ಡ್ರಗ್ ಕೇಸ್​ನಲ್ಲಿ ತನಿಖೆಗೆ ಸಹಕರಿಸದ ಮುತ್ತಪ್ಪ ರೈ ಮಗ ರಿಕ್ಕಿ ರೈ ಸಿಸಿಬಿ ವಶಕ್ಕೆ

Sandalwood Drug Case: ತನಿಖೆಗೆ ಸಹಕಾರ ಕೊಡದ ಮುತ್ತಪ್ಪ ರೈ ಅವರ ಮಗ ರಿಕ್ಕಿ ರೈಯನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಆದಿತ್ಯ ಆಳ್ವ ಬಗ್ಗೆ ಪ್ರಶ್ನಿಸಿದರೆ ಗೊತ್ತಿಲ್ಲ ಎಂದು ಹಾರಿಕೆ ಉತ್ತರ ನೀಡಿದ ರಿಕ್ಕಿ ರೈನನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮುತ್ತಪ್ಪ ರೈ- ರಿಕ್ಕಿ ರೈ

ಮುತ್ತಪ್ಪ ರೈ- ರಿಕ್ಕಿ ರೈ

  • Share this:
ಬೆಂಗಳೂರು (ಅ. 6): ಸ್ಯಾಂಡಲ್​ವುಡ್​ ಡ್ರಗ್ ಕೇಸ್​ನಲ್ಲಿ ಬಂಧಿತರಾಗಿರುವ ಡ್ರಗ್ ಪೆಡ್ಲರ್​ಗಳ ಜೊತೆ ಸಂಪರ್ಕ ಹೊಂದಿದ್ದ ಮತ್ತು ಡ್ರಗ್ ಕೇಸ್​ನಲ್ಲಿ ತಲೆ ಮರೆಸಿಕೊಂಡಿರುವ ಆದಿತ್ಯ ಆಳ್ವ ಜೊತೆ ನಿಕಟ ಒಡನಾಟ ಹೊಂದಿದ್ದ ಆರೋಪದಲ್ಲಿ ಇಂದು ಮಾಜಿ ಡಾನ್ ಮುತ್ತಪ್ಪ ರೈ ಮಗನ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ವಿಚಾರಣೆಗೆ ಸರಿಯಾಗಿ ಸ್ಪಂದಿಸದ ಮುತ್ತಪ್ಪ ರೈ ಅವರ ಮಗ ರಿಕ್ಕಿ ರೈಯನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ತನಿಖೆಗೆ ಸಹಕಾರ ಕೊಡದ ರಿಕ್ಕಿ‌ ರೈನನ್ನು ವಶಕ್ಕೆ ಪಡೆದ ಸಿಸಿಬಿ ಅಧಿಕಾರಿಗಳು ಬಿಡದಿಯಲ್ಲಿರುವ ಆತನ ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ.

ಆದಿತ್ಯ ಆಳ್ವ ಬಗ್ಗೆ ಪ್ರಶ್ನಿಸಿದರೆ ಗೊತ್ತಿಲ್ಲ ಎಂದು ಹಾರಿಕೆ ಉತ್ತರ ನೀಡಿದ ರಿಕ್ಕಿ ರೈನನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಎನ್​ಸಿಬಿ ನೊಟೀಸ್ ನೀಡಿದ್ದ ಯಶಸ್ ಜೊತೆಗೂ ರಿಕ್ಕಿ ರೈ ಸಂಪರ್ಕವಿರೋ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿತ್ತು. ಇದರ ಜೊತೆಗೆ ಮುತ್ತಪ್ಪ ರೈ ಹೆಸರಿನಲ್ಲಿ ರಿಜಿಸ್ಟರ್ ಆಗಿರುವ ಕಾರನ್ನು ಕೂಡ ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಫಾರ್ಚುನರ್ ಕಾರಿನಲ್ಲಿ ಇಬ್ಬರು ಸಿಸಿಬಿ ಅಧಿಕಾರಿಗಳು ತೆರಳಿದ್ದಾರೆ. ರಿಕ್ಕಿ ರೈ ತಂದೆ ಮಾಜಿ ಡಾನ್ ಮುತ್ತಪ್ಪ ರೈ ಹೆಸರಿನಲ್ಲಿ ರಿಜಿಸ್ಟರ್ ಆಗಿರುವ ಕನ್ವರ್ಟಡ್ ಫಾರ್ಚುನರ್ ಕಾರನ್ನು ಸಿಸಿಬಿ ವಶಕ್ಕೆ ಪಡೆದಿರುವ ಸಾಧ್ಯತೆಯಿದೆ.

ಡ್ರಗ್ಸ್ ಪ್ರಕರಣದ ಕೆಲ ಆರೋಪಿಗಳಿಗೆ ಆಶ್ರಯ ನೀಡಿದ ಮಾಹಿತಿ ಹಿನ್ನಲೆಯಲ್ಲಿ ರಿಕ್ಕಿ ರೈ ಮನೆ ಮೇಲೆ ಸರ್ಚ್ ವಾರೆಂಟ್ ಪಡೆದು ರೇಡ್ ಮಾಡಲಾಗಿದೆ. ಈ ಪ್ರಕರಣದಲ್ಲಿ ರಿಕ್ಕಿ ರೈ ಭಾಗಿಯಾಗಿರೋ ಬಗ್ಗೆ ಅನುಮಾನ ಇದೆ. ಪರಿಶೀಲನೆ ನಡೆಯುತ್ತಿದೆ. ಶೋಧಕಾರ್ಯದ ವೇಳೆ ಕೆಲ ವಸ್ತುಗಳು ಸಿಕ್ಕಿವೆ. ಸದಾಶಿವನಗರ, ಬಿಡದಿ ಬಳಿ ರೇಡ್ ಆಗಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ: Drug Case: ಮುತ್ತಪ್ಪ ರೈ ಮನೆ ಮೇಲೆ ಸಿಸಿಬಿ ದಾಳಿ; ಡ್ರಗ್ ಕೇಸ್​ ಸುಳಿಯಲ್ಲಿ ಮಾಜಿ ಡಾನ್ ಮಗ ರಿಕ್ಕಿ ರೈ​

ಸದಾಶಿವನಗರದ ರಾಜಮಹಲ್ ಅಪಾರ್ಟ್​ಮೆಂಟ್ ಪ್ಲಾಟ್ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗ್ಗೆ 6.30ಕ್ಕೆ ಸಿಸಿಬಿ ಅಧಿಕಾರಿಗಳು ರೇಡ್ ಮಾಡಿದ್ದ ವೇಳೆ ಮನೆಯವರು ಯಾರೂ ಸಹ ಪ್ಲಾಟ್​ನಲ್ಲಿ ಇರಲಿಲ್ಲ. ಮನೆ ಕೆಲಸದ ಸಿಬ್ಬಂದಿ ಮಾತ್ರ ಇದ್ದರು. ಫ್ಲಾಟ್​ನಲ್ಲೇ ಪರಿಶೀಲನೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳು ನಿನ್ನೆ ಸರ್ಚ್ ವಾರೆಂಟ್ ಪಡೆದಿದ್ದರು.

ಮುತ್ತಪ್ಪ ರೈಗೆ ಸೇರಿದ್ದ ಎರಡು ಕಡೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎಸಿಪಿ ವೇಣುಗೋಪಾಲ್ ಹಾಗೂ ತಂಡದಿಂದ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ. ಈಗಾಗಲೇ ಬಂಧಿತರಾಗಿರುವ ಕೆಲವು ಡ್ರಗ್ ಪೆಡ್ಲರ್​​ಗಳು ರಿಕ್ಕಿ ರೈ ಜೊತೆಗೆ ಸಂಪರ್ಕ ಹೊಂದಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದ್ದರಿಂದ ದಾಳಿ ನಡೆಸಲಾಗಿದೆ.
Published by:Sushma Chakre
First published: