Accident: ಓವರ್ ಟೇಕ್ ಗುದ್ದಾಟ; ಪರಸ್ಪರ ಡಿಕ್ಕಿ ಹೊಡೆದು, ಪಲ್ಟಿಯಾಗಿ ಹೊತ್ತಿ ಉರಿದ ಲಾರಿಗಳು

ಓರ್ವ ಚಾಲಕ ಹೊರ ಬರಲಾಗದೇ ಅಲ್ಲೇ ಸಜೀವ ದಹನವಾಗಿದ್ದಾನೆ. ಓರ್ವನನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಗಾಯಾಳು ಚಾಲಕನನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತದ ದೃಶ್ಯ

ಅಪಘಾತದ ದೃಶ್ಯ

  • Share this:
ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ದೇವನಹಳ್ಳಿ (Devanahalli) ಬಳಿ ಎರಡು ಸಿಮೆಂಟ್ ಲಾರಿ(Cement Lorry)ಗಳು ಪರಸ್ಪರ ಡಿಕ್ಕಿಯಾಗಿ ಸ್ಥಳದಲ್ಲಿ ಹೊತ್ತಿ ಉರಿದಿವೆ. ಈ ಅಪಘಾತ(Accident)ದಲ್ಲಿ ಓರ್ವ ಸಜೀವ ದಹನವಾಗಿದ್ದು, ಡಿಕ್ಕಿಯ ರಭಸಕ್ಕೆ ಲಾರಿಯ ಮುಂಭಾಗ ಅಪ್ಪಚ್ಚಿಯಾಗಿರಯವ ಕಾರಣ ಚಾಲಕನ ಮೃತದೇಹ (Driver Dead body) ವಾಹನದ ಅವಶೇಷಗಳಡಿ ಸಿಲುಕಿದೆ. ದೇವನಹಳ್ಳಿ ರಾಷ್ಟ್ರೀಯ ಹೆದ್ದಾರಿ 7 (National Highway) ರ ಭುಕ್ತಿ ಡಾಬಾ ಬಳಿ ಈ ಭೀಕರ ಅಪಘಾತ ಸಂಭವಿಸಿದೆ.  ಎರಡೂ ಲಾರಿಗಳು  ಚಿಕ್ಕಬಳ್ಳಾಪುರದಿಂದ ಬೆಂಗಳೂರಿನ (Chikkaballapur To Bengaluru) ಕಡೆ ಹೊರಡುತ್ತಿದ್ದವು. ಈ ಸಮಯದಲ್ಲಿ ಎರಡೂ ಲಾರಿ ಚಾಲಕರ ನಡುವೆ ರೇಸ್ ಏರ್ಪಟ್ಟಿದೆ.

ಓವರ್ ಟೇಕ್ ಮಾಡಲು ಹೋದ ವೇಳೆ ಎರಡೂ ಲಾರಿಗಳು ಪರಸ್ಪರ ಡಿಕ್ಕಿಯಾಗಿವೆ. ಲಾರಿಗಳು ವೇಗ ಹೆಚ್ಚಾಗಿದ್ದರಿಂದ ರಸ್ತೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಬಂದು ಪಲ್ಟಿಯಾಗಿವೆ.

ಸ್ಥಳೀಯರಿಂದ ಓರ್ವ ಚಾಲಕನ ರಕ್ಷಣೆ

ಕ್ಷಣಾರ್ಧದಲ್ಲಿಯೇ ಲಾರಿಗಳಿಗೆ ಬೆಂಕಿ ಹತ್ತಿಕೊಂಡಿದೆ. ಓರ್ವ ಚಾಲಕ ಹೊರ ಬರಲಾಗದೇ ಅಲ್ಲೇ ಸಜೀವ ದಹನವಾಗಿದ್ದಾನೆ. ಓರ್ವನನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ಗಾಯಾಳು ಚಾಲಕನನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

ಲಾರಿಗೆ ಬೆಂಕಿ ಹತ್ತಿಕೊಳ್ಳುತ್ತಿದ್ದಂತೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಪೊಲೀಸರು ಆಗಮಿಸಿ ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ. ವಿಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ. ಚಾಲಕರು ಎಲ್ಲಿಯವರು ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: Houdda Huliya: ಉತ್ತರ ಕರ್ನಾಟಕದಲ್ಲಿ ನಾಟಕವಾಗಿ ಪ್ರದರ್ಶನಗೊಳ್ಳುತ್ತಿರುವ ‘ಹೌದ್ದ ಹುಲಿಯಾ’.. ಭರ್ಜರಿ ಕಲೆಕ್ಷನ್

Siddaramaiah: ಜಾತ್ರಾ ಮಹೋತ್ಸವದಲ್ಲಿ ಸಿದ್ದರಾಮಯ್ಯ ವೀರಕುಣಿತ; ವಿಡಿಯೋ ವೈರಲ್

ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ನಿನ್ನೆ ಹುಟ್ಟೂರು ಸಿದ್ದರಾಮನಹುಂಡಿ (Siddaramana Hundi Village) ಗ್ರಾಮಕ್ಕೆ ಭೇಟಿ ನೀಡಿ, ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಾಗಿಯಾಗಿದ್ದರು. ಈ ವೇಳೆ ಗ್ರಾಮಸ್ಥರ ಜೊತೆಗೂಡಿ ಸುಮಾರು 40 ನಿಮಿಷಕ್ಕೂ ಹೆಚ್ಚು ಕಾಲ ಜಾನಪದ ವಾದ್ಯಗಳ ಹಿಮ್ಮೇಳಕ್ಕೆ ಹೆಜ್ಜೆ ಹಾಕಿದರು. ಸಿದ್ದರಾಮಯ್ಯನವರು ಹೆಜ್ಜೆ ಹಾಕಿದ್ದು, ನೋಡಿದ್ರೆ ಸುಮಾರು ದಿನಗಳಿಂದ ಪ್ರ್ಯಾಕ್ಟಿಸ್ ಮಾಡಿರುವ ಹಾಗೆ ಕಾಣುತ್ತಿತ್ತು. 15 ವರ್ಷದ ಬಳಿಕ ಸಿದ್ದರಾಮಯ್ಯನವರು ವೀರ ಕುಣಿತ(Veera Kunita)ದಲ್ಲಿ ಭಾಗಿಯಾಗಿದ್ದಾರೆ. ಈ ಹಿಂದೆ ಉಪ ಮುಖ್ಯಮಂತ್ರಿಯಾಗಿದ್ದ ವೇಳೆ ಜಾತ್ರೆಯಲ್ಲಿ ವೀರ ಕುಣಿತಕ್ಕೆ ಹೆಜ್ಜೆ ಹಾಕಿದ್ದರು.

ಸಾರಿಗೆ ಸಚಿವರ ಕ್ಷೇತ್ರದಲ್ಲಿಯೇ ಮಿತಿ ಮೀರಿದ ಆಟೋ, ಟೆಂಪೋ, ಖಾಸಗಿ ಬಸ್ ಟಾಪ್​ಗಳಲ್ಲಿ ಅಪಾಯಕಾರಿ ಪ್ರಯಾಣ

ತಿ ಮೀರಿದ ಬಸ್ ಟಾಪ್ (Bus top) ಪ್ರಯಾಣ ಮಾಡುವ ವೇಳೆ ಪಾವಗಡ ತಾಲ್ಲೂಕಲ್ಲಿ ನಡೆದ ಬೀಕರ ಅಪಘಾತದ ಬಳಿಕ ಸಾರಿಗೆ ಸಚಿವ ಬಿ. ಶ್ರೀರಾಮುಲು (B Sriramulu) ಸ್ಥಳಕ್ಕೆ ಬೇಟಿ ನೀಡಿ ಹೈಡ್ರಾಮ ಮಾಡಿದ್ರು. ಆದರೇ ಅವರದೇ ಸ್ವ ಕ್ಷೇತ್ರದಲ್ಲಿ ಸಮರ್ಪಕ ಸಾರಿಗೆ ವ್ಯವಸ್ಥೆ (Transport System) ಇಲ್ಲದೆ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಖಾಸಗಿ ಬಸ್ (Private bus), ಆಟೋ, ಟೆಂಪೋ, ಲಾರಿ ಟಾಪ್ ಏರಿ ಜೋತುಬಿದ್ದು ಪ್ರಯಾಣ ಮಾಡೋ ಪರಿಸ್ಥಿತಿ ಮಾತ್ರ ಜೀವಂತವಿದೆ.

ಸಾರಿಗೆ ಸಚಿವ ಬಿ. ಶ್ರೀ ರಾಮುಲು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದವರು. ಪ್ರಸ್ತುತ ಆಕ್ಷೇತ್ರದ ಬಡತನ ಕಂಡು ಅಭಿವೃದ್ದಿಯ ಮಂತ್ರ ಜಪಿಸಬೇಕಾದವರು. ಆದರೇ ಸಾರಿಗೆ ಸಚಿವ ಬಿ.ಶ್ರೀರಾಮುಲು ಕ್ಷೇತ್ರದಲ್ಲಿ ಬಸ್ಸಿಲ್ಲದೆ ಇಂದಿಗೂ ವಿಧ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳೋಕೆ ಪರದಾಟ ನಡೆಸುವ ಪರಿಸ್ಥಿತಿ ಇದೆ.

ಇದನ್ನೂ ಓದಿ:  ಹರ್ಷನ ಕುಟುಂಬಕ್ಕೆ ₹25 ಲಕ್ಷ, ST ವ್ಯಕ್ತಿಯ ಕುಟುಂಬಕ್ಕೆ ಕೇವಲ 4 ಲಕ್ಷ ಏಕೆ.. Siddaramaiah ಪ್ರಶ್ನೆ

ತಾಲ್ಲೂಕಿನ ಗಡಿ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳು ಶಿಕ್ಷಣ ಕಲಿಯೋಕೆ ಪ್ರಾಣದ ಹಂಗು ತೊರೆದು,ಆಟೋ, ಟೆಂಪೋ, ಲಾರಿ, ಖಾಸಗಿ ಬಸ್ ಗಳ ಟಾಪ್ ಹತ್ತಿ ಪ್ರಯಾಣ, ಕೈಯಲ್ಲಿ ಜೀವ ಬಿಗಿ ಹಿಡಿದು ಪ್ರಯಾಣ ಮಾಡುತ್ತಿದ್ದಾರೆ. ಕಾರಣ ಮೊಳಕಾಲ್ಮೂರು ಕ್ಷೇತ್ರದ ಹಲವು ಹಳ್ಳಿಗಳಿಗೆ ಬಸ್ ಸಂಚಾರವೇ ಇಲ್ಲವಾಗಿದ್ದು, ಗ್ರಾಮೀಣ ಪ್ರದೇಶದ ಹಳ್ಳಿಗಳಿಗೆ ಸರ್ಕಾರಿ ಬಸ್ ಇಲ್ಲದೇ ಖಾಸಗಿ ವಾಹನಗಳನ್ನೇ ಇಲ್ಲಿನ ಜನರು ಅವಲಂಬಿಸಿದ್ದಾರೆ.
Published by:Mahmadrafik K
First published: