ವಿಜಯಪುರ: ಬಸ್ (Bus) ಓಡಿಸುವಾಗಲೇ ಚಾಲಕನಿಗೆ ಹೃದಯಾಘಾತವಾಗಿ (Heart Attack) ಸಾವನ್ನಪ್ಪಿರುವ ಘಟನೆ ವಿಜಯಪುರ (Vijayapura) ಜಿಲ್ಲೆ ಸಿಂದಗಿ ನಗರದಲ್ಲಿ ನಡೆದಿದೆ. ಮುರಿಗೆಪ್ಪ ಅಥಣಿ ಎಂಬ ಚಾಲಕ ಬಸ್ ಚಲಾಯಿಸುತ್ತಿದ್ದ ಸಂದರ್ಭದಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ವೇಳೆ ನಿಯಂತ್ರಣ ತಪ್ಪಿ ಪೆಟ್ರೋಲ್ ಬಂಕ್‌ಗೆ (Petrol Bunk) ನುಗ್ಗಿದ ಸಾರಿಗೆ ಬಸ್ಅನ್ನು ಸಮಯಪ್ರಜ್ಞೆಯಿಂದ ಬ್ರೇಕ್ ಹಾಕಿ ನಿಲ್ಲಿಸಿದ ಕಂಡೆಕ್ಟರ್ ಶರಣು ಟಾಕಳಿ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.
ಕಲ್ಬುರ್ಗಿ ಜಿ. ಅಪ್ಜಲಪುರದಿಂದ ವಿಜಯಪುರಕ್ಕೆ ಹೊರಟಿದ್ದ ಬಸ್ ಹೆಡ್ ಲೈಟ್ ಸಮಸ್ಯೆಯಿಂದ ಪ್ರಯಾಣಿಕರನ್ನು ಕೆಳಗೆ ಇಳಿಸಿ, ಸಿಂದಗಿ ಡಿಪೋಗೆ ವಾಪಸ್ ಹೊರಟಿತ್ತು. ಈ ವೇಳೆ ಡ್ರೈವರ್ ಮುರಿಗೆಪ್ಪ ಅಥಣಿಗೆ ಹೃದಯಾಘಾತವಾಗಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಬಸ್‌ನಲ್ಲಿ ಪ್ರಯಾಣಿಕರು ಇಲ್ಲದೆ ಇದ್ದ ಕಾರಣ ಸಂಭವನೀಯ ಅಪಾಯ ತಪ್ಪಿದ್ದು, ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಪ್ಜಲಪುರ ಡಿಪೋ ಅಧಿಕಾರಿ, ಸಿಬ್ಬಂದಿ ಮೃತಪಟ್ಟ ಚಾಲಕನ ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸಿಂದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Bengaluru Crime: ಕತ್ತು ಸೀಳಿ ವ್ಯಕ್ತಿಯ ಬರ್ಬರ ಕೊಲೆ; ಸಿಟಿ ಮಾರ್ಕೆಟ್ ಬಸ್ ನಿಲ್ದಾಣದಲ್ಲಿ ಮೃತದೇಹ ಪತ್ತೆ!
ಟ್ರಾಫಿಕ್‌ನಲ್ಲಿ ಬಸ್ ನಿಲ್ಲಿಸಿಯೇ ಊಟ ಮಾಡಿದ ಚಾಲಕ
ಬೆಂಗಳೂರಿನ (Bengaluru) ಟ್ರಾಫಿಕ್ ಜಾಮ್ನಲ್ಲಿ (Traffic Jam) ನಡೆದಿರುವ ಘಟನೆ ವೈರಲ್ ಆಗಿದೆ. ಬೆಂಗಳೂರು ಪೀಕ್ ಟ್ರಾಫಿಕ್ ಟೈಂ ಹೇಗಿರುತ್ತೆ ಅನ್ನೋ ಬಗ್ಗೆ ಸಾಯಿ ಚಂದ್ ಎಂಬ ವ್ಯಕ್ತಿ ಇನ್ಸ್ಟಾಗ್ರಾಂ (Instagram) ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಸಂಚಾರ ದಟ್ಟಣೆಗೆ ಬಿಎಂಟಿಸಿ ಬಸ್ (BMTC Bus) ಚಾಲಕನ ಊಟ ಮಾಡುವ ದೃಶ್ಯ ಟ್ರಾಫಿಕ್ ಪರಿಸ್ಥಿತಿ ಹೇಳುವಂತಿದೆ. ಸಿಲ್ಕ್ ಬೋರ್ಡ್ ಜಂಕ್ಷನ್ನಲ್ಲಿ (Silk Board Junction) ಬಿಎಂಟಿಸಿ ಚಾಲಕ ತನ್ನ ಊಟದ ಬಾಕ್ಸ್ ಪೂರ್ತಿ ಖಾಲಿ ಮಾಡಿ, ನೀರು ಕುಡಿಯುವ ತನಕ ಟ್ರಾಫಿಕ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ