Bengaluru: ಪತ್ನಿ ತಲೆ ಮೇಲೆ ಮೂತ್ರ ವಿಸರ್ಜಿಸಿ ಕಿರುಕುಳ, ಇವನೆಂಥಾ ಗಂಡ?

ಇಲ್ಲೊಬ್ಬ ದುಷ್ಟ ಪತಿ ತಾನೇ ಕೈಯಾರೆ ತಾಳಿ ಕಟ್ಟಿದ ಪತ್ನಿಯ ಮೇಲೆ ಮಾಡಬಾರದನ್ನು ಮಾಡಿದ್ದಾನೆ. ಪತ್ನಿಯ ತಲೆ ಮೇಲೆ ಮೂತ್ರ ವಿಸರ್ಜಿಸಿ ವಿಕೃತಿ ಮೆರೆದಿದ್ದಾನೆ. ಪಾಪಿ ಗಂಡನ ವಿರುದ್ಧ ನೊಂದ ಪತ್ನಿ ಈಗ ಠಾಣೆ ಮೆಟ್ಟಿಲೇರಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜಗತ್ತಿನಲ್ಲಿ ಎಂಥೆಂತಾ ಜನ ಇರ್ತಾರೆ ಸ್ವಾಮಿ. ಕೆಲವರದ್ದು ಅದೆಂತಹಾ ಮನಸ್ಥಿತಿ ಅನಿಸುತ್ತೆ. ಕೆಲವರು ಪತ್ನಿ (Wife), ಮಹಿಳೆಯರ ಮೇಲೆ ವಿಕೃತವಾಗಿ (Assault) ವರ್ತಿಸಿ ಆನಂದ ಪಡ್ತಾರೆ. ಅಂತಹದ್ದೇ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಇಲ್ಲೊಬ್ಬ ದುಷ್ಟ ಪತಿ (Husband) ತಾನೇ ಕೈಯಾರೆ ತಾಳಿ ಕಟ್ಟಿದ ಪತ್ನಿಯ ಮೇಲೆ ಮಾಡಬಾರದನ್ನು ಮಾಡಿದ್ದಾನೆ. ಪತ್ನಿಯ ತಲೆ (Head) ಮೇಲೆ ಮೂತ್ರ ವಿಸರ್ಜಿಸಿ (Urine Pass) ವಿಕೃತಿ ಮೆರೆದಿದ್ದಾನೆ. ಪಾಪಿ ಗಂಡನ ವಿರುದ್ಧ ನೊಂದ ಪತ್ನಿ ಈಗ ಠಾಣೆ (Police Station) ಮೆಟ್ಟಿಲೇರಿದ್ದಾರೆ. ಶ್ರೀಮಂತ ಹುಡುಗ, ಮಗಳು ಸುಖವಾಗಿರ್ತಾಳೆ ಅಂತಾ ಮದುವೆ ಮಾಡಿ ಕೊಟ್ಟಿದ್ದಕ್ಕೆ ಈಗ ಹೆತ್ತವರು ನೋವು ಅನುಭವಿಸ್ತಾ ಇದ್ದಾರೆ. ಸಿಲಿಕಾನ್ ಸಿಟಿಯಲ್ಲಿ ವಿಕೃತ ಗಂಡ ಸಂದೀಪ್ ಎಂಬಾತ ತನ್ನ ಪತ್ನಿ ಮೇಲೆ ಅಮಾನವೀಯವಾಗಿ ವರ್ತಿಸಿದ್ದಾನೆ. ಮಾದಕ ವ್ಯಸನಿಯಾಗಿದ್ದ ಸಂದೀಪ್, ತನ್ನ ಪತ್ನಿಯ ತಲೆಯ ಮೇಲೆ ಮೂತ್ರ ವಿಸರ್ಜಿಸಿದ್ದಾನೆ. ಬಗ್ಗೆ ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ನೊಂದ ಪತ್ನಿ ಪ್ರಕರಣ ದಾಖಲಿಸಿದ್ದಾರೆ.

ಪತ್ನಿಯ ತಲೆ ಮೇಲೆ ಮೂತ್ರ ವಿಸರ್ಜನೆ

ಗಂಡ ಸಂದೀಪ್ ಮಾದಕ ವ್ಯಸನಿಯಾಗಿದ್ದ. ಪ್ರತಿದಿನ ಸಂದೀಪ್ ಮಾದಕ ಪದಾರ್ಥ ಸೇವಿಸಿ ಪತ್ನಿಗೆ ಕಿರುಕುಳ ಕೊಡ್ತಿದ್ದ. ಅದರಂತೆ ನಿನ್ನೆಯೂ ಮಾದಕ ವಸ್ತು ಸೇವಿಸಿ ಮನೆಗೆ ಬಂದು ತನ್ನ ತಲೆಯ ಮೇಲೆ ಮೂತ್ರ ವಿಸರ್ಜಿಸಿದ್ದಾನೆ ಅಂತಾ ದೂರಿನಲ್ಲಿ ಪತ್ನಿ ಉಲ್ಲೇಖಿಸಿದ್ದಾರೆ. ಬಸವನಗುಡಿ ಠಾಣೆಯಲ್ಲಿ ಪತ್ನಿ, ತನ್ನ ಗಂಡ ಸಂದೀಪ್ ವಿರುದ್ಧ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಆನ್​ಲೈನ್ ಗೇಮ್​​ನಲ್ಲಿ 11 ಕೋಟಿ ಗೆದ್ದ ವಿದ್ಯಾರ್ಥಿ, ಸ್ನೇಹಿತರಿಂದಲೇ ಕಿಡ್ನ್ಯಾಪ್!

ಗೆಳೆಯರೊಂದಿಗೆ ಪಾರ್ಟಿ ಮಾಡಿ ಟಾರ್ಚರ್!

ನಿನ್ನೆಯೂ ಪಾಪಿ ಪತಿ ಸಂದೀಪ್ ತನ್ನ ಮನೆಯಲ್ಲಿ ಗೆಳೆಯರೊಂದಿಗೆ ಪಾರ್ಟಿ ಮಾಡಿದ್ದಾನೆ. ವೇಳೆ ಮಾದಕ ವಸ್ತುವನ್ನು ಸೇವಿಸಿದ್ದಾನೆ. ನಂತರ ತನ್ನ ಸ್ನೇಹಿತರನ್ನು ನಾಳೆ ಮನೆಗೆ ಅಂತಾ ಮತ್ತೊಮ್ಮೆ ಕರೆದಿದ್ದಾನೆ. ಅದಕ್ಕೆ ಪತ್ನಿ ವಿರೋಧಿಸಿದ್ದಾಳೆ. ಆಗ ಸಿಟ್ಟಿಗೆದ್ದ ಗಂಡ ತನ್ನ ಸ್ನೇಹಿತರ ಮುಂದೆಯೇ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ.

4 ಕೆಜಿ ಚಿನ್ನ, ಕಾರು ಕೊಟ್ಟಿದ್ದ ಬೀಗರು!

ಹುಡುಗ ಶ್ರೀಮಂತ ಅಂತಾ ಹುಡುಗಿ ಪೋಷಕರು ಮದುವೆ ಮಾಡಿಕೊಟ್ಟಿದ್ದರು. ಹುಡುಗಿಯ ಪೋಷಕರಿಗೂ ತೆಲಂಗಾಣದಲ್ಲಿ ಪ್ರತಿಷ್ಠಿತ ಗಾರ್ಮೆಂಟ್ಸ್​​ ಇದೆ. ಜನವರಿಯಲ್ಲಿ ಇಬ್ಬರ ಮದುವೆ ನಡೆದಿತ್ತು. ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಮದುವೆ ನೆರವೇರಿತ್ತು.


ಇದನ್ನೂ ಓದಿ: ಕುಡಿದ ಅಮಲಿನಲ್ಲಿ ಸೇನಾ ಸಿಬ್ಬಂದಿಯ ಪುಂಡಾಟ, ಬಸ್​ ಕೀ ಕಿತ್ತು ಎಳೆದಾಟ!

ಹುಡುಗನಿಗೆ ಬಟ್ಟೆ ಶೋರೂಂ ಗಿಫ್ಟ್​!

ಸಂತ್ರಸ್ತೆಯ ಪೋಷಕರು ವರದಕ್ಷಿಣೆಯಾಗಿ ಸಂದೀಪ್ಗೆ 4 ಕೆಜಿ ಚಿನ್ನ ಮತ್ತು ಮಿನಿ ಕೂಪರ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ಮಾತ್ರವಲ್ಲ ಮಗಳ ಚೆನ್ನಾಗಿರಲಿ ಅಂತಾ ಹುಡುಗಿ ಪೋಷಕರು ತೆಲಂಗಾಣದಲ್ಲಿ 2 ಬಟ್ಟೆ ಶೋರೂಂಗಳನ್ನು ಸಂದೀಪ್ಗೆ ಉಡುಗೊರೆಯಾಗಿ ನೀಡಿದ್ದರು.

ಮದುವೆಗೆ 6 ಕೋಟಿ ಖರ್ಚು!

ಮಗಳ ಮದುವೆ ಅಂತಾ ಪೋಷಕರು ಅದ್ಧೂರಿಯಾಗಿ ನಡೆಸಿಕೊಟ್ಟಿದ್ದರು. ಹುಡುಗಿಯ ಪೋಷಕರು ಮದುವೆಗೆ ಬರೋಬ್ಬರಿ 6 ಕೋಟಿ ರೂಪಾಯಿ ಖರ್ಚು ಮಾಡಿದ್ದರು. ಕಳೆದ ಜನವರಿಯಲ್ಲಷ್ಟೇ ಇಬ್ಬರ ಮದುವೆ ನೆರವೇರಿತ್ತು.

ಆರೋಪಿಗಾಗಿ ಖಾಕಿ ಹುಡುಕಾಟ

ಆರೋಪಿ ಗಂಡ ಸಂದೀಪ್ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ಪತ್ನಿ ದೂರಿನಲ್ಲಿ ತಿಳಿಸಿದ್ದಾರೆ. ದೌರ್ಜನ್ಯವೆಸಗಿರುವ ಪತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ನಿ ಪೊಲೀಸರಿಗೆ ಮನವಿ ಮಾಡಿದ್ದಾಳೆ. ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಆರೋಪಿ ಸಂದೀಪ್ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Published by:Thara Kemmara
First published: