• Home
  • »
  • News
  • »
  • state
  • »
  • Drinking Water Problem: ಕುಡಿಯಲು ನೀರು ಸಿಗದೆ ನರಕಯಾತನೆ, ಪ್ರಾಣ ಲೆಕ್ಕಿಸದೆ ಬಾವಿಗಿಳಿದು ನೀರು ತರೋ ಇವರ ಪಾಡು ಕೇಳೋರಿಲ್ಲ

Drinking Water Problem: ಕುಡಿಯಲು ನೀರು ಸಿಗದೆ ನರಕಯಾತನೆ, ಪ್ರಾಣ ಲೆಕ್ಕಿಸದೆ ಬಾವಿಗಿಳಿದು ನೀರು ತರೋ ಇವರ ಪಾಡು ಕೇಳೋರಿಲ್ಲ

ನೀರಿಗಾಗಿ ಪರದಾಟ

ನೀರಿಗಾಗಿ ಪರದಾಟ

ಕಳೆದ 25 ವರ್ಷದಿಂದ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಸರಕಾರ ತಾತ್ಕಾಲಿಕ ಪರಿಹಾರಕ್ಕಾಗಿ ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರ ಜಮೀನಿನ ತೆರೆದ ಬಾವಿಯಿಂದ ನೀರು ಪೂರೈಕೆ ಮಾಡುವ ಕೆಲಸ ಮಾಡಿದೆ.

  • Share this:

ಯಾದಗಿರಿ (ಜು.01) : ಪಂಚಾಯತ ಹಾಗೂ ನಗರಸಭೆ ಅಧಿಕಾರಿಗಳ ನಿಷ್ಕಾಳಜಿಗೆ ಜನತಾ ಕಾಲೋನಿ (Janata Colony) ನಿವಾಸಿಗಳು ನರಕಯಾತನೆ ಅನುಭವಿಸುವಂತಾಗಿದೆ. ಯಾದಗಿರಿ (Yadagiri) ಜಿಲ್ಲೆಯ ಸುರಪುರ ತಾಲೂಕಿನ ಶಹಾಪುರ ವಿಧಾನಸಭೆ ಕ್ಷೇತ್ರದ (Assembly Constituency) ಯಕ್ತಾಪುರ ಗ್ರಾಮ ಪಂಚಾಯತ್​ ವ್ಯಾಪ್ತಿಯ ಬಿ.ತಳ್ಳಳಿ ಗ್ರಾಮದ ಜನತಾ ಕಾಲೋನಿ ನಿವಾಸಿಗಳು ಮಳೆಗಾಲದಲ್ಲಿಯೂ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ. ಜನತಾ ಕಾಲೋನಿಯ ಜನರ ಗೋಳು ಯಾರು ಕೇಳದಂತಾಗಿದೆ. ಜನತಾ ಕಾಲೋನಿಯಲ್ಲಿ ಅಂದಾಜು 300 ಜನರು ವಾಸವಾಗಿದ್ದು ಅಗತ್ಯ ಸೌಲಭ್ಯದಿಂದ (Facility) ವಂಚಿತರಾಗಿದ್ದಾರೆ.


25 ವರ್ಷದಿಂದ ಕುಡಿಯುವ ನೀರಿಗಾಗಿ ಪರದಾಟ


ಕಳೆದ 25 ವರ್ಷದಿಂದ ಜನರು ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ. ಸರಕಾರ ತಾತ್ಕಾಲಿಕ ಪರಿಹಾರಕ್ಕಾಗಿ ಗ್ರಾಮದ ಖಾಸಗಿ ವ್ಯಕ್ತಿಯೊಬ್ಬರ ಜಮೀನಿನ ತೆರೆದ ಬಾವಿಯಿಂದ ನೀರು ಪೂರೈಕೆ ಮಾಡುವ ಕೆಲಸ ಮಾಡಿದೆ. ಆದರೆ, ನೀರು ಪೂರೈಕೆ ಮಾಡುವ ಪೈಪ್ ಹಾಳಾಗಿದ್ದು, ಅದೇ ರೀತಿ ಜಿಲ್ಲಾಡಳಿತ ನೀರು ಪೂರೈಕೆ ಮಾಡಿದ ಖಾಸಗಿ ವ್ಯಕ್ತಿಗೆ ಕಳೆದ ಒಂದು ತಿಂಗಳ ಬಾಡಿಗೆ ಹಣ ನೀಡಿಲ್ಲ.


ಹಣವಿಲ್ಲದೇ ಪೈಪ್ ದುರಸ್ತಿ ಕಾರ್ಯ ಮಾಡಿಲ್ಲ


ಕಾರಣ ನೀರು ಖಾಸಗಿಯು ಕೈಯಲ್ಲಿ ಹಣವಿಲ್ಲದೇ ಪೈಪ್ ದುರಸ್ತಿ ಕಾರ್ಯ ಮಾಡಿಲ್ಲ. ಪರಿಣಾಮ ಕಳೆದ ನಾಲ್ಕು ದಿನಗಳಿಂದ ಜನರು ಕುಡಿಯುವ ನೀರಿಗಾಗಿ ಜನತಾ ಕಾಲೋನಿಯಿಂದ 2 ಕಿ.ಮಿ ದೂರ ತಲೆ ಮೇಲೆ ಮಹಿಳೆಯರು ನೀರಿನ ಕೊಡ ಹೊತ್ತುಕೊಂಡು ನೀರು ತೆಗೆದುಕೊಂಡು ಬರುವುದು ಅನಿವಾರ್ಯವಾಗಿದೆ.


ಇದನ್ನೂ ಓದಿ: Chamundeshwari: ಆಷಾಢದಲ್ಲಿ ಚಾಮುಂಡೇಶ್ವರಿಗೆ ನಿಂಬೆಹಣ್ಣಿನ ದೀಪ ಹಚ್ಚೋದ್ಯಾಕೆ? ಏನಿದರ ವಿಶೇಷತೆ?


ಅಪಾಯದ ನಡುವೆ ಮಹಿಳೆಯರು ಬಾವಿಯೊಳಗಿಳಿದು ನೀರು ತೆಗೆದುಕೊಂಡು ಬರುತ್ತಾರೆ. ಈ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ.
ಚುನಾವಣೆ ಬಂದಾಗ ನೆನಪಾಗುತ್ತಾರೆ!


ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ


ಜನಪ್ರತಿನಿಧಿಗಳು ಚುನಾವಣೆಯ ಬಂದಾಗ ನೀರು ಕೊಡುತ್ತೇವೆ , ಮನೆ ಕೊಡುತ್ತೆವೆ ವಿವಿಧ ಸೌಲಭ್ಯ ನೀಡುತ್ತೆವೆಂದು ಬಣ್ಣದ ಮಾತು ಹೇಳಿ ಮತ ಪಡೆದು ಗೆದ್ದ ನಂತರ ಈ ಬಡ ಜನರ ಗೋಳು ಯಾರು ಕೇಳಲು ಬರುವದಿಲ್ಲವೆಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಸರಕಾರ ಅನೇಕ ನೀರಾವರಿ ಯೋಜನೆ ಜಾರಿಗೆ ತಂದಿದೆ‌.ಕೇಂದ್ರ ಸರಕಾರ ಜಲ ಜೀವನ್  ಮಿಷನ್ ಯೋಜನೆ ಜಾರಿಗೆ ತಂದಿದೆ.ಆದರೆ, ನೀರು ಪೂರೈಕೆ ಯೋಜನೆ ಈ  ಜನರಿಗೆ ಮುಟ್ಟಿಲ್ಲ‌.


ನೀರು ಪೂರೈಕೆ ಮಾಡಲು ಕ್ರಮ


ಈ ಬಗ್ಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಅವರು ಮಾತನಾಡಿ, ಈ ಬಗ್ಗೆ ತಹಶಿಲ್ದಾರ್​ ಅವರಿಗೆ ಖುದ್ದು ಭೇಟಿ ನೀಡಿ ನೀರು ಪೂರೈಕೆ ಮಾಡಲು ಕ್ರಮವಹಿಸಲು ಸೂಚಿಸಲಾಗಿದೆ. ‌ಜನರಿಗೆ ಯಾವುದೇ ತೊಂದರೆಯಾಗದಂತೆ ನೀರು ಪೂರೈಕೆ ಮಾಡಲಾಗುತ್ತದೆ.


ಇದನ್ನೂ ಓದಿ:  Karwar: ಮತ್ತೆ ಕಾರವಾರದಲ್ಲಿ ಕೊಂಕಣಿ, ಕನ್ನಡ ಭಾಷಾ ವಿವಾದ; ನಗರಸಭೆಯಲ್ಲಿ ಮಾತಿನ‌ ಚಕಮಕಿ


ಶಾಶ್ವತ ಸಮಸ್ಯೆಗೆ ಮುಕ್ತಿ ಕಲ್ಪಿಸಬೇಕೆಂದು ಒತ್ತಾಯ


ಶಾಶ್ವತ ಸಮಸ್ಯೆಗೆ ಮುಕ್ತಿ ಕಲ್ಪಿಸಿ ಸರಕಾರ ನೀರು ಪೂರೈಕೆ ಮಾಡಲು ಕೋಟ್ಯಂತರ ರೂಪಾಯಿ ಅನುದಾನ ಖರ್ಚು ಮಾಡುತ್ತದೆ. ಆದರೆ, ಜನತಾ ಕಾಲೋನಿಯ ಜನರು ಶಾಶ್ವತ ಸಮಸ್ಯೆಗೆ ಮುಕ್ತಿ ಕಲ್ಪಿಸಬೇಕೆಂದು ಒತ್ತಾಯ ಮಾಡಿದರು ಜನರ ಸಮಸ್ಯೆ ನಿಗಿಸಿಲ್ಲ. ಸರಕಾರ ತಾತ್ಕಾಲಿಕ ಪರಿಹಾರ ಕಲ್ಪಿಸದೇ  ನೀರಾವರಿ ಯೋಜನೆ ಜಾರಿಗೆ ತಂದು ಶಾಶ್ವತ ನೀರಿನ ಸಮಸ್ಯೆಗೆ ಮುಕ್ತಿ ಕಲ್ಪಿಸಬೇಕಾಗಿದೆ. ಜನರ ಗೋಳು ಕೇಳದ ಸರ್ಕಾರಕ್ಕೆ ಮಹಿಳೆಯರು ಹಿಡಿಶಾಪ ಹಾಕಿದ್ದಾರೆ.

Published by:Pavana HS
First published: