ಲಾಠಿ ಪ್ರಹಾರಕ್ಕೆ ಹೆದರಿ ಗಣೇಶ ಮೂರ್ತಿಯಿದ್ದ ಟ್ರ್ಯಾಕ್ಟರ್ ಬಿಟ್ಟು ಪರಾರಿಯಾದ ಚಾಲಕ


Updated:September 14, 2018, 8:54 AM IST
ಲಾಠಿ ಪ್ರಹಾರಕ್ಕೆ ಹೆದರಿ ಗಣೇಶ ಮೂರ್ತಿಯಿದ್ದ ಟ್ರ್ಯಾಕ್ಟರ್ ಬಿಟ್ಟು ಪರಾರಿಯಾದ ಚಾಲಕ

Updated: September 14, 2018, 8:54 AM IST
ಮಹೇಶ ವಿ. ಶಟಗಾರ, ನ್ಯೂಸ್ 18 ಕನ್ನಡ

ವಿಜಯಪುರ(ಸ. 14): ಗಣೇಶ ಮೂರ್ತಿ ಮೆರವಣಿಗೆ ನಡೆಸುತ್ತಿದ್ದ ಜನರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ ಆರೋಪ ಕೇಳಿ ಬಂದಿದೆ.

ವಿಜಯಪುರ ನಗರದ ಬಿಎಲ್‌ಡಿಇ ಎಂಜಿನಿಯರಿಂಗ್ ಕಾಲೇಜಿನ ಎದುರು ಆಸ್ರಮ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಗಣೇಶ ಮೂರ್ತಿಯ ಮೆರವಣಿಗೆಯನ್ನು ಪೊಲೀಸರು ತಡೆದಿದ್ದಾರೆ ಎಂದು ಆಕೋಪಿಸಲಾಗಿದೆ.

ನಿನ್ನೆ ರಾತ್ರಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದ್ದು, ಮೆರವಣಿಗೆ ಮೂಲಕ ಗಣೇಶ ಮೂರ್ತಿ ಪ್ರತಿಷ್ಟಾಪಿಸಲು ತೆರಳುತ್ತಿದ್ದಾಗ ಟ್ರಾಫಿಕ್ ಜಾಮ್ ಆಗಿದೆಯೆಂದು ಆರೋಪಿಸಿದ ಪೊಲೀಸರು  ಮೆರವಣಿಗೆಯನ್ನು ತಡೆದಿದ್ದಾರೆ.  ಬೇಗ ಮೆರವಣಿಗೆ ಮುಗಿಸಬೇಕು ಎಂದು ಸೂಚಿಸಿದ ಎಪಿಎಂಸಿ ಠಾಣೆ ಪೊಲೀಸರು ಸೂಚಿಸಿದಾಗ ಮೆರವಣಿಗೆಕಾರರ ಹಾಗೂ ಪೊಲೀಸರ ನಡುವೆ  ಮಾತಿನ ಚಕಮಕಿ ನಡೆದಿದೆ.  ಆಗ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.  ಆಗ ಚಾಲಕ ಗಣೇಸ ಮೂರ್ತಿ ಇದ್ದ ಟ್ರ್ಯಾಕ್ಟರನ್ನು ಬಿಟ್ಟು ಪರಾರಿಯಾಗಿದ್ದಾನೆ.  ನಂತರ ಎಪಿಎಂಸಿ ಪಿಎಸ್ಐ ಪಾಟೀಲ ಮತ್ತು ಸಿಬ್ಬಂದಿ ಟ್ರ್ಯಾಕ್ಟರ್ ಜೊತೆ ಅಲ್ಲಿಂದ ತೆರಳುವಂತೆ ಮೆರಮವಣಿಗೆಕಾರರಿಗೆ ಎಚ್ಚರಿಕೆ ನೀಡಿದ್ದಾರೆ.

ವಿಜಯಪುರ ನಗರದ ಆಶ್ರಮ ಬಡವಾವಣೆಯ ಲಕ್ಷ್ಮೀ ಗಜಾನನ ತರುಣ ಮಂಡಳಿ ವತಿಯಿಂದ ನಡೆಯುತ್ತಿದ್ದ ಮೆರವಣಿಗೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಮಂಡಳಿಯವರು ಆರೋಪಿಸಿದ್ದಾರೆ. ನೇತೃತ್ವದಲ್ಲಿ ನಡೆಯುತ್ತಿದ್ದ ಮೆರವಣಿಗೆ.
First published:September 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ