ಒಂದೂವರೆ ತಿಂಗಳಿಂದ ಹಳ್ಳದ ಗಲೀಜು ನೀರು ಕುಡಿದು ಬದುಕುತ್ತಿರುವ ಹೆಬ್ಬಾಳ ಗ್ರಾಮಸ್ಥರು; ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು

ಕಳೆದ ಒಂದೂವರೆ ತಿಂಗಳಿಂದ ಹನಿ ನೀರಿಗಾಗಿ ಈ ಗ್ರಾಮದಲ್ಲಿ ಹಾಹಾಕಾರ ಶುರುವಾಗಿದೆ. ಕುಡಿಯೋ ನೀರಿಗಾಗಿ ನಿತ್ಯವು ಗ್ರಾಮದ ಒಂದು ಕೀ.ಮಿ ದೂರದಲ್ಲಿ ಹರಿಯುವ ಹಳ್ಳದ ನೀರನ್ನೆ ಅವಲಂಭನೆ ಮಾಡಿದ್ದಾರೆ.

ಕೊಡದಲ್ಲಿ ನೀರು ತರುತ್ತಿರುವ ಗ್ರಾಮಸ್ಥರು

ಕೊಡದಲ್ಲಿ ನೀರು ತರುತ್ತಿರುವ ಗ್ರಾಮಸ್ಥರು

  • Share this:
ಧಾರವಾಡ(ಡಿ.12): ಇಷ್ಟು ದಿನ ತಮ್ಮ ಕುರ್ಚಿ ಉಳಿಸಿಕೊಳ್ಳಲು ಬಿಜೆಪಿ ಸರ್ಕಾರ ಹರಸಾಹಸ ಪಟ್ಟಿದ್ದು ಆಯಿತು, ಉಪಚುನಾವಣೆ ಸಂದರ್ಭದಲ್ಲಿ ನಿಮ್ಮೆಲ್ಲ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸುವುದಾಗಿ ಮತದಾರರಿಗೆ ಭರವೆಯ ಮಾತುಗಳನ್ನ ಆಡಿದ್ದು ಆಯ್ತು. ಆದರೆ, ರಾಜ್ಯದ ಉಳಿದ ಜಿಲ್ಲೆಯ ಜನರ ಸಮಸ್ಯೆಗಳನ್ನ ಕೇಳೊರು ಯಾರು ಇಲ್ಲವಾಗಿದೆ.

ಜಿಲ್ಲೆಯ ನವಲಗುಂದ ತಾಲೂಕಿನ ಹೆಬ್ಬಾಳ ಊರಿನ ಜನರಿಗೆ ಈ ಹಳ್ಳದಲ್ಲಿ ಹರಿದು ಬರುವ ಈ ಗಲೀಜು ನೀರೇ ಕುಡಿದು ಬದುಕಬೇಕಾಗಿದೆ. ಕಳೆದ ಒಂದೂವರೇ ತಿಂಗಳಿಂದ ಇಲ್ಲಿನ ಜನರು ಈ ಹಳ್ಳದ ಕೊಳಕು ನೀರನ್ನೆ ಕುಡಿಯುತ್ತಿದ್ದಾರೆ. ಊರಲ್ಲಿ ಇರುವ ಒಂದೇ ಒಂದು ಕುಡಿಯೊ ನೀರಿನ ಕೆರೆ ಇದೆ, ಅದು ಸಹ ಸದ್ಯ ಖಾಲಿಯಾಗಿದೆ, ಕೆರೆಗೆ ನೀರು ತುಂಬಿಸಲು ಕೆರೆ ಹೂಳೆತ್ತುವ ಕಾರಣ ಹೇಳಿದ ಸ್ಥಳೀಯ ಅಧಿಕಾರಿಗಳು ಕೆರೆಗೆ ನೀರು ತುಂಬಿಸಲು ಹಿಂದೆಟು ಹಾಕುತ್ತಿದ್ದಾರೆ.

ಕಳೆದ ಒಂದೂವರೆ ತಿಂಗಳಿಂದ ಹನಿ ನೀರಿಗಾಗಿ ಈ ಗ್ರಾಮದಲ್ಲಿ ಹಾಹಾಕಾರ ಶುರುವಾಗಿದೆ. ಕುಡಿಯೋ ನೀರಿಗಾಗಿ ನಿತ್ಯವು ಗ್ರಾಮದ ಒಂದು ಕೀ.ಮಿ ದೂರದಲ್ಲಿ ಹರಿಯುವ ಹಳ್ಳದ ನೀರನ್ನೆ ಅವಲಂಭನೆ ಮಾಡಿದ್ದಾರೆ. ನಿತ್ಯವು ಜನ-ಜಾನುವಾರಗಳಿಗೆ ಕುಡಿಯೋ ನೀರು ಇದೇ ಹಳ್ಳದ ಕಲುಷಿತ ನೀರನ್ನೇ ಉಪಯೋಗ ಮಾಡುತ್ತಿದ್ದಾರೆ. ಆದ್ರೆ ಅಧಿಕಾರಿಗಳು ಮಾತ್ರ ಕಣ್ಣ ಮುಚ್ಚಿ ಕುಳಿತಿದ್ದಾರೆ.

ಈ ನೀರು ಕುಡಿಯೊಕೆ ಯೊಗ್ಯವಲ್ಲ ಎಂದು ಅರಿತರು ಅನಿವಾರ್ಯವಾಗಿ ಇದೇ ಹಳ್ಳದ ಕಲುಷಿತ ನೀರನ್ನು ನಿತ್ಯವು ಬಳಕೆ ಮಾಡುತ್ತಾರೆ. ಈ ನೀರನ್ನು ಕುಡಿದ ಹಳ್ಳಿಯ ಹಲವು ಜನರು ಅನಾರೊಗ್ಯಕ್ಕೆ ತುತ್ತಾಗುತ್ತಿದ್ದಾರೆ. ಆದರೆ, ಇದೇ ಹಳ್ಳ ಕೆಲವು ಮಕ್ಕಳು ಶಾಲೆ ಬಿಟ್ಟು ನೀರು ತರುಲು ಹೋಗಬೇಕಾಗುತ್ತದೆ. ಇನ್ನೂ ಕೆಲವು ನಿತ್ಯದ ಕೆಲಸ ಬಿಟ್ಟು ನೀರು ತರುವುದೇ ಒಂದು ಕೆಲಸವಾಗಿದೆ.

ಇದನ್ನೂ ಓದಿ : ಕಾಂಗ್ರೆಸ್ ಪಕ್ಷವನ್ನ ಮುಳುಗಿಸುವವರೇ ನಾಯಕತ್ವ ಬಿಟ್ಟು ಹೋಗಿರೋದು ದೊಡ್ಡ ಭಾಗ್ಯ ; ಹೆಚ್.ವಿಶ್ವನಾಥ್

ಗ್ರಾಮೀಣ ಭಾಗಗಳಿಗೆ ಶೂದ್ಧ ನೀರಿನ ಘಟಕ ಸ್ಥಾಫನೆ ಮಾಡಿ ಶುದ್ಧ ನೀರು ನೀಡಲಾಗುತ್ತಿದೆ. ಆದರೆ ಕೆಲವು ಗ್ರಾಮಗಳನ್ನು ಬಿಟ್ರೆ ಇನ್ನೂಳಿದಂತೆ ಹಲವು ಗ್ರಾಮಗಳಲ್ಲಿ ಕೆರೆ ಹಾಗೂ ಹಳ್ಳದ ನೀರನ್ನೇ ಅವಲಂಬನೆ ಆಗಿದ್ದಾರೆ. ಅಲ್ಲದೇ ಕೆರೆ ಖಾಲಿಯಾಗಿ ಸದ್ಯ ಹಳ್ಳದ ಕಲುಷಿತ ನೀರನ್ನ ಕುಡಿದು ಆರೋಗ್ಯ ಹಾಳು ಮಾಡಿಕೋಲ್ಳುತ್ತಿರೊ ಗ್ರಾಮಸ್ಥರಿಗೆ ಪರ್ಯಾರ ಕುಡಿಯೋ ನೀರಿನ ವ್ಯವಸ್ಥೆ ಮಾಡುವಲ್ಲಿ ಮೇಲಾಧಿಕಾರಿಗಳು ಗಮನ ಹರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

(ವರದಿ : ಮಂಜುನಾಥ ಯಡಳ್ಳಿ)

 
Published by:G Hareeshkumar
First published: