Drone Prathap: ಜರ್ಮನಿಯಲ್ಲೂ ಮಂಡ್ಯ ಡ್ರೋನ್​ನದ್ದೇ ಪ್ರತಾಪ​​; ವಿದೇಶದಲ್ಲೂ ಸುದ್ದಿಯಾದ ಸುಳ್ಳು ವಿಜ್ಞಾನಿ

ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಪ್ರತಾಪ್​ ಗೆ ಸಂಸ್ಥೆ ಸೂಚಿಸಿದೆ. ಇದೇ ರೀತಿ ಡ್ರೋನ್​ ತನ್ನದು ಎಂದು ಹೇಳಿಕೊಳ್ಳುವುದನ್ನು ಆತ ಮುಂದುವರಿಸಿದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ.

news18-kannada
Updated:July 20, 2020, 4:08 PM IST
Drone Prathap: ಜರ್ಮನಿಯಲ್ಲೂ ಮಂಡ್ಯ ಡ್ರೋನ್​ನದ್ದೇ ಪ್ರತಾಪ​​; ವಿದೇಶದಲ್ಲೂ ಸುದ್ದಿಯಾದ ಸುಳ್ಳು ವಿಜ್ಞಾನಿ
ಡ್ರೋನ್ ಪ್ರತಾಪ್
  • Share this:
ಡ್ರೋನ್ ತಯಾರಿಸಿದ್ದೇನೆ ಎಂದು ಸುಳ್ಳು ಹೇಳುವ ಮೂಲಕ ಸಂಕಷ್ಟಕ್ಕೆ ಸಿಲುಕಿರುವ ಡ್ರೋನ್​ ಪ್ರತಾಪ್​ ಈಗ ಸಾಕಷ್ಟು ಟ್ರೋಲ್​​ ಆಗುತ್ತಿದ್ದಾರೆ. ಸಾಕಷ್ಟು ವಾಹಿನಿಗಳು ಡ್ರೋನ್ ಪ್ರತಾಪ್​ ಅಸಲಿ ಮುಖವನ್ನು ಬಯಲು ಮಾಡಿವೆ. ವಿಚಿತ್ರ ಎಂದರೆ ಜರ್ಮನಿಯಲ್ಲೂ ಡ್ರೋನ್​ ಪ್ರತಾಪ್​ ವಿರುದ್ಧ ಮಾಧ್ಯಮಗಳು ಹರಿಹಾಯ್ದಿವೆ. ಪ್ರತಾಪ್​ ಸುಳ್ಳು ಹೇಳುತ್ತಿದ್ದಾನೆ ಎಂದು ಸಾಕ್ಷಿ ಸಮೇತ ಬಿಚ್ಚಿಟ್ಟಿವೆ.

ಇಷ್ಟು ದಿನ ತಾನೇ ಸಿದ್ಧಪಡಿಸಿದ ಡ್ರೋನ್​ ಎಂದು ಹೇಳಿಕೊಂಡು ತಿರುಗಾಡುತ್ತಿದ್ದ ಪ್ರತಾಪ್​ ಅಸಲಿ ಮುಖವನ್ನು ಬಿಚ್ಚಿಟ್ಟಿದೆ ಬಿಲ್ಜ್​ ಐ ಮಲ್ಟಿ ಕಾಪ್ಟರ್​ ಸಿಸ್ಟಮ್​ ಹೆಸರಿನ ಸಂಸ್ಥೆ. ಸ್ಥಳೀಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಪ್ರತಾಪ್​ ಜರ್ಮನಿಗೆ ಏಕೆ ಬಂದಿದ್ದ? ಅಷ್ಟಕ್ಕೂ ಆತ ಡ್ರೋನ್​ ಪ್ರದರ್ಶನ ಮಾಡಿದ್ದನೇ? ಎನ್ನುವ ಬಗ್ಗೆ ಕಂಪೆನಿ ಮಾಹಿತಿ ನೀಡಿದೆ.

ಬಿಲ್ಜ್​ ಐ ಮಲ್ಟಿ ಕಾಪ್ಟರ್​ ಸಿಸ್ಟಮ್ ಹೇಳುವ ಪ್ರಕಾರ ಪ್ರತಾಪ್ ತೋರಿಸಿರುವ ಡ್ರೋನ್​ ಅವರದೇ ಸಂಸ್ಥೆ ತಯಾರು ಮಾಡಿದ್ದಂತೆ. “ 2018ರಂದು ಜರ್ಮನಿಯಲ್ಲಿ ನಡೆದ ಹ್ಯಾನೋವರ್​ ಪ್ರದರ್ಶನದಲ್ಲಿ ನಾವು ಸಿದ್ಧಪಡಿಸಿದ ಡ್ರೋನ್​ ಅನ್ನು  ಇಡಲಾಗಿತ್ತು. ಈ ವೇಳೆ ವಿಸಿಟರ್​ ಆಗಿ ಬಂದಿದ್ದ ಪ್ರತಾಪ್​ ಡ್ರೋನ್​ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದ. ಡ್ರೋನ್​ ಹೇಗೆ ಕಾರ್ಯ ನಿರ್ವಹಿಸುತ್ತದೆ, ಡ್ರೋನ್​ ಹೇಗೆ ಸಿದ್ಧಪಡಿಸಲಾಗುತ್ತದೆ ಎನ್ನುವ ವಿಚಾರದ ಬಗ್ಗೆ ಅಲ್ಲಿಯೇ ತಿಳಿದುಕೊಂಡಿದ್ದ. ಈ ವೇಳೆ ಡ್ರೋನ್​ ಎದುರು ನಿಂತು ಫೋಟೋ ಒಂದನ್ನು ತೆಗೆಸಿಕೊಂಡಿದ್ದ. ನಂತರ ಅದು ತಾನೇ ಸಿದ್ಧಪಡಿಸಿದ ಡ್ರೋನ್​ ಎಂದು ಹೇಳಿಕೊಂಡಿದ್ದ,” ಎಂದಿದೆ ಸಂಸ್ಥೆ.



ಪ್ರದರ್ಶನದ ವೇಳೆ ತೆಗೆಸಿಕೊಂಡಿದ್ದ ಫೋಟೋವನ್ನು ಇಟ್ಟುಕೊಂಡು ಪ್ರತಾಪ್​ ಈ ಡ್ರೋನ್​ ನಾನೇ ಸಿದ್ಧಪಡಿಸಿದ್ದೆ ಎಂದು ಸುಳ್ಳು ಹೇಳಿದ್ದ ಎಂಬುದು ಈಗ ಮತ್ತೊಮ್ಮ ಸಾಬೀತಾದಂತಾಗಿದೆ.  ಆ ಡ್ರೋನ್​ ತಾವು ತಯಾರಿಸಿದ್ದು. ಇದಕ್ಕೂ ಆತನಿಗೂ ಯಾವುದೇ ಸಂಬಂಧವಿಲ್ಲ ಎಂದು ಬಿಲ್ಜ್​ ಐ ಮಲ್ಟಿ ಕಾಪ್ಟರ್​ ಸಿಸ್ಟಮ್ ಸಂಸ್ಥೆ ಮಾಧ್ಯಮಕ್ಕೆ ತಿಳಿಸಿದೆ.

ಇನ್ನು, ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡುವಂತೆ ಪ್ರತಾಪ್ ಗೆ​ ಸಂಸ್ಥೆ ಸೂಚಿಸಿದೆ. ಇದೇ ರೀತಿ ಡ್ರೋನ್​ ತನ್ನದು ಎಂದು ಹೇಳಿಕೊಳ್ಳುವುದನ್ನು ಆತ ಮುಂದುವರಿಸಿದರೆ ಕಾನೂನಾತ್ಮಕವಾಗಿ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ.
Published by: Rajesh Duggumane
First published: July 20, 2020, 3:56 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading