Drug Case: ಮುತ್ತಪ್ಪ ರೈ ಮನೆ ಮೇಲೆ ಸಿಸಿಬಿ ದಾಳಿ; ಡ್ರಗ್ ಕೇಸ್​ ಸುಳಿಯಲ್ಲಿ ಮಾಜಿ ಡಾನ್ ಮಗ ರಿಕ್ಕಿ ರೈ​

Muthappa Rai: ಮುತ್ತಪ್ಪ ರೈ ಮಗ ರಿಕ್ಕಿ ರೈ ಹೆಸರು ಡ್ರಗ್ ಜಾಲದಲ್ಲಿ ಕೇಳಿಬಂದಿರುವ ಹಿನ್ನೆಲೆಯಲ್ಲಿ ಬಿಡದಿ ಹಾಗೂ ಸದಾಶಿವನಗರ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.

news18-kannada
Updated:October 6, 2020, 9:51 AM IST
Drug Case: ಮುತ್ತಪ್ಪ ರೈ ಮನೆ ಮೇಲೆ ಸಿಸಿಬಿ ದಾಳಿ; ಡ್ರಗ್ ಕೇಸ್​ ಸುಳಿಯಲ್ಲಿ ಮಾಜಿ ಡಾನ್ ಮಗ ರಿಕ್ಕಿ ರೈ​
ಮುತ್ತಪ್ಪ ರೈ- ರಿಕ್ಕಿ ರೈ
  • Share this:
ಬೆಂಗಳೂರು (ಅ. 6): ಡ್ರಗ್ ಕೇಸ್​ನಲ್ಲಿ ಈಗಾಗಲೇ ಸಿಸಿಬಿ ಅಧಿಕಾರಿಗಳು ಸಾಕಷ್ಟು ಜನರ ವಿಚಾರಣೆ ನಡೆಸಿದ್ದಾರೆ. ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಹಲವು ಡ್ರಗ್ ಪೆಡ್ಲರ್​ಗಳು ಕೂಡ ಜೈಲು ಸೇರಿದ್ದಾರೆ. ಇದರ ಬೆನ್ನಲ್ಲೇ ಇತ್ತೀಚೆಗೆ ನಿಧನರಾದ ಮಾಜಿ ಡಾನ್ ಮುತ್ತಪ್ಪ ರೈ ಅವರ ಮನೆ ಮೇಲೆ ಇಂದು ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮುತ್ತಪ್ಪ ರೈ ಮಗ ರಿಕ್ಕಿ ರೈ ಹೆಸರು ಡ್ರಗ್ ಜಾಲದಲ್ಲಿ ಕೇಳಿಬಂದಿರುವ ಹಿನ್ನೆಲೆಯಲ್ಲಿ ಬಿಡದಿ ಹಾಗೂ ಸದಾಶಿವನಗರ ನಿವಾಸದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸದಾಶಿವನಗರದ ರಾಜಮಹಲ್ ಅಪಾರ್ಟ್​ಮೆಂಟ್ ಪ್ಲಾಟ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗ್ಗೆ 6.30ಕ್ಕೆ ಸಿಸಿಬಿ ಅಧಿಕಾರಿಗಳು ರೇಡ್ ಮಾಡಿದ್ದ ವೇಳೆ ಮನೆಯವರು ಯಾರೂ ಸಹ ಪ್ಲಾಟ್​ನಲ್ಲಿ ಇರಲಿಲ್ಲ. ಮನೆ ಕೆಲಸದ ಸಿಬ್ಬಂದಿ ಮಾತ್ರ ಇದ್ದರು. ಫ್ಲಾಟ್​ನಲ್ಲೇ ಪರಿಶೀಲನೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳು ನಿನ್ನೆ ಸರ್ಚ್ ವಾರೆಂಟ್ ಪಡೆದಿದ್ದರು.

ಮುತ್ತಪ್ಪ ರೈಗೆ ಸೇರಿದ್ದ ಎರಡು ಕಡೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಪಿ ವೇಣುಗೋಪಾಲ್ ಹಾಗೂ ತಂಡದಿಂದ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಈಗಾಗಲೇ ಬಂಧಿತರಾಗಿರುವ ಕೆಲವು ಡ್ರಗ್ ಪೆಡ್ಲರ್​​ಗಳು ರಿಕ್ಕಿ ರೈ ಜೊತೆಗೆ ಸಂಪರ್ಕ ಹೊಂದಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದ್ದರಿಂದ ದಾಳಿ ನಡೆಸಲಾಗಿದೆ.

ಇದನ್ನೂ ಓದಿ: ಲೇವಡಿ ಮಾಡಿದ ಪ್ರಶಾಂತ್ ಸಂಬರಗಿಗೆ ಫೇಸ್​ಬುಕ್​ನಲ್ಲೇ ಉತ್ತರ ಕೊಟ್ಟ ಡಿಕೆ ರವಿ ಪತ್ನಿ ಕುಸುಮಾ

ಸ್ಯಾಂಡಲ್​ವುಡ್ ಡ್ರಗ್ ದಂಧೆಯಲ್ಲಿ ಆರೋಪಿಯಾಗಿದ್ದು, ತಲೆ ಮರೆಸಿಕೊಂಡಿರುವ ಆದಿತ್ಯ ಆಳ್ವನ‌ ಗೆಳೆಯನಾಗಿದ್ದ ರಿಕ್ಕಿ ರೈ ಆತನ ಜೊತೆ ಹೆಚ್ಚು ಒಡನಾಟ ಹೊಂದಿದ್ದರು ಎನ್ನಲಾಗಿದೆ. ಆದಿತ್ಯ ಆಳ್ವನ ರೆಸಾರ್ಟ್​ನಲ್ಲಿ ಪಾರ್ಟಿಗಳಲ್ಲಿ‌ ಭಾಗವಹಿಸುತ್ತಿದ್ದ ರಿಕ್ಕಿ ಬೆಂಗಳೂರಿನಿಂದ ಆದಿತ್ಯ ರೈ ಎಸ್ಕೇಪ್ ಆಗಿರುವಾಗ ಆತನಿಗೆ ಸಹಕರಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಅಷ್ಟೇ ಅಲ್ಲದೆ, ಕೆಲ ಡ್ರಗ್ ಪೆಡ್ಲರ್​ಗಳ ಜೊತೆ ಸಂಪರ್ಕವಿರೋ ಹಿನ್ನಲೆ ಪರಿಶೀಲನೆ ನಡೆಸಲಾಗುತ್ತಿದೆ.

ಸದ್ಯಕ್ಕೆ ಬೆಂಗಳೂರಿನ ಸದಾಶಿವನಗರದಲ್ಲಿ ರಿಕ್ಕಿಯ ರೇಂಜ್ ರೋವರ್ ಕಾರನ್ನು ನಾಲ್ಕು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಸದಾಶಿವನಗರದ ರಾಜಮಹಲ್ ಅಪಾರ್ಟ್​ಮೆಂಟ್ ಪ್ಲಾಟ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗ್ಗೆ 6.30ಕ್ಕೆ ಸಿಸಿಬಿ ಅಧಿಕಾರಿಗಳು ರೇಡ್ ಮಾಡಿದ್ದ ವೇಳೆ ಮನೆಯವರು ಯಾರೂ ಸಹ ಪ್ಲಾಟ್​ನಲ್ಲಿ ಇರಲಿಲ್ಲ. ಮನೆ ಕೆಲಸದ ಸಿಬ್ಬಂದಿ ಮಾತ್ರ ಇದ್ದರು.
Published by: Sushma Chakre
First published: October 6, 2020, 9:48 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading