HOME » NEWS » State » DRUG CASE CCB POLICE TO INTERROGATE FORMER CONGRESS MINISTERS SON DARSHAN LAMANI TODAY IN DRUG CASE SCT

Drug Case: ಡ್ರಗ್ ಪ್ರಕರಣ; ಸಿಸಿಬಿಯಿಂದ ಇಂದು ಮಾಜಿ ಸಚಿವರ ಮಗ ದರ್ಶನ್​ ಲಮಾಣಿ ವಿಚಾರಣೆ

ಡ್ರಗ್ ಕೇಸ್​ನಲ್ಲಿ ದರ್ಶನ್ ಲಮಾಣಿ ಸೇರಿ ಎಂಟು ಜನರನ್ನು ವಶಕ್ಕೆ ಪಡೆದಿರುವ ಸಿಸಿಬಿ ಅಧಿಕಾರಿಗಳು ಇಂದು ವಿಚಾರಣೆ ನಡೆಸಲಿದ್ದಾರೆ.

news18-kannada
Updated:November 16, 2020, 8:27 AM IST
Drug Case: ಡ್ರಗ್ ಪ್ರಕರಣ; ಸಿಸಿಬಿಯಿಂದ ಇಂದು ಮಾಜಿ ಸಚಿವರ ಮಗ ದರ್ಶನ್​ ಲಮಾಣಿ ವಿಚಾರಣೆ
ದರ್ಶನ್​ ಲಮಾಣಿ
  • Share this:
ಬೆಂಗಳೂರು (ನ. 16): ಡ್ರಗ್ ಪೆಡ್ಲರ್​ಗಳಿಗೆ ಆಶ್ರಯ ನೀಡಿದ್ದಾರೆ ಎಂಬ ಆರೋಪದಲ್ಲಿ ಕಳೆದ ವಾರ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರ ಮಗ ದರ್ಶನ್​ ಲಮಾಣಿಯನ್ನು ಇಂದು ಸಿಸಿಬಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ. ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ಎರಡು ದಿನ ವಿಚಾರಣೆ ಮಾಡಿರಲಿಲ್ಲ. ಡ್ರಗ್ ಕೇಸ್​ನಲ್ಲಿ ದರ್ಶನ್ ಲಮಾಣಿ ಸೇರಿ ಎಂಟು ಜನರನ್ನು ವಶಕ್ಕೆ ಪಡೆದಿರುವ ಸಿಸಿಬಿ ಅಧಿಕಾರಿಗಳು ಇಂದು ವಿಚಾರಣೆ ನಡೆಸಲಿದ್ದಾರೆ.

ಬಂಧಿತರಾಗಿರುವ ಆರೋಪಿಗಳನ್ನು 9 ದಿನಗಳ ಕಾಲ ವಶಕ್ಕೆ ಪಡೆಯಲಾಗಿದೆ. ಕೆಜಿ ನಗರ ಠಾಣೆಯಿಂದ ಡ್ರಗ್​ ಕೇಸ್​ ಸಿಸಿಬಿಗೆ ವರ್ಗಾವಣೆ ಆಗಿತ್ತು. ಡಾರ್ಕ್ ವೆಬ್ ಮೂಲಕ ಡ್ರಗ್ಸ್ ಖರೀದಿ ಮಾಡುತ್ತಿದ್ದ ಸುಜಯ್​ನನ್ನು ನ.4ರಂದು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈತನ ಮಾಹಿತಿ ಆಧರಿಸಿ ಸುನೀಶ್ ಹೆಗ್ಡೆನ‌ ಬಂಧನ ಮಾಡಲಾಗಿತ್ತು.

ಗೋವಾದಲ್ಲಿ ಸುನೀಶ್ ಹೆಗ್ಡೆಯನ್ನು ಬಂಧನ ಮಾಡಿದ್ದ ಸಿಸಿಬಿ ತಂಡ ಸುನೀಶ್ ಜೊತೆಗೆ ಆತನ ಸ್ನೇಹಿತರಾದ ಹೇಮಂತ್​ನನ್ನು ಕೂಡ ಬಂಧಿಸಿದ್ದರು. ಈ ವೇಳೆ ಆರೋಪಿಗಳಿಗೆ ಗೋವಾದಲ್ಲಿ ಆಶ್ರಯ ನೀಡಿ, ಅವರೊಂದಿಗೇ ಇದ್ದ ದರ್ಶನ್ ಲಮಾಣಿಯ ಬಗ್ಗೆ ಮಾಹಿತಿ ಸಿಕ್ಕಿತ್ತು. ಡ್ರಗ್ಸ್ ಜಾಲಕ್ಕೂ ದರ್ಶನ್ ಲಮಾಣಿಗೂ ನಂಟಿನ‌ ಬಗ್ಗೆ ಇಂದು ವಿಚಾರಣೆ ನಡೆಸಲಾಗುತ್ತದೆ. ಮೇಲ್ನೋಟಕ್ಕೆ ಬಂಧನ ಆಗಿರುವ ಆರೋಪಿಗಳು ಡ್ರಗ್ಸ್ ಜಾಲದಲ್ಲಿ ಇರುವುದು ಗೊತ್ತಾಗಿದೆ. ಆದರೆ, ಇದರಲ್ಲಿ ದರ್ಶನ್ ಲಮಾಣಿ ಪಾತ್ರವೇನು ಎಂಬುದರ ಬಗ್ಗೆ ಇಂದು ವಿಚಾರಣೆ ನಡೆಸಲಾಗುತ್ತದೆ.

ಇದನ್ನೂ ಓದಿ: ಸಿನಿಮೀಯ ರೀತಿಯಲ್ಲಿ ಭದ್ರಾ ನಾಲೆಯಲ್ಲಿ ಕೊಚ್ಚಿ ಹೋಗುತ್ತಿದ್ದ ಹಸುವಿನ ರಕ್ಷಣೆ

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದ ರುದ್ರಪ್ಪ ಲಮಾಣಿ ಅವರ ಮಗ ದರ್ಶನ್ ಲಮಾಣಿ ಅವರನ್ನು ಬಂಧಿಸಲಾಗಿತ್ತು. ಅಂಚೆ ಕಚೇರಿಗೆ ದರ್ಶನ್ ಲಮಾಣಿ ಹೆಸರಿಗೆ ಡ್ರಗ್ಸ್ ಮತ್ತು ಹೈಡ್ರೋ ಗಾಂಜಾ ಪಾರ್ಸಲ್ ಮೂಲಕ ಬಂದಿತ್ತು. ಚಾಮರಾಜಪೇಟೆ ಫಾರಿನ್ ಪೋಸ್ಟ್ ಆಫೀಸ್​ಗೆ ಪರ್ಸಲ್ ತರಲು ಹೋದಾಗ ದರ್ಶನ್​ ಲಮಾಣಿಯನ್ನು ಪೊಲೀಸರು ಬಂಧಿಸಿದ್ದರು.
Published by: Sushma Chakre
First published: November 16, 2020, 8:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading