Driver Murder Case: ಚಾಲಕನ ಹತ್ಯೆ ಪ್ರಕರಣ: 6 ಹಂತಕರನ್ನು ಬಂಧಿಸಿದ ಬೆಳಗಾವಿ ಪೊಲೀಸರು

ಪ್ರಕರಣ ಸಂಬಂಧ ಆರು ಜನರನ್ನು ಬಂಧಿಸಲಾಗಿದ್ದು, ಜೋತಿರಾಜ ದೊಡ್ಡಮನಿ, ಅಕ್ಷಯ್ ಕೋಲಕಾರ, ಪ್ರಶಾಂತ್​ ಕಳ್ಳಿಮನಿ, ಪ್ರತಾಪ್ ಗರಾಣಿ, ರೋಹಿತ್ ದೊಡ್ಡಮನಿ, ಶಿವರಾಜ್​​ ದೊಡ್ಡಮನಿ ಬಂಧಿತ ಆರೋಪಿಗಳು.

ಆರೋಪಿಗಳು

ಆರೋಪಿಗಳು

  • Share this:
ಬೆಳಗಾವಿ(ಡಿಸೆಂಬರ್​. 18): ಬೆಳಗಾವಿ ನಗರದಲ್ಲಿ ನಿನ್ನೆ ಬೆಳ್ಳಂಬೆಳ್ಳಗ್ಗೆ ಲಾಂಗು, ಮಚ್ಚು ಜಳಪಿಸಿದ್ದವು. ನಗರದ ಅಂಬೇಡ್ಕರ್ ಗಲ್ಲಿಯಲ್ಲಿ ವಾಯು ವಿಹಾರಕ್ಕೆ ಹೋಗಿದ್ದ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಇದನ್ನು ಕಂಡು ಒಂದು ಕ್ಷಣ ದಂಗಾದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದರು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಸ್ಥಳೀಯರ ಸಹಾಯದಿಂದ ಕೊಲೆಯಾದ ವ್ಯಕ್ತಿ ಮಹಾನಗರ ಪಾಲಿಕೆಯ ಚಾಲಕ ಜಯಪಾಲ್ ಗುರಾಣಿ ಎಂದು ಗುರುತು ಪತ್ತೆಹಚ್ಚಿದ್ದರು. ಘಟನೆ ನಡೆದ 24 ಗಂಟೆಯಲ್ಲಿ ಶಾಹಪುರ ಪೊಲೀಸರು ಪ್ರಕರಣ ಭೇದಿಸಿದ್ದು, ಕೊಲೆ ಸಂಬಂಧ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಖಾಕಿ ಬಲೆಗೆ ಬಿದ್ದ ಹಂತಕರು  ಕೊಲೆಗೆ ಅಸಲಿ ಕಾರಣವನ್ನು ಬಿಚ್ಚಿಟ್ಟಿದ್ದು ನೋಡಿ ಕೊಲೆಯಾದ ಜಯಪಾಲ್ ಕುಟುಂಬಸ್ಥರು ತಬ್ಬಿಬ್ಬಾಗಿದ್ದಾರೆ. ತನ್ನ ಕೆಲಸವಾಯಿತು. ತಾನಾಯಿತು ಅಂತ ಇದ್ದ ಮಗನನ್ನು ಕೊಲೆ ಮಾಡಿದ್ದು, ಅಲ್ಲದೇ ನಮ್ಮ ಮಗನ ಹೆಸರಿಗೆ ಮಸಿ ಬಡೆಯುತ್ತಿದ್ದಾರೆ ಎಂದು ಅವಲತ್ತುಕೊಳ್ಳುತ್ತಿದ್ದಾರೆ.

ಹಂತಕರು ಹೇಳುವ ಪ್ರಕಾರ ಕೊಲೆಯಾದ ಜಯಪಾಲ್  ತಮ್ಮ ಮನೆ ಹೆಣ್ಣು ಮಕ್ಕಳನ್ನು ಹಾದಿ ಬೀದಿಯಲ್ಲಿ ಚುಡಾಯಿಸುತ್ತಿದ್ದ. ಇತ್ತೀಚಿಗೆ ನಡೆದ ಮದುವೆ ಸಂದರ್ಭದಲ್ಲಿ ಬಹಿರಂಗವಾಗಿಯೇ ಚುಡಾಯಿಸಿದ್ದ. ಹತ್ತಾರು ಬಾರಿ ಎಚ್ಚರಿಕೆ ಕೊಟ್ಟರು ಕೇಳದೇ ಇದ್ದಾಗ ಕೋಲೆ ಮಾಡಿದ್ದೇವು ಎಂದು ತಪ್ಪೊಪ್ಪಿಕೊಂಡಿದ್ದಾರೆ ಅಂತ ಪೋಲಿಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಆರು ಜನರನ್ನು ಬಂಧಿಸಲಾಗಿದ್ದು, ಬಂಧಿತರಿಂದ‌ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ‌. ಜೋತಿರಾಜ ದೊಡ್ಡಮನಿ, ಅಕ್ಷಯ್ ಕೋಲಕಾರ, ಪ್ರಶಾಂತ್​ ಕಳ್ಳಿಮನಿ, ಪ್ರತಾಪ್ ಗರಾಣಿ, ರೋಹಿತ್ ದೊಡ್ಡಮನಿ, ಶಿವರಾಜ್​​ ದೊಡ್ಡಮನಿ ಬಂಧಿತ ಆರೋಪಿಗಳು.

ಇದನ್ನೂ ಓದಿ : ಕೊಚ್ಚಿ ಮಾಲ್​ನಲ್ಲಿ ಮಲಯಾಳಂನ ಪ್ರಖ್ಯಾತ ನಟಿ ಜೊತೆ ಅಸಭ್ಯ ವರ್ತನೆ

ಪ್ರಕರಣ 24 ಗಂಟೆಯಲ್ಲಿ ಭೇದಿಸಿದ ಸಿಪಿಐ ರಾಘವೇಂದ್ರ ಹವಾಲ್ದಾರ್, ಪಿಎಸ್ಐ ಮಂಜುನಾಥ್ ಅವರ ಕಾರ್ಯಕ್ಕೆ ಡಿಸಿಪಿ ವಿಕ್ರಮ ಅಮಟೆ ಶ್ಲಾಘನೆ ಮಾಡಿದ್ದಾರೆ.

ತಮ್ಮ‌ ಹೆಣ್ಣು‌ಮಕ್ಕಳಿಗೆ ಚುಡಾಯಿಸಿದ ಎನ್ನುವ ಕಾರಣಕ್ಕೆ ಒಂದು ಕ್ಷಣದ ಸಿಟ್ಟಿನ ಭರದಲ್ಲಿ ಮಾರಕಾಸ್ತ್ರಗಳಿಂದ ಕೊಂದು ಹಾಕಿ ಜೈಲು ಪಾಲಾಗಿದ್ದಾರೆ. ಕರೆದು ಬುದ್ದಿವಾದ ಹೇಳಬೇಕಿತ್ತು. ಕೇಳದಿದ್ದರೆ ಪೋಲಿಸರಿಗೆ ದೂರು ನೀಡಬೇಕಿತ್ತು. ಆದರೆ, ಹತ್ಯೆ ಮಾಡುವ‌ ದುಡಕಿನ ನಿರ್ಧಾರದಿಂದ ಎರಡು ಕುಟುಂಬಗಳಿಗೂ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.
Published by:G Hareeshkumar
First published: