HOME » NEWS » State » DRUG PEDDLER ARREST BY HALASURU STATION POLICE RHHSN GVTV

ಮಗಳ ಆಟಿಕೆ ವಸ್ತುವಿನ ಮೂಲಕ ಬೆಂಗಳೂರಿಗೆ ಡ್ರಗ್ಸ್ ಸಪ್ಲೈ ಮಾಡ್ತಿದ್ದ ಅಂತಾರಾಜ್ಯ ಡ್ರಗ್ ಪೆಡ್ಲರ್!

ಸದ್ಯ ಡ್ರಗ್ ಫೆಡ್ಲರ್ ಸಕೀರ್ ಹುಸೆನ್​ನನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೇ ಬಾಂಗ್ಲಾದೇಶದಿಂದ ಡ್ರಗ್ಸ್ ತರುತ್ತಿರುವುದಾಗಿ ಮಾಹಿತಿ ಇದ್ದು, ಇದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

news18-kannada
Updated:December 7, 2020, 7:26 PM IST
ಮಗಳ ಆಟಿಕೆ ವಸ್ತುವಿನ ಮೂಲಕ ಬೆಂಗಳೂರಿಗೆ ಡ್ರಗ್ಸ್ ಸಪ್ಲೈ ಮಾಡ್ತಿದ್ದ ಅಂತಾರಾಜ್ಯ ಡ್ರಗ್ ಪೆಡ್ಲರ್!
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು: ಮಕ್ಕಳ ಆಟಿಕೆ ವಸ್ತು ಮೂಲಕ ಡ್ರಗ್ಸ್ ಸಪ್ಲೈ ಮಾಡ್ತಿದ್ದ ಅಂತರರಾಜ್ಯ ಡ್ರಗ್ ಪೆಡ್ಲರ್​ನನ್ನು ಹಲಸೂರು ಠಾಣೆ  ಪೊಲೀಸರು ಬಂಧಿಸಿದ್ದಾರೆ. ಈ ಖರ್ತನಾಕ್ ಆಸಾಮಿಯ ಹೆಸರು ಸಕೀರ್ ಹುಸೇನ್. ಮೂಲತಃ ಅಸ್ಸಾಂನವನು. ಬೆಂಗಳೂರಲ್ಲಿ ಕಾರು ಚಾಲಕನಾಗಿ ಕೆಲಸ ಮಾಡ್ತಿದ್ದ. ಹೆಸರಿಗೆ ನಗರದಲ್ಲಿ ಕ್ಯಾಬ್ ಓಡಿಸ್ತಿದ್ದ ಸಕೀರ್ ಅಸ್ಸಾಂ ನಿಂದ ಬೆಂಗಳೂರಿಗೆ ಮಾದಕ ವಸ್ತು ತರುತ್ತಿದ್ದ. ಪೊಲೀಸರಿಗೆ ಅನುಮಾನ ಬಾರದಂತೆ ತನ್ನ ಕುಟುಂಬದ ಜೊತೆ ಅಸ್ಸಾಂಗೆ ತೆರಳ್ತಿದ್ದ. ವಾಪಸ್ ಬೆಂಗಳೂರಿಗೆ ಬರುವ ವೇಳೆ ಮಗಳಿಗೆ ಕೊಡಿಸಿದ್ದ ಟೆಡ್ಡಿ ಬೇರ್ ಗೊಂಬೆಯಲ್ಲಿ ಎಂಡಿಎಂಎ ಸಿಂಥೆಟಿಕ್ ಡ್ರಗ್ ಟ್ಯಾಬ್ಲೆಟ್ಸ್ ಹಾಗು ಹೆರಾಯಿನ್ ನನ್ನು ನಗರಕ್ಕೆ ತಂದು ಮಾರಾಟ ಮಾಡ್ತಿದ್ದ.

ಬಂಧಿತ ಪೆಡ್ಲರ್ ಸಕೀರ್​ನಿಂದ 28 ಲಕ್ಷ ಮೌಲ್ಯದ 2200 MDMA ಟ್ಯಾಬ್ಲೆಟ್ ಹಾಗೂ 71 ಗ್ರಾಂ ಹೆರಾಯಿನ್ ಅನ್ನು ಹಲಸೂರು ಠಾಣೆ ಪೊಲೀಸರು ಸೀಜ್ ಮಾಡಿದ್ದಾರೆ.‌‌ ವಿಶೇಷ ಅಂದ್ರೆ ಸಕೀರ್ ಮಾಡ್ತಿದ್ದ ಡ್ರಗ್ಸ್ ಸಪ್ಲೈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿಯೇ ಇರಲಿಲ್ಲ ಎನ್ನಲಾಗಿದೆ.

ಸದ್ಯ ಡ್ರಗ್ ಫೆಡ್ಲರ್ ಸಕೀರ್ ಹುಸೆನ್​ನನ್ನು ಪೊಲೀಸರು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೇ ಬಾಂಗ್ಲಾದೇಶದಿಂದ ಡ್ರಗ್ಸ್ ತರುತ್ತಿರುವುದಾಗಿ ಮಾಹಿತಿ ಇದ್ದು, ಇದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಇದನ್ನು ಓದಿ: ಹೆಂಡತಿಗೆ ಅವಿರೋಧವಾಗಿ ಗ್ರಾಪಂ ಅಧ್ಯಕ್ಷಗಿರಿ ಕೊಡಿಸಲು 25 ಲಕ್ಷ ಆಫರ್ ನೀಡಿದ ವಿರಾಜಪೇಟೆ ತಹಸೀಲ್ದಾರ್?

ಲ್ಯಾಪ್​ಟಾಪ್ ಕಳ್ಳರ ಬಂಧನ

ಇನ್ನು ಬಾಡಿಗೆಗೆ ಲ್ಯಾಪ್ ಟಾಪ್ ಪಡೆದು ಹಿಂದಿರುಗಿಸದೇ ವಂಚಿಸಿ ಮಾರಾಟ ಮಾಡ್ತಿದ್ದ ಆರೋಪಿಗಳನ್ನ ಬೈಯ್ಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸೈಫ್ ಪಾಷ, ಮೊಯಿನುದ್ದೀನ್ ಖುರೇಷಿ, ಪ್ರತೀಕ್ ನಗರ್ಕರ್ ಬಂಧಿತ ಆರೋಪಿಗಳು.
Youtube Video
ಹೆಣ್ಣೂರಿನಲ್ಲಿ ನಕಲಿ ಕಂಪನಿ‌ ತೆರೆದಿದ್ದ ಆರೋಪಿಗಳು, ಸಿಬ್ಬಂದಿ ಬಳಕೆಗೆ ಅಂತ ಆನ್ಲೈನ್ ನಲ್ಲಿ ಬಾಡಿಗೆಗೆ ಲ್ಯಾಪ್ ಟಾಪ್ ಪಡಿತಿದ್ದರು. ನಂತರ ಬಾಡಿಗೆಗೆ ಪಡೆದ ಲ್ಯಾಪ್ ಟಾಪ್​ಗಳನ್ನು ಹಿಂದಿರುಗಿಸದೇ ಜಸ್ಟ್ ಡಯಲ್ ಮೂಲಕ ಸೆಕೆಂಡ್ ಹ್ಯಾಂಡ್ ಲ್ಯಾಪ್ ಟಾಪ್ ಹುಡುಕುತ್ತಿರುವ ಗ್ರಾಹಕರನ್ನು ಸಂಪರ್ಕಿಸುತ್ತಿದ್ದರು. ಕಂಪನಿ ನಷ್ಟದಲ್ಲಿದೆ ಅದಕ್ಕೆ ಲ್ಯಾಪ್ ಟಾಪ್ ಮಾರಾಟ ಮಾಡ್ತಿದ್ದೀವಿ ಅಂತ ಟೆಕ್ಕಿಗಳಿಗೆ ಬಾಡಿಗೆಗೆ ಪಡೆದ ಲ್ಯಾಪ್ ಟಾಪ್ ಮಾರಾಟ ಮಾಡ್ತಿದ್ದರು. ಈ ಬಗ್ಗೆ ದೂರು ದಾಖಲಾದಾಗ, ಪೊಲೀಸರು ಆರೋಪಿಗಳನ್ನು ಪತ್ತೆ ಮಾಡಿ, ಬಂಧಿಸಿದ್ದಾರೆ.
Published by: HR Ramesh
First published: December 7, 2020, 7:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories