ಡ್ರೋನ್ ಚಾಲಿತ ಸ್ಪ್ರೇಯರ್ ರೈತರ ಕೈ ಸೇರುವುದೆಂತು? ಅಡ್ಡಿಯಾಗಿದೆ ಗೃಹ ಇಲಾಖೆ ಪರವಾನಿಗೆ

ನಿಖರವಾಗಿ ಔಷಧಿಯನ್ನು ನಿಗಿದಿತ ಸ್ಥಳದಲ್ಲಿ ಸಿಂಪಡಣೆಯನ್ನು ರಿಮೋಟ್ ಕಂಟ್ರೋಲರ್ ನಿಂದ ಬಳಸಬಹುದಾದ ಡ್ರೋನ್​​​​​​​​​​​ ಸ್ಪ್ರೇಯರ್ ನ್ನು ರಾಯಚೂರು ಕೃಷಿ ವಿಜ್ಞಾನ  ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ವಿಭಾಗವು ಅಭಿವೃದ್ಧಿ ಪಡಿಸಿದೆ,

news18-kannada
Updated:January 24, 2020, 5:31 PM IST
ಡ್ರೋನ್ ಚಾಲಿತ ಸ್ಪ್ರೇಯರ್ ರೈತರ ಕೈ ಸೇರುವುದೆಂತು? ಅಡ್ಡಿಯಾಗಿದೆ ಗೃಹ ಇಲಾಖೆ ಪರವಾನಿಗೆ
ಡ್ರೋಣ್ ಚಾಲಿತ ಸ್ಪ್ರೇಯರ್
  • Share this:
ರಾಯಚೂರು(ಜ.24): ಆಧುನಿಕ‌ ಕಾಲಕ್ಕೆ ತಕ್ಕಂತೆ ಕೃಷಿ ಪದ್ಧತಿಯಲ್ಲೂ ಬದಲಾವಣೆಯಾಗುತ್ತಿದೆ. ಈ ನಿಟ್ಟಿನಲ್ಲಿ, ಕೃಷಿ ವಿಶ್ವವಿದ್ಯಾಲಯದ ಸಂಶೋಧಕರು ಡ್ರೋನ್ ಚಾಲಿತ ಸ್ಪ್ರೇಯರ್​​ ಅಭಿವೃದ್ಧಿಪಡಿಸಿದ್ದಾರೆ. ಆದರೆ ಈ ಸ್ಪ್ರೇಯರ್ ಬಳಕೆಗೆ ರಕ್ಷಣಾ ಇಲಾಖೆಯ ಪರವಾನಿಗೆ ಬೇಕಾಗಿದೆ.

ರೈತರು ಬೆಳೆಯುತ್ತಿರುವ ಬೆಳೆಗೆ ಮಾನವ ಚಾಲಿತ ಔಷಧಿ ಸಿಂಪಡಣೆಯ ಸ್ಪ್ರೇಯರ್ ಇದೆ. ಬಹಳಷ್ಟು ಭೂಮಿ ಇರುವವರು, ಬೇಗ ಬೇಗ ಔಷಧಿ ಸಿಂಪಡಿಸಲು ಅಧಿಕ ಮಾನವನ ದುಡಿಮೆ ಅವಲಂಬಿಸಬೇಕಾಗುತ್ತದೆ. ಆದರೆ ಡ್ರೋನ್ ಬಳಕೆ ಮಾಡಿ ವೇಗ, ನಿಖರವಾಗಿ ಔಷಧಿಯನ್ನು ನಿಗಿದಿತ ಸ್ಥಳದಲ್ಲಿ ಸಿಂಪಡಿಸಬಹುದಾಗಿದೆ. ರಿಮೋಟ್ ಕಂಟ್ರೋಲರ್ ಮೂಲಕ ಬಳಸಬಹುದಾದ ಈ ಡ್ರೋನ್​​ ಸ್ಪ್ರೇಯರ್ ಅನ್ನು ರಾಯಚೂರು ಕೃಷಿ ವಿಜ್ಞಾನ  ವಿಶ್ವವಿದ್ಯಾಲಯದ ಇಂಜಿನಿಯರಿಂಗ್ ವಿಭಾಗವು ಅಭಿವೃದ್ಧಿ ಪಡಿಸಿದೆ.

ಸುಮಾರು 18 ಲಕ್ಷ ರೂಪಾಯಿ ಖರ್ಚು ಮಾಡಿ 20 ಲೀಟರ್ ಸಾಮರ್ಥ್ಯದ ಒಂದು ಹಾಗೂ 8 ಲಕ್ಷ ರೂಪಾಯಲ್ಲಿ 5 ಲೀಟರ್ ಸಾಮಾರ್ಥ್ಯದ ಎರಡು ಡ್ರೋನ್ ಸ್ಪ್ರೇಯರ್ ತಯಾರಾಗಿವೆ. ಇವುಗಳನ್ನು ವಿಶ್ವವಿದ್ಯಾಲಯ ಪೇಟೆಂಟ್ ಪಡೆದು ಸ್ಪ್ರೇಯರ್ ತಯಾರಿಸುವ ಕಂಪನಿಗಳಿಗೆ ನೀಡಬೇಕು. ಆದರೆ ಪೇಟೆಂಟ್ ನೀಡುವ ಮುನ್ನ ರಕ್ಷಣಾ ಇಲಾಖೆಯಿಂದ ಪರವಾನಿಗೆ ಪಡೆಯಬೇಕಾಗಿದೆ.

ಕೃಷಿ ವಿಶ್ವವಿದ್ಯಾಯಲವು ರಕ್ಷಣಾ ಇಲಾಖೆಯಿಂದ ಪರವಾನಿಗೆಗೆ ಕಾಯುತ್ತಿದೆ. ಪರವಾನಿಗೆ ಸಿಕ್ಕರೆ ಈ ಡ್ರೋನ್ ಬೇಗನೆ ರೈತರಿಗೆ ಸಿಗಲಿದೆ ಎಂದು ಕೃಷಿ ವಿವಿಯ ಉಪಕುಲಪತಿಗಳು ಹೇಳಿದ್ದಾರೆ.

ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದ ಈ ದ್ರೋನ್​​​​ ಚಾಲಿತ ಔಷಧಿ‌ ಸಿಂಪಡಣೆಯ ಬಗ್ಗೆ ರೈತರು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರಿಗೆ ಕಡಿಮೆ ದರದಲ್ಲಿ ಅಧಿಕ, ವೇಗವಾಗಿ ಔಷಧಿ ಸಿಂಪಡಣೆಯ ಯಂತ್ರ ಅವಶ್ಯವಾಗಿದೆ. ಈಗ ರಕ್ಷಣಾ ಇಲಾಖೆಯು ಪರವಾನಿಗೆ ನೀಡುವಂತೆ ರಾಜ್ಯ ಸರಕಾರವು ಸಹ ಒತ್ತಡ ಹಾಕಬೇಕೆಂದು ರೈತರು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ವಿದೇಶದಿಂದ ಸೋನಿಯಾ ಮರಳಿದ ನಂತರ ಕೆಪಿಸಿಸಿ ಅಧ್ಯಕ್ಷರ ನೇಮಕ; ಇದ್ರಲ್ಲಿ ಗೊಂದಲವಿಲ್ಲ: ಕೆ.ಎನ್. ರಾಜಣ್ಣ

ಕೃಷಿ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿರುವ ಈ ಯಂತ್ರಗಳು ರೈತರ ಬಳಕೆಗೆ ಬಂದಾಗಲೇ ಅದನ್ನು ಅಭಿವೃದ್ಧಿಪಡಿಸಿದ್ದಕ್ಕೂ ಸಾರ್ಥಕವಾಗುತ್ತದೆ. ಈಗ ಅಧಿಕ ಖರ್ಚು ಮಾಡಿ ತಯಾರಿಸಿದ ಯಂತ್ರಗಳನ್ನು ಬೇರೆ ಬೇರೆ ಕಂಪನಿಗಳಿಂದ ತಯಾರಿಸಿದಾಗ ದರವು ಕಡಿಮೆಯಾಗಲಿದೆ. ಈ ಬಗ್ಗೆ ಸರಕಾರ ಕ್ರಮ ವಹಿಸಬೇಕಾಗಿದೆ.
First published: January 24, 2020, 4:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading