ಬೇಸಿಗೆ ವೇಳೆಗೆ ಚಿತ್ರದುರ್ಗ ಜಿಲ್ಲೆಯ 132 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಅಭಾವ ಹೆಚ್ಚುವ ಸಾಧ್ಯತೆ

 ಚಳ್ಳಕೆರೆ ತಾಲ್ಲೂಕಿನ 26 ಗ್ರಾಮಗಳು, ಚಿತ್ರದುರ್ಗ-26, ಹಿರಿಯೂರು-21, ಹೊಳಲ್ಕೆರೆ-23, ಹೊಸದುರ್ಗ ತಾಲ್ಲೂಕಿನ 26 ಗ್ರಾಮಗಳು ಹಾಗೂ ಮೊಳಕಾಲ್ಮೂರು ತಾಲ್ಲೂಕಿನ 10 ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಇಲಾಖೆ ಗುರುತಿಸಿದೆ.

ನೀರು

ನೀರು

  • Share this:
ಚಿತ್ರದುರ್ಗ(ಫೆ.12): ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೆಆರ್​​​​ಐಡಿಎಲ್​​, ಸಂಸದರ ಹಾಗೂ ಶಾಸಕರ ಅನುದಾನ ಹಾಗೂ ಕೆಎಂಎಫ್ ಅನುದಾನದ ಅಡಿಯಲ್ಲಿ 2020ರ ಡಿಸೆಂಬರ್ 31ರ ಅಂತ್ಯಕ್ಕೆ  ಜಿಲ್ಲೆಯಾದ್ಯಂತ ಒಟ್ಟು 978 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 1080 ಶುದ್ಧ ಕುಡಿಯುವ ನೀರಿನ ಘಟಕಗಳು ಅನುಮೋದನೆಗೊಂಡಿವೆ.  ಇದರಲ್ಲಿ 1052 ಘಟಕಗಳನ್ನು ಅಳವಡಿಸಲಾಗಿದೆ. 978 ಶುದ್ಧ ಕುಡಿಯುವ ನೀರಿನ ಘಟಕಗಳು ಜಿಲ್ಲೆಯಾದ್ಯಂತ ಕಾರ್ಯನಿರ್ವಸುತ್ತಿದ್ದು, ಇನ್ನುಳಿದಂತೆ 74 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸಬೇಕಾಗಿದೆ.

ಇನ್ನೂ ಚಳ್ಳಕೆರೆ ತಾಲ್ಲೂಕಿನಲ್ಲಿ 288 ಘಟಕಗಳು ಅನುಮೋದನೆಗೊಂಡಿದ್ದು, ಅದರಲ್ಲಿ 278 ಘಟಕಗಳು ಕಾರ್ಯಾರಂಭವಾಗಿವೆ. ಇದರಲ್ಲಿ 257 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇನ್ನೂ ಸಹ 21 ಘಟಕಗಳು ಕಾರ್ಯನಿರ್ವಹಣೆಯಾಗಬೇಕಿದೆ. ಚಿತ್ರದುರ್ಗ ತಾಲ್ಲೂಕಿನಲ್ಲಿ 189 ಘಟಕಗಳು ಅನುಮೋದನೆಯಾಗಿವೆ. 188 ಘಟಕಗಳು ಕಾರ್ಯಾರಂಭವಾಗಿದ್ದು, 176 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇನ್ನು 12 ಘಟಕಗಳು ಆರಂಭವಾಗುವುದು ಬಾಕಿ ಇದೆ.

ಹಿರಿಯೂರು ತಾಲ್ಲೂಕಿನಲ್ಲಿ 214 ಘಟಕಗಳಿಗೆ ಅನುಮೋದನೆ ಸಿಕ್ಕಿದ್ದು, 201 ಘಟಕಗಳು ಕಾರ್ಯಾರಂಭವಾಗಿವೆ. ಇದರಲ್ಲಿ 190 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇನ್ನೂಳಿದ 11 ಘಟಕಗಳು ಕಾರ್ಯನಿರ್ವಹಿಸಬೇಕಿದೆ.  ಹೊಳಲ್ಕೆರೆ ತಾಲ್ಲೂಕಿನಲ್ಲಿ 149 ಘಟಕಗಳು ಅನುಮೋದನೆಗೊಂಡಿದ್ದು, 145 ಘಟಕಗಳು ಕಾರ್ಯಾರಂಭವಾಗಿವೆ. ಇದರಲ್ಲಿ 135 ಆರ್​​ಒ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಇನ್ನುಳಿದಂತೆ 10 ಘಟಕಗಳು ಕಾರ್ಯನಿರ್ವಹಿಸಬೇಕಿದೆ. ಹೊಸದುರ್ಗ ತಾಲ್ಲೂಕಿನಲ್ಲಿ 162 ಘಟಕಗಳಿಗೆ ಅನುಮೋದನೆಗೊಂಡು ಅದರಲ್ಲಿ 162 ಘಟಕಗಳು ಕಾರ್ಯಾರಂಭವಾಗಿವೆ.

ವಿಮಾನ ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ; ವಿಮಾನಯಾನ ಶುಲ್ಕ ಮಿತಿಗಳು ಶೇ. 30 ರವರೆಗೆ ಹೆಚ್ಚಳ

153 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ 09 ಘಟಕಗಳು ಕಾರ್ಯನಿರ್ವಹಿಸುವುದು ಬಾಕಿ ಇದೆ. ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಒಟ್ಟು 78 ಘಟಕಗಳು ಅನುಮೋದನೆಯಾಗಿದ್ದು, ಅನುಮೋದನೆಗೊಂಡ ಎಲ್ಲ ಘಟಕಗಳೂ ಕಾರ್ಯಾರಂಭಗೊಂಡಿದ್ದು, ಇದರಲ್ಲಿ 67 ಶುದ್ಧ ಕುಡಿಯುವ ನೀರಿನ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಉಳಿದ 11 ಘಟಕಗಳು ಕಾರ್ಯ ನಿರ್ವಹಿಸುವುದು ಬಾಕಿ ಇದೆ.

ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದಾದ ಜಿಲ್ಲೆಯಲ್ಲಿ ಒಟ್ಟು 132 ಗ್ರಾಮಗಳನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಗುರುತಿಸಿದೆ. ಅಲ್ಲದೇ ಚಳ್ಳಕೆರೆ ತಾಲ್ಲೂಕಿನ 26 ಗ್ರಾಮಗಳು, ಚಿತ್ರದುರ್ಗ-26, ಹಿರಿಯೂರು-21, ಹೊಳಲ್ಕೆರೆ-23, ಹೊಸದುರ್ಗ ತಾಲ್ಲೂಕಿನ 26 ಗ್ರಾಮಗಳು ಹಾಗೂ ಮೊಳಕಾಲ್ಮೂರು ತಾಲ್ಲೂಕಿನ 10 ಗ್ರಾಮಗಳಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಇಲಾಖೆ ಗುರುತಿಸಿದೆ.

2020-2021ನೇ ಸಾಲಿನಲ್ಲಿ ತುರ್ತು ಕುಡಿಯುವ ನೀರಿನ ಯೋಜನೆಯ ಕಾರ್ಯಪಡೆ ಅಡಿ 2020ರ ಡಿಸೆಂಬರ್ 31ರ ಅಂತ್ಯಕ್ಕೆ ಜಿಲ್ಲೆಯಲ್ಲಿ ಒಟ್ಟು 192 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.ಅದಕ್ಕಾಗಿ ರೂ.450 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ರೂ.318.90 ಲಕ್ಷ ಅನುದಾನ ವೆಚ್ಚ ಮಾಡಲಾಗಿದೆ.
Published by:Latha CG
First published: