• Home
 • »
 • News
 • »
 • state
 • »
 • Summer Season: ಬಳ್ಳಾರಿಯಲ್ಲಿ ಬೇಸಿಗೆ ಆರಂಭ ಕಾಲದಲ್ಲೇ ನೀರಿಗಾಗಿ ಹಾಹಾಕಾರ

Summer Season: ಬಳ್ಳಾರಿಯಲ್ಲಿ ಬೇಸಿಗೆ ಆರಂಭ ಕಾಲದಲ್ಲೇ ನೀರಿಗಾಗಿ ಹಾಹಾಕಾರ

ಕುಡಿಯುವ ನೀರಿನ ಸಮಸ್ಯೆ

ಕುಡಿಯುವ ನೀರಿನ ಸಮಸ್ಯೆ

ಬಳ್ಳಾರಿ ತಾಲೂಕಿನ ಶಂಕರಬಂಡೆ ಗ್ರಾಮದಲ್ಲಿ ಸತತ ಮೂರ್ನಾಲ್ಕು ವರ್ಷಗಳಿಂದಲೂ ಸರಿಯಾದ ಕುಡಿಯುವ ನೀರಿನ ಸೌಲಭ್ಯವಿಲ್ಲದೆ ಇಲ್ಲಿಯ ಜನ ಕಂಗಾಲಾಗಿದ್ದಾರೆ. ಅದರಲ್ಲೂ ಇಲ್ಲಿನ ಪ್ರಮುಖ ಸಮಸ್ಯೆ ಎಂದರೆ, ಒಳಚರಂಡಿ ಗುಂಡಿ ಆಳದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ನಲ್ಲಿ ಸಂಪರ್ಕ ಮಾಡಲಾಗಿದೆ. ‌

ಮುಂದೆ ಓದಿ ...
 • Share this:

  ಬಳ್ಳಾರಿ(ಮಾ.25): ಬಿರು ಬೇಸಿಗೆ ಆರಂಭಕ್ಕೂ ಮುನ್ನವೇ ಗಣಿನಾಡು ಬಳ್ಳಾರಿ ಜಿಲ್ಲಾದ್ಯಂತ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ.‌ ಕುಡಿಯುವ ನೀರಿನ ಅಭಾವದಿಂದಾಗಿ ಬಸವಳಿದ ಜನ‌ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಬೇಸಿಗೆಯಲ್ಲಿ ಒಂದು ಹೊತ್ತಿನ ಊಟ ಕಡಿಮೆ ಸಿಕ್ಕರೂ ಕುಡಿಯುವ ನೀರು ಮಾತ್ರ ಬಹಳ ಮುಖ್ಯವಾಗುತ್ತೆ. ಬಳ್ಳಾರಿಯ ಕೆಲಭಾಗಗಳಲ್ಲಿ ಈಗಲೂ ಕೂಡ ನೀರಿನ ಅಭಾವ ಕಡಿಮೆ ಆಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯವೊ ಅಥವಾ ಜನಪ್ರತಿನಿಧಿಗಳ  ಆಲಸ್ಯವೊ ಗೊತ್ತಿಲ್ಲ ಇವರಿಬ್ಬರ ನಡುವೆ ಬಡವಾಗಿದ್ದು ಮಾತ್ರ ಜನ ಸಾಮಾನ್ಯರು.


  ಬೆಳಿಗ್ಗೆ ಆದರೆ ಸಾಕು, ದಿನಂಪ್ರತಿ ಕೇಲಸದ ಚಿಂತೆಗಿಂತ ನೀರಿನ ಸಂಗ್ರಹದ ಚಿಂತೆಯ ಇಲ್ಲಿಯ ಜನ್ರಿಗೆ ತೆಲೆನೋವಾಗಿದೆ. ಹೀಗೆ ಒಂದೆ ಕಡೆ ನೀರಿನ ಟ್ಯಾಂಕರ್ ಗಾಗಿ ಕಾಯುತ್ತಿರುವ ಜನ ಮತ್ತೊಂದು ಕಡೆ ಬತ್ತಿದ ಕೊಳವೆಯಲ್ಲಿ ನೀರು ತರಿಸಲು ಸತತ ಪ್ರಯತ್ನ ಮಾಡುತ್ತಿರುವ ಯುವಕರು. ಹಾಗೂ ಹೀಗೂ ಏನೊ ಪ್ರಯತ್ನ ಮಾಡಿ ಬತ್ತಿದ ಬೋರವೆಲ್‌ನಲ್ಲಿ ನೀರು ತರಿಸಿದ ಭಗೀರಥ.


  ಬಳ್ಳಾರಿ ತಾಲೂಕಿನ ಶಂಕರಬಂಡೆ ಗ್ರಾಮದಲ್ಲಿ ಸತತ ಮೂರ್ನಾಲ್ಕು ವರ್ಷಗಳಿಂದಲೂ ಸರಿಯಾದ ಕುಡಿಯುವ ನೀರಿನ ಸೌಲಭ್ಯವಿಲ್ಲದೆ ಇಲ್ಲಿಯ ಜನ ಕಂಗಾಲಾಗಿದ್ದಾರೆ. ಅದರಲ್ಲೂ ಇಲ್ಲಿನ ಪ್ರಮುಖ ಸಮಸ್ಯೆ ಎಂದರೆ, ಒಳಚರಂಡಿ ಗುಂಡಿ ಆಳದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ನಲ್ಲಿ ಸಂಪರ್ಕ ಮಾಡಲಾಗಿದೆ. ‌ಅದರೊಳಗಿಂದಲೇ ಕುಡಿಯುವ ನೀರನ್ನ ತೆಗೆದುಕೊಂಡು ಹೋಗಬೇಕು. ನೀರು ತುಂಬುವ ಸಂದರ್ಭದಲ್ಲಿ ಕ್ರಿಮಿಕೀಟಗಳು ಕೂಡ ಕೊಡದಲ್ಲಿ ಸೇರುತ್ತಿವೆ. ಆದರೂ ಕುಡಿಯುವ ನೀರು ತುಂಬಿಸಿಕೊಳ್ಳುವುದು ಇಲ್ಲಿಯ ಜನರಿಗೆ ಅನಿವಾರ್ಯ ಅಂತಾರೆ.


  ರಾಷ್ಟ್ರೀಯ ರೈತ ಮುಖಂಡ ರಾಕೇಶ್ ಟಿಕಾಯಿತ್ ವಿರುದ್ಧ ಹಾವೇರಿಯಲ್ಲಿ FIR ದಾಖಲು: ಯಾಕೆ ಗೊತ್ತಾ ?


  ಇನ್ನು ಜಲ ಶುದ್ಧೀಕರಣ ಘಟಕವಿದ್ದರೂ ಪ್ರಯೋಜನವಿಲ್ಲ, ಶಂಕರಬಂಡೆ ಗ್ರಾಮದಲ್ಲಿ ಎರಡು ಶುದ್ಧೀಕರಣ ಘಟಕಗಳಿದ್ದರೂ ಕೂಡ ಯಾವುದೇ ಪ್ರಯೋಜನವಿಲ್ಲ. ಒಂದು ಘಟಕ ದುರಸ್ತಿಯಲ್ಲಿದ್ದು, ಇನ್ನೊಂದು ಘಟಕ ಆಗೊಮ್ಮೆ-ಈಗೊಮ್ಮೆ ಕಾರ್ಯ ನಿರ್ವಹಿಸುತ್ತದೆಯಷ್ಟೆ. ಹೀಗಾಗಿ, ಮೇಲ್ಭಾಗದ ಜನರಿಗೆ ಮಾತ್ರ ಈ ಶುದ್ಧ ಕುಡಿಯುವ ನೀರಿನ ಘಟಕ ಸೀಮಿತವಾಗಿದೆ.


  ಇನ್ನು  ಗಡಿಭಾಗದಿಂದ ಶುದ್ಧೀಕರಿಸಿದ ನೀರು ಪೂರೈಕೆಯಾಗುತ್ತಿದ್ದು  ನೆರೆಯ ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡುರುವ ನಾನಾ ಗ್ರಾಮಗಳಿಂದ ಖಾಸಗಿ ಶುದ್ಧೀಕರಿಸಿದ ಘಟಕಗಳಿಂದ ತಂದು ಇಲ್ಲಿ ಮಾರಾಟ ಮಾಡಲಾಗುತ್ತದೆ. ಒಂದು ಕೊಡಕ್ಕೆ ಐದು, ಹತ್ತು ರೂ.ನಂತೆ ನೀರನ್ನ ಮಾರಲಾಗುತ್ತದೆ. ಅನಿವಾರ್ಯವಾಗಿ ಶುದ್ಧೀಕರಿಸಿದ ನೀರನ್ನು‌ ಶಂಕರಬಂಡೆ  ನಿವಾಸಿಗಳು ಖರೀದಿಸುತ್ತಾರೆ.


  ಇಷ್ಟೆಲ್ಲಾ ನಡೆದರೂ ಕೂಡ ಜಿಲ್ಲಾ ಪಂಚಾಯಿತಿ ಮಾತ್ರ ತನಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ನಡೆದುಕೊಳ್ಳುತ್ತಿದೆ. ಪ್ರತಿ ಬೇಸಿಗೆ ಬಂದಾಗಲೂ ನಮಗೆ ಕ್ರಿಮಿ, ಕೀಟಗಳ ಮಿಶ್ರಿತ ನೀರು ಆರು ದಿನಕ್ಕೊಮ್ಮೆ ಪೂರೈಕೆಯಾಗುತ್ತದೆ. ಹಾಗಾಗಿ ಶುದ್ಧೀಕರಿಸಿದ ನೀರನ್ನ ಖರೀದಿಸುವುದು ಅನಿವಾರ್ಯ ಎನ್ನುತ್ತಾರೆ ಗ್ರಾಮಸ್ಥರು.


  ಒಟ್ಟಾರೆ ಯಾಗಿ ಭೂಮಿ ಮೇಲೆ ಇರುವ ಪ್ರತಿ ಜೀವಿಗೂ ಜೀವ ಜಲ ಅತೀ ಮುಖ್ಯ, ಅದನ್ನೆ ಇಲ್ಲಿಯ ಅಧಿಕಾರಿಗಳು ಜನಪ್ರತಿನಿಧಿಗಳು ದೊರಕಿಸುವಲ್ಲಿ ವಿಫಲವಾಗಿದ್ದಾರೆ, ಎಂದರೆ ವಿಪರ್ಯಾಸವೇ ಸರಿ. ಇನ್ನಾದರೂ ಇಲ್ಲಿರುವ ಸಮಸ್ಯೆ ಆಲಿಸಿ ಸೂಕ್ತ ಪರಿಹಾರ ದೊರಕಿಸುವಂತಾಗಲಿ ಎಂಬುವುದೆ ನಮ್ಮ ಆಶಯ..


  (ವರದಿ: ವಿನಾಯಕ ಬಡಿಗೇರ)

  Published by:Latha CG
  First published: