Drone Prathap: ಡ್ರೋನ್ ಪ್ರತಾಪ್ ಎರಡು ಬಾರಿ ಕ್ವಾರಂಟೈನ್ ನಿಯಮ ಉಲ್ಲಂಘನೆ; ಮತ್ತೊಂದು ಕೇಸ್ ದಾಖಲು
Drone Prathap: ಈ ಹಿಂದೆ ಹೈದರಾಬಾದ್ಗೆ ಹೋಗಿ ಬಂದಿದ್ದ ಪ್ರತಾಪ್ ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಖಾಸಗಿ ವಾಹಿನಿಯಲ್ಲಿ ಸಂದರ್ಶನ ಕೊಟ್ಟಿದ್ದ. ಹೀಗಾಗಿ, ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಬಂಧನ ಭೀತಿಯಿಂದ ಪ್ರತಾಪ್ ಚಿಕ್ಕಮಗಳೂರು ಹಾಗೂ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ.
news18-kannada Updated:August 4, 2020, 12:29 PM IST

ಡ್ರೋನ್ ಪ್ರತಾಪ್
- News18 Kannada
- Last Updated: August 4, 2020, 12:29 PM IST
ಬೆಂಗಳೂರು (ಆ. 4): ಡ್ರೋನ್ ಪ್ರತಾಪನ ಅವಾಂತರಗಳು ಒಂದೆರಡಲ್ಲ... ಹೊರಗಡೆ ಇದ್ದಾಗಲೂ ಉದ್ದಟತನ, ಕ್ವಾರಂಟೈನ್ ಇದ್ದಾಗಲೂ ಹೈಡ್ರಾಮ. ಇಂದು ಕ್ವಾರಂಟೈನ್ ಅವಧಿ ಮುಗಿಸಿ ಮನೆಗೆ ತೆರಳಬೇಕಿದ್ದ ಪ್ರತಾಪನ ಮೇಲೆ ಮತ್ತೊಂದು ಎಫ್ಐಆರ್ ದಾಖಲಾಗಿ ಪೊಲೀಸ್ ಠಾಣೆ ಮೆಟ್ಟಿಲೇರುವಂತಾಗಿದೆ. ಸಾಂಸ್ಥಿಕ ಕ್ವಾರಂಟೈನ್ಗೆ ಒಳಪಟ್ಟಿದ್ದರೂ ತಮ್ಮ ವಕೀಲರನ್ನು ಖಾಸಗಿ ಹೊಟೇಲ್ ಗೆ ಕರೆದುಕೊಂಡು ಪ್ರತಾಪ್ ಒಂದು ಗಂಟೆಗಳ ಕಾಲ ಚರ್ಚಿಸಿದ್ದಾನೆ ಎನ್ನಲಾಗಿದೆ.
ಕ್ವಾರಂಟೈನ್ ಇದ್ದರೂ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಅಶೋಕ್ ನಗರ ಠಾಣೆಯಲ್ಲಿ ಡ್ರೋನ್ ಪ್ರತಾಪ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಹಿಂದೆ ಹೈದರಾಬಾದ್ಗೆ ಹೋಗಿ ಬಂದಿದ್ದ ಪ್ರತಾಪ್ ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಖಾಸಗಿ ವಾಹಿನಿಯಲ್ಲಿ ಸಂದರ್ಶನ ಕೊಟ್ಟಿದ್ದ. ಹೀಗಾಗಿ, ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಬಂಧನ ಭೀತಿಯಿಂದ ಪ್ರತಾಪ್ ಚಿಕ್ಕಮಗಳೂರು ಹಾಗೂ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ. ಬಳಿಕ ಪ್ರತಾಪ್ ನನ್ನು ಪತ್ತೆ ಹಚ್ಚಿ ರಿಚ್ ಮಂಡ್ ರಸ್ತೆಯಲ್ಲಿರುವ ಖಾಸಗಿ ಹೊಟೇಲ್ ನಲ್ಲಿ 14 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಇದನ್ನೂ ಓದಿ: Mangalore Rain: ದಕ್ಷಿಣ ಕನ್ನಡದಲ್ಲಿ ಮುಂದುವರಿದ ಮಳೆ; ನದಿಗಳಲ್ಲಿ ನೀರಿನ ಮಟ್ಟ ಏರಿಕೆ
ಆದರೆ, ಕ್ವಾರಂಟೈನ್ ಅವಧಿ ಮುಗಿದ ಹಿನ್ನೆಲೆಯಲ್ಲಿ ಚೇತನ್ ಕುಮಾರ್ ವಿಚಾರಣೆ ನಡೆಸಿದ್ದು, ಸಹಕರಿಸಲಿಲ್ಲ ಎನ್ನಲಾಗಿದೆ. ಈ ನಡುವೆ ಅಶೋಕ್ ನಗರ ಸ್ಟೇಷನ್ ಪೊಲೀಸರು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ಧಾರೆ. ಇನ್ನು ಡ್ರೋನ್ ಪ್ರತಾಪ್ ಒಬ್ಬನದ್ದೇ ಅಲ್ಲ, ಹೋಮ್ ಕ್ವಾರಂಟೈನ್ ನಲ್ಲಿರುವ ಕೆಲವರಿಂದ ಉದ್ಧಟತನ, ನಿಯಮ ಉಲ್ಲಂಘನೆ ಪ್ರತಿ ನಿತ್ಯ ಆಗುತ್ತಿದೆ. ಸ್ನೇಹಿತರ ಮನೆಗೆ ಹೋಗಬೇಕು, ಅಗತ್ಯ ವಸ್ತು ತರಬೇಕು ಎಂದು ಸಮಾಜಾಯಿಷಿ ಕೊಡಲಾಗುತ್ತಿದೆ.
ಕೆಲವರಿಂದ ಬಿಬಿಎಂಪಿ ಮತ್ತು ಸಿವಿಲ್ ಢಿಪೆನ್ಸ್ ತಂಡದವರಿಗೆ ಬೈಗುಳವೇ ಆಗಿದೆ. ದಿನಕ್ಕೆ ಮೂರು ಬಾರಿ ಪೋಟೋ ಕಳಿಸಲು ಸೂಚಿಸಿದ್ದರೂ ಡೋಂಟ್ ಕೇರ್ ಅಂತಿದ್ದಾರೆ. ಇದರಿಂದ ಕ್ವಾರಂಟೈನ್ ಸ್ಕ್ವಾರ್ಡ್ ಟೀಂ ಬೇಸತ್ತಿದೆ. ಹೀಗೆ ಬೆಂಗಳೂರಿನಲ್ಲಿ ಕ್ವಾರಂಟೈನ್ ಉಲ್ಲಂಘನೆ ಮಾಡಿದವರ ಮೇಲೆ ಇದುವರೆಗೂ 720 ಎಫ್ಐಆರ್ ದಾಖಲಾಗಿದೆ. ಹೋಮ್ ಕ್ವಾರಂಟೈನ್ ನಲ್ಲಿದ್ದು ಬ್ರೇಕ್ ಮಾಡಿದವರಿಗೆ ವಾರ್ನಿಂಗ್ ಕೊಟ್ಟರೂ ಯಾವುದೇ ಪ್ರಯೋಜನವಿಲ್ಲ. ಪ್ರಶ್ನೆ ಮಾಡಿದರೆ ಬಿಬಿಎಂಪಿ ಸಿಬ್ಬಂದಿ ಹಾಗೂ ಕ್ವಾರಂಟೈನ್ ಸ್ಕ್ವಾರ್ಡ್ ಮೇಲೆ ದರ್ಪ ನಡೆಸುತ್ತಿದ್ದಾರೆ.
ಕ್ವಾರಂಟೈನ್ ಇದ್ದರೂ ನಿಯಮ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಅಶೋಕ್ ನಗರ ಠಾಣೆಯಲ್ಲಿ ಡ್ರೋನ್ ಪ್ರತಾಪ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈ ಹಿಂದೆ ಹೈದರಾಬಾದ್ಗೆ ಹೋಗಿ ಬಂದಿದ್ದ ಪ್ರತಾಪ್ ಹೋಮ್ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಖಾಸಗಿ ವಾಹಿನಿಯಲ್ಲಿ ಸಂದರ್ಶನ ಕೊಟ್ಟಿದ್ದ. ಹೀಗಾಗಿ, ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಬಂಧನ ಭೀತಿಯಿಂದ ಪ್ರತಾಪ್ ಚಿಕ್ಕಮಗಳೂರು ಹಾಗೂ ಮೈಸೂರಿನಲ್ಲಿ ತಲೆಮರೆಸಿಕೊಂಡಿದ್ದ. ಬಳಿಕ ಪ್ರತಾಪ್ ನನ್ನು ಪತ್ತೆ ಹಚ್ಚಿ ರಿಚ್ ಮಂಡ್ ರಸ್ತೆಯಲ್ಲಿರುವ ಖಾಸಗಿ ಹೊಟೇಲ್ ನಲ್ಲಿ 14 ದಿನಗಳ ಕಾಲ ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು.