವರಿ ಕೊಡುವ ಅನುಮಾನವಿದೆ ಎಂದಿದ್ದಾರೆ. ಎರಡು ವರ್ಷಗಳ ಹಿಂದೆಯೇ ಬಿಜೆಪಿ ಡ್ರಗ್ಸ್ ವಿರುದ್ದ ಧ್ವನಿ ಎತ್ತಿತ್ತು. ಆಗಿನ ಡೆಪ್ಯುಟಿ ಸ್ಪೀಕರ್  ಯೋಗೀಶ್ ಭಟ್ ಈ ಬಗ್ಗೆ ತನಿಖೆಯನ್ನು ಸಹ ಮಾಡಿಸಿದ್ದರು ಎಂದು ಅವರು ಹೇಳಿದ್ದಾರೆ.


ಡ್ರಗ್ಸ್ ವಿಚಾರವಾಗಿ ರಾಜ್ಯ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ. ಈ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಯುವಜನರನ್ನು ಹಾಳು ಮಾಡುವ ಯಾವುದೇ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬಾರದು. ಸಮಾಜ ಹಾಗೂ ಯುವ ಜನಾಂಗವನ್ನು ದುರ್ಬಲಗೊಳಿಸುವ ಪ್ರಯತ್ನಗಳಿಗೆ ಒಂದು ತಾರ್ಕಿಕ ಅಂತ್ಯ ಕಾಣಿಸಬೇಕು. ಇದನ್ನು ಬೇರು ಸಮೇತ ಕಿತ್ತು ಹಾಕಬೇಕು ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.


ಕರ್ನಾಟಕದಲ್ಲಿ ಸಾಕಷ್ಟು ಡ್ರಗ್ಸ್​ ದಂಧೆಯ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸ್ಯಾಂಡಲ್​ವುಡ್​ನಲ್ಲೂ ಡ್ರಗ್ಸ್​ ಪ್ರಕರಣಗಳು ಬೆಳಕಿಗೆ ಬಂದಿದ್ದು, ನಟಿ ರಾಗಿಣಿ ಈಗಾಗಲೇ ಬಂಧಿಸಲ್ಪಟ್ಟಿದ್ದಾರೆ.  ಇದರ ಬೆನ್ನಲ್ಲೇ ಹಲವು ಕಡೆಗಳಿಂದ ಡ್ರಗ್ಸ್​ ದಂಧೆಯ ಮಾಹಿತಿಗಳು ಹೊರಬೀಳುತ್ತಿವೆ. ಈ ಹಿನ್ನೆಲೆಯಲ್ಲಿ ಸಚಿವ ಎಸ್. ಸುರೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ. ಶಾಲೆಗಳಲ್ಲಿಯೂ ಮಕ್ಕಳಿಗೆ ಐಸ್​ಕ್ರೀಂನಲ್ಲಿ ಡ್ರಗ್ಸ್​ ಸವರಿ ಕೊಡುವ ಸಾಧ್ಯತೆಯಿದೆ ಎಂದಿದ್ದಾರೆ.


ಪ್ರಚಾರಕ್ಕೆ ರಾಗಿಣಿಯನ್ನು ಕರೆಸಿರಲಿಲ್ಲ- ಸಚಿವ ನಾರಾಯಣ ಗೌಡ:


ಡ್ರಗ್ಸ್ ದಂಧೆಯಲ್ಲಿ ಸಿಕ್ಕಿಬಿದ್ದಿರುವ ಚಲನಚಿತ್ರ ನಟಿ ರಾಗಿಣಿ ದ್ವಿವೇದಿ ಈ ರೀತಿ ಎಂದು ಗೊತ್ತಿರಲಿಲ್ಲ. ಚುನಾವಣಾ ಪ್ರಚಾರಕ್ಕೆ ನಾನು ಅವರನ್ನು ಕರೆಸಿರಲಿಲ್ಲ. ಚಿತ್ರರಂಗದಲ್ಲಿ ಕೆಲಸ ಮಾಡುವ ನನ್ನ ಹಿತೈಷಿಗಳು ಕರೆಸಿದ್ದರು ಎಂದು ಪೌರಾಡಳಿತ ಸಚಿವ ನಾರಾಯಣ ಗೌಡ ಹೇಳಿದ್ದಾರೆ.


ಇದನ್ನೂ ಓದಿ: Karnataka Weather: ಮಲೆನಾಡು, ಕರಾವಳಿಯಲ್ಲಿ ಸೆ. 10ರವರೆಗೆ ಭಾರೀ ಮಳೆ


ಚಾಮರಾಜನಗರದಲ್ಲಿ ಮಾತನಾಡಿದ ಅವರು, ರಾಗಿಣಿ ಚುನಾವಣಾ ಪ್ರಚಾರಕ್ಕೆ  ಬಂದರೆ ನಾವೇನು ಮಾಡೋಕೆ ಆಗುತ್ತದೆ? ಬೇಡ ಅನ್ನೋಕೆ ಆಗುತ್ತಾ? ಎಂದರು. ರಾಗಿಣಿ ಪರವಾಗಿ ನಮ್ಮ ಪಕ್ಷದಲ್ಲಿ ಯಾರೂ ಇಲ್ಲ. ಆದರೆ, ರಾಗಿಣಿ ಅವರನ್ನು ರಕ್ಷಿಸಲು ಕೆಲವರು ಸಚಿವರು ಲಾಬಿ ಮಾಡುತ್ತಿದ್ದಾರೆ ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಸಚಿವ ನಾರಾಯಣ ಗೌಡ ಹೇಳಿದ್ದಾರೆ.


ಮಂಡ್ಯ ಜಿಲ್ಲೆಯಲ್ಲಿ ಹಳ್ಳಿ ಹಳ್ಳಿಗಳಲ್ಲೂ ಗಾಂಜಾ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ನನ್ನ ಕ್ಷೇತ್ರ ನಾಗಮಂಗಲದಲ್ಲಿ ಗಾಂಜಾ ಮಾರಾಟ ಮಾಡುವವರನ್ನು ಹಿಡಿದುಕೊಡಲಿ. ಇಲ್ಲವಾದರೆ ನಮಗೆ ಮಾಹಿತಿ ನೀಡಲಿ. ಒಂದೇ ಗಂಟೆಯಲ್ಲಿ ಅವರನ್ನು ಬಂಧಿಸುತ್ತೇವೆ ಎಂದಿದ್ದಾರೆ.

Published by:Sushma Chakre
First published: