news18-kannada Updated:January 20, 2021, 3:09 PM IST
ಗಣೇಶ್ ಗವಾನೆ
ಬೆಂಗಳೂರು(ಜ.20): ರಾಷ್ಟ್ರ ಮಟ್ಟದಲ್ಲಿ ಗಾಂಜಾ ರವಾನೆ ಮಾಡುತಿದ್ದ ಕಿಂಗ್ ಪಿನ್ನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗಣೇಶ್ ಗವಾನೆ ಬಂಧಿತ ಗಾಂಜಾ ಕಿಂಗ್ಪಿನ್. ಹೈದರಾಬಾದ್ ನ ಘಟಕೇಸರ್ ನಲ್ಲಿ ಈ ಯಶಸ್ವಿ ಕಾರ್ಯಾಚರಣೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಎನ್ಸಿಬಿ ಹೈದರಾಬಾದ್ ಉಪ ವಲಯ ಅಧಿಕಾರಿಗಳು ಹಾಗೂ ರಾಚಕೊಂಡ ಪೊಲೀಸರ ಜಂಟಿ ಕಾರ್ಯಾಚರಣೆಯಿಂದಾಗಿ ಆರೋಪಿಯನ್ನು ಬಂಧಿಸುವಲ್ಲಿ ಸಾಧ್ಯವಾಯಿತು.
ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ಶುರು ಮಾಡಿದ ಎನ್ಸಿಬಿ ಮತ್ತು ರಾಚಕೊಂಡ ಪೊಲೀಸರು ಮಾಲ್ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ. ಟಾಟಾ ಸಫಾರಿಯಲ್ಲಿ ಬರೋಬ್ಬರಿ 212 ಕೆ.ಜಿ. ಗಾಂಜಾವನ್ನು ಸಾಗಾಟ ಮಾಡುತ್ತಿದ್ದುದ್ದು ಬೆಳಕಿಗೆ ಬಂದಿದೆ. ಆರೋಪಿ ಗಣೇಶ್ ಪುಣೆ ಹಾಗೂ ಮುಂಬೈಗೆ ಗಾಂಜಾ ಸಾಗಿಸುತ್ತಿದ್ದ ಎಂದು ತಿಳಿದು ಬಂದಿದೆ.
ವಿನಾಃಕಾರಣ ಕಾಂಗ್ರೆಸ್ ಕೃಷಿ ಕಾಯ್ದೆಯನ್ನು ವಿರೋಧಿಸುತ್ತಿದೆ, ಸುಳ್ಳು ಹೇಳುತ್ತಿದೆ; ಕೈ ಜಾಥಾ ವಿರುದ್ಧ ರಾಮುಲು ಕಿಡಿ
ಕಳೆದ ವರ್ಷ
ಈತ 955 ಕೆಜಿ ಗಾಂಜಾ ಸೀಜ್ ಕೇಸ್ ನ ವಾಟೆಂಡ್ ಆರೋಪಿಯಾಗಿದ್ದ ಎನ್ನಲಾಗಿದೆ. ಆಗ ಎನ್ಸಿಬಿ ಬೆಂಗಳೂರು ವಲಯ ಅಧಿಕಾರಿ ಅಮಿತ್ ಘವಾಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. ಆಂಧ್ರ ಮತ್ತು ಒಡಿಶಾ ಗಡಿ ಭಾಗದಿಂದ ಗಾಂಜಾ ಸಾಗಾಟ ಮಾಡುತ್ತಿದ್ದ ಎಂಬ ವಿಷಯ ಬೆಳಕಿಗೆ ಬಂದಿತ್ತು.
ಆರೋಪಿ ಗಣೇಶ್ ದೆಹಲಿ, ರಾಜಸ್ಥಾನ, ಮುಂಬೈ, ತಮಿಳುನಾಡು, ಕೇರಳಕ್ಕೆ ಗಾಂಜಾ ರವಾನೆ ಮಾಡುತ್ತಿದ್ದ. ಅಷ್ಟೇ ಅಲ್ಲದೇ ಈತನ ಗ್ಯಾಂಗ್ ಶ್ರೀಲಂಕಾಕ್ಕೂ ಗಾಂಜಾ ರವಾನೆ ಮಾಡುತ್ತಿತ್ತು. ಆಗ ಅಂದರೆ 2020 ರಲ್ಲಿ ಗಣೇಶ್ ಗ್ಯಾಂಗ್ ನ ನಾಲ್ವರನ್ನ ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದರು.
Published by:
Latha CG
First published:
January 20, 2021, 3:09 PM IST