HOME » NEWS » State » DRUG PEDDLERS ARRESTED IN ANEKAL ZP

ಬೆಂಗಳೂರಿನಲ್ಲಿ ಖರ್ತನಾಕ್ ಡೀಲರ್ಸ್ ಅಂದರ್: ಏನಿದು ಪೋಸ್ಟ್ ಸ್ಟಾಂಪ್ ಡ್ರಗ್ಸ್?

ಅದೃಷ್ಟವಶಾತ್, ಇದು ತುಂಬಾ ದುಬಾರಿ ಆಗಿರುವ ಕಾರಣ ಸಾಮಾನ್ಯರ ಕೈಗೆ ತಲುಪುತ್ತಿಲ್ಲ ಎಂಬುದೇ ಸಮಾಧಾನಕರ. ಸದ್ಯ ಈ ಡಗ್ಸ್ ಅಕ್ರಮ ಸಾಗಾಟದಲ್ಲಿ ಇಬ್ಬರು ಸಿಕ್ಕಿ ಬಿದ್ದು ಪೊಲೀಸರ ಅತಿಥಿಯಾಗಳಾಗಿದ್ದಾರೆ.

news18-kannada
Updated:November 29, 2020, 9:15 PM IST
ಬೆಂಗಳೂರಿನಲ್ಲಿ ಖರ್ತನಾಕ್ ಡೀಲರ್ಸ್ ಅಂದರ್: ಏನಿದು ಪೋಸ್ಟ್ ಸ್ಟಾಂಪ್ ಡ್ರಗ್ಸ್?
LSD
  • Share this:
ಆನೇಕಲ್: ಅಕ್ರಮ ಡಗ್ಸ್ ದಂಧೆಯನ್ನು ತಡೆಯಬೇಕು ಅಂತ ಪೊಲೀಸ್ ಅಧಿಕಾರಿಗಳು ಎಷ್ಟೇ ಕಷ್ಟ ಪಟ್ಟರು ಸಹ ಏನು ಪ್ರಯೋಜನ ಆಗುತ್ತಿಲ್ಲ. ಪೊಲೀಸರು ಚಾಪೆ ಕೆಳಗೆ ತೂರಿದ್ರೆ ದಂಧೆಕೋರರು ರಂಗೋಲಿ ಕೆಳಗೆ ತೂರುತ್ತಿದ್ದಾರೆ. ಹೌದು, ಪೊಲೀಸರ ಕಟ್ಟೆಚ್ಚರ ನಡುವೆ ಒಂದಲ್ಲ ಒಂದು ದಾರಿ ಹುಡುಕುವ ಈ ಕಳ್ಳರು ಖತರ್ನಾಕ್ ಐಡಿಯಾಗಳನ್ನು ಮಾಡಿ  ತಾವು ತಲುಪಿಸಬೇಕಾದ ವಸ್ತುಗಳು ಹೇಗಾದ್ರು ಮಾಡಿ ಕಳಿಸುತ್ತಿದ್ದಾರೆ. ಇದಾಗ್ಯೂ  ಅಕ್ರಮ ಡ್ರಗ್ಸ್ ದಂಧೆಕೋರರ ಗ್ಯಾಂಗ್ ಒಂದು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಇಲ್ಲಿ ನೋಡಲು ಸ್ಟಾಂಪ್ಸ್ ರೀತಿಯಲ್ಲಿ ಕಾಣುವ ಈ ಚೀಟಿಗಳು, ನಿಜಕ್ಕು ಏನು ಅಂತ ಕೇಳಿದ್ರೆ ಒಂದು ಸಲ ಬೆಚ್ಚಿ ಬೀಳ್ತೀರಿ. ಏಕೆಂದರೆ ಇದು ಬರೀ ಸ್ಟಾಂಪ್​ಗಳಲ್ಲ. ಬದಲಾಗಿ ಎಲ್ಎಸ್​ಡಿ ಡ್ರಗ್ಸ್. ಇದು ಬರುತ್ತಿರುವುದು ದೂರ ನೆದರ್​ಲ್ಯಾಂಡ್​ನಿಂದ ಎಂಬುದು ಅಚ್ಚರಿ. ನೆದರ್​ಲ್ಯಾಂಡ್​‌ನಿಂದ ಕೇರಳಕ್ಕೆ ಸಪ್ಲೆಯಾಗುವ ಈ ಡ್ರಗ್ಸ್​ಗಳನ್ನು  ಬಾಯಲ್ಲಿ ಇಟ್ಟುಕೊಂಡರೆ ಸಾಕು ಕರಗಿ ಎಗ್ಗಾ ಮುಗ್ಗಾ ಕಿಕ್ ಕೊಡುತ್ತದೆ.

LSD


ಅದೃಷ್ಟವಶಾತ್, ಇದು ತುಂಬಾ ದುಬಾರಿ ಆಗಿರುವ ಕಾರಣ ಸಾಮಾನ್ಯರ ಕೈಗೆ ತಲುಪುತ್ತಿಲ್ಲ ಎಂಬುದೇ ಸಮಾಧಾನಕರ. ಸದ್ಯ ಈ ಡಗ್ಸ್ ಅಕ್ರಮ ಸಾಗಾಟದಲ್ಲಿ ಇಬ್ಬರು ಸಿಕ್ಕಿ ಬಿದ್ದು ಪೊಲೀಸರ ಅತಿಥಿಯಾಗಿದ್ದಾರೆ. ಬಂಧಿತ ಅರುಣ್ ಮತ್ತು ಗಣೇಶ್ ಇಬ್ಬರು ಮೂಲತ: ಕೇರಳಾದ ಕೊಟ್ಟಾಯಂ ಜಿಲ್ಲೆಯವರು. ಇಬ್ಬರು ಸಹ ಸ್ನೇಹಿತರು. ಈ ಅರುಣ್ ಕೆಲಸ‌ ಅರಸಿ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಹೆಬ್ಬಗೋಡಿ ಬಳಿಯ ಆಸ್ಪತ್ರೆಯಲ್ಲಿ ಎಕ್ಸರೆ ಟೆಕ್ನಿಷಿಯನ್ ಅಗಿ ಕೆಲಸ ಮಾಡುತ್ತಿದ್ದನು.

ಇನ್ನು ಈ ಅರುಣ್​ನ ವಿಳಾಸಕ್ಕೆ ಗಣೇಶ್ ಕೇರಳದಿಂದ ಪಾರ್ಸೆಲ್ ಕಳುಹಿಸುತ್ತಿದ್ದನು. ಆದರೆ ಅರುಣ್ ಗೆ ಅದರಲ್ಲಿ ಏನಿದೆ ಅಂತ  ಹೇಳುತ್ತಿರಲಿಲ್ಲ. ನನ್ನ ಫ್ರೆಂಡ್ ಅಮಲ್ ಬೈಜು ಬಂದು ಅದನ್ನು ಪಡೆಯುತ್ತಾನೆ. ಅಲ್ಲಿಯವರೆಗೆ ಇದು ನಿನ್ನ ಬಳಿ ಇರಲಿ ಎನ್ನುತ್ತಿದ್ದ.  ಈ ಕೊರಿಯರ್ ಬೆಂಗಳೂರಿನ ಚಾಮಾರಾಜಪೇಟೆಯಲ್ಲಿರುವ ಪೊಸ್ಟ್ ಆಫೀಸ್‌ಗೆ ಬರುತ್ತಿತ್ತು. ಆದರೆ ಯಾವಾಗ ಬೆಂಗಳೂರಿನಲ್ಲಿ ಗಾಂಜಾ ಮತ್ತು ಡ್ರಗ್ಸ್ ಪ್ರಕರಣ ಹೆಚ್ಚಾಯಿತೋ ಆಗ ಕಸ್ಟಂಮ್ಸ್ ಅಧಿಕಾರಿಗಳು ಕೊರಿಯರ್ ಪಾರ್ಸೆಲ್ ಗಳ ಮೇಲೆ ಒಂದು ಕಣ್ಣಿದ್ದರು.

ಎರಡು ಮೂರು ತಿಂಗಳಿನಿಂದ ಇದೇ ರೀತಿಯಾಗಿ ಪಾರ್ಸೆಲ್ ಬರುತ್ತಿರುವುದು ಗೊತ್ತಾಯಿತು. ಈ ಬಗ್ಗೆ ಕಸ್ಟಮ್ಸ್ ಅಧಿಕಾರಿಗಳು ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸಿಸಿಬಿ ಪೊಲೀಸರು ಹೆಬ್ಬಗೋಡಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಸಿಸಿಬಿ ಮಾಹಿತಿ ಮೇಲೆ ಹೆಬ್ಬಗೋಡಿ ಪೊಲೀಸರು ಹಾಸ್ಪಿಟಲ್ ಕದ‌ ತಟ್ಟಿ ಆರುಣ್ ವಶಕ್ಕೆ ಪಡೆದಾಗ ಅಸಲಿ ಸತ್ಯ ಭಯಲಾಗಿದೆ.

ಅರುಣ್​ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ  ದುಡ್ಡು ಮಾಡುವ ಉದ್ದೇಶದ್ದಿಂದ ಕೇರಳದ ಗಣೇಶ್ ತನ್ನ ಬೆಂಗಳೂರಿನ ಸ್ನೇಹಿತ ತನ್ನ ವಿಳಾಸಕ್ಕೆ ಕೊರಿಯರ್ ಕಳಿಸುತ್ತಿರುವುದು ಬಾಯಿಬಿಟ್ಟಿದ್ದಾನೆ. ಅಲ್ಲದೆ ಇದನ್ನು ಬೆಂಗಳೂರಿನಲ್ಲಿ ಅಮಲ್ ಬೈಜು ಎಂಬಾತ ಸಪ್ಲೈ ಮಾಡುತ್ತಿದ್ದಾನೆ ಎಂಬುದು ತಿಳಿದು ಬಂದಿದೆ. ಸದ್ಯ   ಹೆಬ್ಬಗೋಡಿ ಪೊಲೀಸರು ಇಬ್ಬರನ್ನು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.ಈ ಖರ್ತನಾಕ್ ಡ್ರಗ್ ಡೀಲರ್​ಗಳು ಬೆಂಗಳೂರಿನಲ್ಲಿ ಒಂದು ಸ್ಟಾಂಪ್ ಗೆ ಬರೋಬ್ಬರಿ ನಾಲ್ಕರಿಂದ ಐದು ಸಾವಿರ ಬೆಲೆಗೆ ಮಾರಾಟ ಮಾಡುತ್ತಿದ್ದರು. ಪೊಲೀಸರ ದಾಳಿಯಲ್ಲಿ ಒಟ್ಟು ಹದಿನೈದು ಲಕ್ಷಕ್ಕು ಹೆಚ್ಚು ಬೆಲೆ ಬಾಳುವ  ಎಲ್​ಎಸ್​ಡಿ ಸ್ಟಾಂಪ್​ಗಳನ್ನು ವಶಪಡಿಸಲಾಗಿದೆ.

ಇದನ್ನೂ ಓದಿ: ರಾಹುಲ್‌, ಪಂತ್, ಸಂಜು, ಸಾಹ ಇವರಲ್ಲಿ ಇಬ್ಬರು ಬೆಸ್ಟ್‌ ಕೀಪರ್‌ಗಳನ್ನು ಹೆಸರಿಸಿದ ಗಂಗೂಲಿ..!
Published by: zahir
First published: November 29, 2020, 9:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading