Aditya Alva: ಆರೋಪಿ ಆದಿತ್ಯಾ ಆಳ್ವನಿಗೆ ಡೋಪಿಂಗ್ ತಪಾಸಣೆ ನಡೆಸಿದ ಸಿಸಿಬಿ ಅಧಿಕಾರಿಗಳು

Doping Test: ಈ ಹಿಂದೆ ಕಾಟನ್ ಪೇಟೆ ಪ್ರಕರಣದಲ್ಲಿ ರಾಗಿಣಿ ಸಂಜನಾ ಸೇರಿದಂತೆ ಇತರ ಆರೋಪಿಗಳಿಗೂ ಡೋಪಿಂಗ್ ಟೆಸ್ಟ್ ಮಾಡಿಸಲಾಗಿತ್ತು. ಈಗ ಆದಿತ್ಯಾ ಆಳ್ವನಿಗೂ ಡೋಪಿಂಗ್ ಟೆಸ್ಟ್ ಮಾಡುವ ಮೂಲಕ ಸತ್ಯ ಬಯಲಿಗೆಳೆಯಲು ಸಿಸಿಬಿ ಮುಂದಾಗಿದೆ.

ಆದಿತ್ಯ ಆಳ್ವ.

ಆದಿತ್ಯ ಆಳ್ವ.

  • Share this:
ಬೆಂಗಳೂರು (ಜನವರಿ 15); ಸ್ಯಾಂಡಲ್​ವುಡ್ ಡ್ರಗ್ ಡೀಲ್ ಪ್ರಕರಣದ ತನಿಖೆಯನ್ನು ಸಿಸಿಬಿ ಚುರುಕುಗೊಳಿಸಿದೆ. ಈ ನಡುವೆ ಆದಿತ್ಯಾ ಆಳ್ವನನ್ನ ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಹೀಗೆ ಆದಿತ್ಯ ಆಳ್ವಾನಿಗೂ ಡ್ರಗ್ಸ್ ಗೂ ಅದ್ಯಾವ ರೀತಿ ಲಿಂಕ್ ಇತ್ತು? ಆದಿತ್ಯ ಆಳ್ವಾನ ಪಾರ್ಟಿಗಳು ಹೇಗೆ ನಡೆತಿದ್ವು? ಆದಿತ್ಯ ಸ್ವತಃ ಡ್ರಗ್ ಸೇವಿಸುತ್ತಿದ್ದನೇ ಅನ್ನೋದರ ಕುರಿತು ಸಿಸಿಬಿ ಮಾಹಿತಿ ಕಲೆಹಾಕುತ್ತಿದೆ. ಆದಿತ್ಯಾ ಆಳ್ವಾ ಪೇಜ್ ತ್ರೀ ಪಾರ್ಟಿಯನ್ನು ಮಾತ್ರ ಆಯೋಜನೆಯನ್ನು ಮಾಡ್ತಿದ್ನ ಅಥವಾ ಸ್ವತಃ ತಾನೂ ಡ್ರಗ್ ಸೇವಿಸುತ್ತಿದ್ದನೆ? ಅನ್ನೋದು ಖಚಿತವಾಗಬೇಕಿದೆ.. ಹೀಗಾಗಿ ಸಿಸಿಬಿ ಪೊಲೀಸರು ಆದಿತ್ಯ ಆಳ್ವಾನಿಗೆ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಡೋಪಿಂಗ್ ಟೆಸ್ಟ್ ಮಾಡಿಸಿದ್ದಾರೆ. ಈ ವೇಳೆ ತಲೆಗೂದಲು ,ರಕ್ತ , ಮೂತ್ರ, ಉಗುರಿನ ಸ್ಯಾಂಪಲ್ ಪಡೆದಿದ್ದು, ನಾಳೆ ಅಹಮದಾಬಾದ್ ನ ಎಫ್​ಎಸ್​ಎಲ್​ಗೆ ಕಳಿಸಲಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಈ ಹಿಂದೆ ಕಾಟನ್ ಪೇಟೆ ಪ್ರಕರಣದಲ್ಲಿ ರಾಗಿಣಿ ಸಂಜನಾ ಸೇರಿದಂತೆ ಇತರ ಆರೋಪಿಗಳಿಗೂ ಡೋಪಿಂಗ್ ಟೆಸ್ಟ್ ಮಾಡಿಸಲಾಗಿತ್ತು. ಈಗ ಆದಿತ್ಯಾ ಆಳ್ವನಿಗೂ ಡೋಪಿಂಗ್ ಟೆಸ್ಟ್ ಮಾಡುವ ಮೂಲಕ ಸತ್ಯ ಬಯಲಿಗೆಳೆಯಲು ಸಿಸಿಬಿ ಮುಂದಾಗಿದೆ. ಆದಿತ್ಯ ಆಳ್ವಾ ಮತ್ತು ವಿರೇನ್ ಖನ್ನ ಪೇಜ್ ತ್ರೀ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು. ಆದರೆ, ಇಬ್ಬರು ಒಂದೇ ರೀತಿಯ ಪಾರ್ಟಿಯನ್ನು ಆಯೋಜನೆ ಮಾಡುತ್ತಿದ್ದರು. ಪಾರ್ಟಿಗಳಿಗೆ ಒಂದೇ ಮನಸ್ಥಿತಿಯ ಗ್ರಾಹಕರನ್ನು ಇಬ್ಬರು ಸೆಳೆಯುತ್ತಿದ್ದರು ಎನ್ನಲಾಗುತ್ತಿದೆ.

ಇದರಿಂದ ಒಬ್ಬರಿಗೊಬ್ಬರನ್ನು ಕಂಡರೇ ಆಗುತ್ತಿರಲಿಲ್ಲ.  ಪರಸ್ಫರರು ಪಾರ್ಟಿ ವಿಚಾರವಾಗಿ ಪೊಲೀಸರಿಗೆ ಬೇರೆಯವರ ಮೂಲಕ ಮಾಹಿತಿ ನೀಡುತ್ತಿದ್ದರು. ಹೀಗಾಗಿಯೇ ಆದಿತ್ಯಾ ಆಳ್ವಾ ಮತ್ತು ವಿರೇನ್ ಖನ್ನಾ ಇಬ್ಬರು ಪ್ರೋಫೇಷನಲ್ ಶತ್ರುತ್ವವನ್ನು ಬೆಳೆಸಿಕೊಂಡಿದ್ದರು. ಇಬ್ಬರ ನಡುವೆ ಪಾರ್ಟಿಗಳ ವಿಚಾರವಾಗಿ ಮನಸ್ಥಾಪವಿರೋದರ ಬಗ್ಗೆ ಅಧಿಕಾರಿಗಳಿಗೆ ವಿಚಾರಣೆ ವೇಳೆ ಮಾಹಿತಿ ಸಿಕ್ಕಿದೆ. ಸದ್ಯ ಆದಿತ್ಯಾ ಆಳ್ವನ ಪಾರ್ಟಿಗಳು ಮತ್ತು ಡ್ರಗ್ಸ್ ಡೀಲ್ ಬಗ್ಗೆ ಪಿನ್ ಟು ಪಿನ್ ಡಿಟೈಲ್ಸ್ ಅನ್ನ ಸಿಸಿಬಿ ಕಲೆಹಾಕುತ್ತಿದೆ.

ಇದನ್ನೂ ಓದಿ: Farmers Protest: ಕೃಷಿ ಮಸೂದೆಗಳು ರೈತನನ್ನು ಮುಗಿಸಿಬಿಡುತ್ತವೆ; ಕೇಂದ್ರದ ವಿರುದ್ಧ ಹೋರಾಟಕ್ಕಿಳಿದ ರಾಹುಲ್ ಗಾಂಧಿ

ಇನ್ನೂ ಡೋಪಿಂಗ್ ಟೆಸ್ಟ್ ನಲ್ಲಿ ಆಳ್ವಾನ ಡ್ರಗ್ಸ್ ಸೇವನೆ ಖಚಿತವಾದರೆ ಆಪತ್ತು ಕಟ್ಟಿಟ್ಟಬುತ್ತಿ. ಇನ್ನೂ ಮೂರು ದಿನಗಳ ಕಾಲ ಆದಿತ್ಯಾ ಆಳ್ವ ಸಿಸಿಬಿ ಕಸ್ಟಡಿಯಲ್ಲಿರಲಿದ್ದಾನೆ‌. ಆದಿತ್ಯಾ ಆಳ್ವನ ಪಾರ್ಟಿಯಲ್ಲಿ ಯಾರ್ಯಾರು ಭಾಗಿಯಾಗುತ್ತಿದ್ದರು? ಅಲ್ಲಿ ಡ್ರಗ್ಸ್ ಸಪ್ಲೈ ಮಾಡ್ತಿದ್ದದ್ದು ಯಾರು? ಅಂತ ವಿಚಾರಣೆ ನಡೆಸಲಾಗುತ್ತಿದೆ. ಆದಿತ್ಯಾ ಆಳ್ವ ಬಾಯ್ಬಿಟ್ರೆ ಇನ್ನು ಕೆಲವರ ಹೆಸರು ಬಹಿರಂಗವಾಗಲಿದೆ.

ಸದ್ಯ ವಿಚಾರಣೆ ವೇಳೆ ಆದಿತ್ಯಾ ಏನೂ ಬಾಯ್ಬಿಡ್ತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾವುದೇ ಪ್ರಶ್ನೆಗೂ ಗೊತ್ತಿಲ್ಲ ಎಂದು ತಲೆ ಆಡಿಸ್ತಿದ್ದು, ಡೋಪಿಂಗ್ ಟೆಸ್ಟ್ ಮಾಡಿಸಲಾಗಿದೆ‌. ಹೀಗಾಗಿ ವಿಚಾರಣೆ ವೇಳೆ ಮುಂದಿನ ದಿನಗಳಲ್ಲಿ ಯಾರ್ಯಾರ ಹೆಸರು ಬಹಿರವಾಗುತ್ತೆ? ಎಂಬುದನ್ನು ಕಾದು ನೋಡಬೇಕಿದೆ.
Published by:MAshok Kumar
First published: