ಉಡುಪಿ: ಪ್ರತಿಷ್ಠಿತ ವೈದ್ಯರ ಡ್ರಗ್ಸ್ ನಂಟು (Udupi Drugs Case) ಬಯಲು ಪ್ರಕರಣದ ಬೆನ್ನಲ್ಲೇ ಉಡುಪಿಯಲ್ಲಿ ಪೊಲೀಸ್ (Udupi Police) ಇಲಾಖೆ ಅಲರ್ಟ್ ಆಗಿದ್ದು, ಡ್ರಗ್ಸ್ ಪೆಡ್ಲರ್ ವಿದ್ಯಾರ್ಥಿಗಳ ವಿರುದ್ಧ ಮಾಹೆ ವಿಶ್ವವಿದ್ಯಾಲಯ ಕಠಿಣ ಕ್ರಮ ಕೈಗೊಳ್ಳುವಂತೆ ಇಲಾಖೆ ತಾಕೀತು ಮಾಡಿದೆ. ಇತ್ತೀಚಿಗೆ ಮಂಗಳೂರಿನಲ್ಲಿ(Mangaluru Drugs Case) ಅನೇಕ ವೈದ್ಯರು ಡ್ರಗ್ಸ್ ದಂಧೆಯಲ್ಲಿ ಸಿಲುಕಿದ್ದರು. ಇದರ ಜೊತೆಗೆ ಮಣಿಪಾಲ ವಿದ್ಯಾರ್ಥಿಗಳು (Manipal Students) ಮಾದಕ ವಸ್ತುಗಳ ಮಾರಾಟ ಜಾಲ ಸಕ್ರಿಯವಾಗರುವ ಬಗ್ಗೆ ವಿಷಯ ಬೆಳಕಿಗೆ ಬಂದಿತ್ತು. ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹಾಕೆ ಅಕ್ಷಯ್ ಮಚ್ಚೀಂದ್ರ ಸೂಚನೆ ಮೇರೆಗೆ ಡಗ್ಸ್ ದಂಧೆಯಲ್ಲಿ ಸಿಲುಕಿ ಬಿದ್ದರೆ ಇನ್ನು ಮುಂದೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಡ್ರಗ್ಸ್ ಜಾಲದಲ್ಲಿ ಸಿಲುಕುವ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ ತನಿಖೆಗೆ ಸಹಕರಿಸಲು ವಿವಿ ನಿರ್ಧರಿಸಿದೆ.
ಮಣಿಪಾಲದ ಕೆಲ ವಿದ್ಯಾರ್ಥಿಗಳು ಡ್ರಗ್ಸ್ ಪೆಡ್ಲಿಂಗ್ನಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಕಾಲೇಜು ಆಡಳಿತ ಮಂಡಳಿಗಳಿಗೆ ಎಚ್ಚರಿಕೆ ನೀಡಿದ್ದೇವೆ, ಡ್ರಗ್ ಪೆಡ್ಲರ್ಗಳ ಬಗ್ಗೆ ಎಚ್ಚರ ನೀಡಿದ್ದೇವೆ. ವಿದ್ಯಾರ್ಥಿಗಳು ಅರಿವು ಇದ್ದೇ ಈ ಕೃತ್ಯ ಮಾಡುತ್ತಿದ್ದಾರೆ. ಕೇವಲ ಕಾನೂನು ಕ್ರಮ ಎಫ್ಐಆರ್ಗಳಿಂದ ಪ್ರಯೋಜನ ಇಲ್ಲ ಎಂದು ಅಕ್ಷಯ್ ಮಚ್ಚಿಂದ್ರ ಹೇಳಿದ್ದಾರೆ.
ಪೊಲೀಸರಿಗೆ ಮಾಹೆ ವಿವಿ ಸ್ಪಂದನೆ
ಕಾಲೇಜು ಆಡಳಿತ ಮಂಡಳಿಗಳು ಕೂಡ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದೇವೆ. ಮಾಹೆ ವಿಶ್ವವಿದ್ಯಾಲಯ ಸಕಾರಾತ್ಮಕವಾಗಿ ಸ್ಪಂದಿಸಿದೆ. ಈಗಾಗಲೇ ಇಬ್ಬರು ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ ಎಂದು ಅಕ್ಷಯ್ ಮಚ್ಚಿಂದ್ರ ತಿಳಿಸಿದರು.
ಪ್ರಕರಣ ಇತ್ಯರ್ಥ ಆಗುವವರೆಗೆ ಶೈಕ್ಷಣಿಕ ಚಟುವಟಿಕೆಗೆ ಅವಕಾಶವಿಲ್ಲ. ಕಾನೂನು ವಿಚಾರಣೆ ಮುಗಿಯುವವರೆಗೆ ತರಗತಿಗಳಿಂದ ಡಿಬಾರ್ ಮಾಡಲಾಗಿದೆ. ವಿಶ್ವವಿದ್ಯಾಲಯ ಕೂಡ ಆಂತರಿಕ ಶಿಸ್ತು ಕ್ರಮ ಕೈಗೊಂಡಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಜೀವನ ಹಾಳು ಮಾಡುವ ಉದ್ದೇಶ ನಮಗೆ ಇಲ್ಲ. ಕೆಟ್ಟ ಚಟಗಳಲ್ಲಿ ಭಾಗಿಯಾದರೆ ಯಾರು ಕೂಡ ರಕ್ಷಣೆಗೆ ಬರೋಲ್ಲ ಅನ್ನೋದು ವಿದ್ಯಾರ್ಥಿಗಳಿಗೆ ಗೊತ್ತಾಗಬೇಕು ಎಂದು ಹೇಳಿದರು.
ಹೊಸ ಟೆಕ್ನಿಕ್ ಬಳಕೆ
ಮಾಹೆ ಈ ಬಗ್ಗೆ ಕಠಿಣ ಕ್ರಮ ಕೈಗೊಂಡಿದೆ ಇತರ ಶಿಕ್ಷಣ ಸಂಸ್ಥೆಗಳಿಗೂ ಸೂಚನೆ ನೀಡಿದ್ದೇವೆ. ಅನ್ಯ ರಾಜ್ಯದ ವಿದ್ಯಾರ್ಥಿಗಳು ಪಾರ್ಸೆಲ್ ಮೂಲಕ ಡ್ರಗ್ಸ್ ಧರಿಸಿಕೊಳ್ಳುತ್ತಾರೆ. ಹೊಸ ಟೆಕ್ನಿಕ್ ಬಳಸಿ ಪಾರ್ಸೆಲ್ ತರಿಸಿಕೊಳ್ಳುತ್ತಾರೆ. ಒಮ್ಮೆ ಈ ಕೃತ್ಯದಲ್ಲಿ ಭಾಗಿಯಾದರೆ ನೆಟ್ವರ್ಕಿಂಗ್ ಗಟ್ಟಿಯಾಗುತ್ತದೆ ಎಂದರು.
ಮಹಾರಾಷ್ಟ್ರ ಚಂದ್ರಪುರದ ಒಬ್ಬ ವಿದ್ಯಾರ್ಥಿ ಹಾಗೂ ಮಧ್ಯಪ್ರದೇಶದ ಓರ್ವ ವಿದ್ಯಾರ್ಥಿ ವಿರುದ್ಧ ಕ್ರಮ ಜರುಗಿಸಲಾಗಿದೆ. ಎಡಿಜಿಪಿ ಅಲೋಕ್ ಕುಮಾರ್ ಅವರ ಸೂಚನೆಯಂತೆ ಈ ಹೊಸ ಕ್ರಮ ಕೈಗೊಂಡಿದ್ದೇವೆ. ಮಂಗಳೂರು ಘಟನೆಯ ನಂತರ ಎಚ್ಚೆತ್ತು ಈ ಕ್ರಮಕ್ಕೆ ಮುಂದಾಗಿದ್ದೇವೆ. ಮಣಿಪಾಲ ಹಾಗೂ ಸೆನ್ ಪೊಲೀಸ್ ಠಾಣೆಯಲ್ಲಿ ಈ ವಿದ್ಯಾರ್ಥಿಗಳ ಪ್ರಕರಣ ದಾಖಲಾಗಿತ್ತುಪ್ರತಿದಿನ ತಲಾ ಒಂದರಂತೆ ಪ್ರಕರಣ ದಾಖಲಿಸುತ್ತಿದ್ದೇವೆ ಎಂದು ಹಾಕೆ ಅಕ್ಷಯ್ ಮಚ್ಚೀಂದ್ರ ಮಾಹಿತಿ ನೀಡಿದರು.
ಇದನ್ನೂ ಓದಿ: Toll Price Hike: ದುಪ್ಪಟ್ಟಾಯ್ತು ಟೋಲ್ ಶುಲ್ಕ, ಬರೋಬ್ಬರಿ ಶೇಕಡಾ 100ರಷ್ಟು ಹೆಚ್ಚಳ!
ಸ್ಮಾರ್ಟ್ ವಾಚ್ ಮೂಲಕ ಡ್ರಗ್ಸ್ ದಂಧೆ
ಮಣಿಪಾಲ ವಿದ್ಯಾರ್ಥಿಗಳು ಸ್ಮಾರ್ಟ್ ವಾಚ್ ಮೂಲಕ ಡ್ರಗ್ಸ್ ತರಿಸಿಕೊಳ್ಳುತ್ತಿರೋದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. LSD stips ಗಳನ್ನು ಸ್ಮಾರ್ಟ್ ವಾಚ್ ಜೊತೆಗೆ ಪಾರ್ಸೆಲ್ ಮಾಡಿ ಕಳಿಸುತ್ತಿದ್ದರು.ಆನ್ಲೈನ್ ಮೂಲಕ ಸ್ಮಾರ್ಟ್ ವಾಚ್ ಖರೀದಿ ಮಾಡಿದಂತೆ ಬಿಂಬಿಸಲಾಗುತ್ತದೆ. ಪಾರ್ಸೆಲ್ ಮೂಲಕ ಡೆಲಿವರಿ ಮಾಡಿದಂತೆ ನಟಿಸುತ್ತಾರೆ. ಬಾಕ್ಸ್ ನ ಒಳಗೆ ಕ್ರಮಬದ್ಧವಾಗಿ ಪ್ಯಾಕಿಂಗ್ ಮಾಡುತ್ತಾರೆ.
ಸ್ಮಾರ್ಟ್ ವಾಚ್ ಸ್ಟಿಕರ್ ಕೂಡ ಹಾಗೆ ಇರುತ್ತೆ. ವಾಚ್ ಜೊತೆಗೆ ಇರುವ ಮಾಹಿತಿ ನೀಡುವ ಬುಕ್ ನೆಟ್ ಒಳಗೆ ಈ ಸ್ಡ್ರಿಪ್ಸ್ ಇಡಲಾಗುತ್ತಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ