DRDO: ಚಿತ್ರದುರ್ಗದಲ್ಲಿ ಮಾನವರಹಿತ ಯುದ್ಧವಿಮಾನದ ಹಾರಾಟ ಯಶಸ್ವಿ

ಬೆಂಗಳೂರಿನಲ್ಲಿರುವ ಡಿಆರ್ಡಿಒ ಅಂಗಸಂಸ್ಥೆಯಾದ ವೈಮಾನಿಕ ಅಭಿವೃದ್ಧಿ ಸಂಸ್ಥೆ (ಎಡಿಇ) ಈ ಯುದ್ಧವಿಮಾನವನ್ನು ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ. ವೈಮಾನಿಕ ವಾಹನವನ್ನು ನಿಯಂತ್ರಿಸುವ ಏವಿಯಾನಿಕ್ಸ್ ವ್ಯವಸ್ಥೆಯನ್ನು ದೇಶೀಯವಾಗಿಯೇ ಸಿದ್ಧಪಡಿಸಲಾಗಿದೆ. ಡಿಆರ್ಡಿಒದ ಈ ಸಾಧನೆಗೆರಕ್ಷಣಾ ಸಚಿವ ರಾಜನಾಥ ಸಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಾನವರಹಿತ ಯುದ್ಧವಿಮಾನದ ಪರೀಕ್ಷಾರ್ಥ ಹಾರಾಟ

ಮಾನವರಹಿತ ಯುದ್ಧವಿಮಾನದ ಪರೀಕ್ಷಾರ್ಥ ಹಾರಾಟ

  • Share this:
ಚಿತ್ರದುರ್ಗ (ಜು.2): ರಕ್ಷಣಾ ವಿಭಾಗದಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಚಿತ್ರದುರ್ಗದ ಎಟಿಆರ್ (Aeronautical Test Range) ನಿಂದ ಮೊದಲ ಚಾಲಕ ರಹಿತ ವಿಮಾನದ (Unmanned Aerial Vehicles) ಯಶಸ್ವಿ ಹಾರಾಟ ನಡೆಸಿದೆ. ಮೊದಲ ಮಾನವರಹಿತ ಯುದ್ಧವಿಮಾನದ ಪರೀಕ್ಷಾರ್ಥ ಹಾರಾಟ ಚಳ್ಳಕೆರೆ (Challakere) ತಾಲ್ಲೂಕಿನ ರಕ್ಷಣಾ ಸಂಶೋಧನ ಮತ್ತು ಅಭಿವೃದ್ಧಿ ಸಂಸ್ಥೆಯ ವಿಮಾನ ಪರೀಕ್ಷಾ ನೆಲೆಯಲ್ಲಿ (ಎಟಿಆರ್‌) ಶುಕ್ರವಾರ ಯಶಸ್ವಿಯಾಗಿ ನಡೆಯಿತು. ಇಲ್ಲಿ ನಡೆದ ಪರೀಕ್ಷಾರ್ಥ ಹಾರಾಟದಲ್ಲಿ, ಆಗಸಕ್ಕೆ ಹಾರಿದ ಯುದ್ಧವಿಮಾನವು ಅಷ್ಟೇ ನಿಖರವಾಗಿ ಕೆಳಗೆ ಇಳಿದು ಭರವಸೆ ಮೂಡಿಸಿತು. ರಕ್ಷಣಾ ತಂತ್ರಜ್ಞಾನದಲ್ಲಿ (Defense Technology) ಸ್ವಾವಲಂಬನೆ ಸಾಧಿಸುತ್ತಿರುವ ಭಾರತ, ಮಾನವರಹಿತ ವಿಮಾನಗಳ ಅಭಿವೃದ್ಧಿಯಂತಹ ಕ್ಲಿಷ್ಟಕರ ತಂತ್ರಜ್ಞಾನದಲ್ಲಿಯೂ ಮೈಲಿಗಲ್ಲು ಸಾಧಿಸಿದಂತಾಯಿತು.

ಮಾನವರಹಿತ ಯುದ್ಧವಿಮಾನದ ಹಾರಾಟ ಯಶಸ್ವಿ

ಜುಲೈ 1 ಶುಕ್ರವಾರದಂದು ಅಟಾನಮಸ್ ಫ್ಲೈಯಿಂಗ್ ವಿಂಗ್‌ನ ಮೊದಲ ಹಾರಾಟವನ್ನು ನಡೆಸಲಾಗಿದ್ದು, ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್‌ನಿಂದ ಯಶಸ್ವಿಯಾಗಿ ಚಾಲಕ ರಹಿತ ವಿಮಾನವನ್ನು ಹಾರಾಟ ನಡೆಸಲಾಗಿದೆ. ಈ ಚಾಲಕ ರಹಿತ ವಿಮಾನವು ಸಂಪೂರ್ಣ ಸ್ವಾಯತ್ತ ಮೋಡ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ವಿಮಾನವು ಟೇಕ್-ಆಫ್, ವೇ ಪಾಯಿಂಟ್, ನ್ಯಾವಿಗೇಷನ್ ಮತ್ತು ಟಚ್‌ಡೌನ್ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಪರಿಪೂರ್ಣ ಹಾರಾಟವನ್ನು ಯಶಸ್ವಿಯಾಗಿದೆ ಪ್ರದರ್ಶಿಸಿದೆ ಎಂದು DRDO ಹೇಳಿದೆ.



ಈ ವಿಮಾನವು ಸ್ವಾವಲಂಬನೆಯ ಕಡೆಗೆ ತಂತ್ರಜ್ಞಾನಗಳನ್ನು ಸಾಬೀತುಪಡಿಸುವ ವಿಷಯದಲ್ಲಿ ಪ್ರಮುಖ ಮೈಲಿಗಲ್ಲಾಗಿದ್ದು, ಭವಿಷ್ಯದ ಮಾನವರಹಿತ ವಿಮಾನಗಳ ಅಭಿವೃದ್ಧಿಗೆ ನಿರ್ಣಾಯಕ ತಂತ್ರಜ್ಞಾನಗಳನ್ನು ಸಾಬೀತುಪಡಿಸುವ ವಿಷಯದಲ್ಲಿ ಈ ಹಾರಾಟವು ಪ್ರಮುಖ ಮೈಲಿಗಲ್ಲಾಗಿದ್ದು, ಅಂತಹ ಕಾರ್ಯತಂತ್ರದ ರಕ್ಷಣಾ ತಂತ್ರಜ್ಞಾನಗಳಲ್ಲಿ ಸ್ವಾವಲಂಬನೆಯತ್ತ ಮಹತ್ವದ ಹೆಜ್ಜೆಯಾಗಿದೆ. ನಿರ್ಣಾಯಕ ಕಾರ್ಯತಂತ್ರದ ರಕ್ಷಣಾ ತಂತ್ರಜ್ಞಾನದಲ್ಲಿ ಮಾನವರಹಿತ ವೈಮಾನಿಕ ವಾಹನವನ್ನು (UAV) ವಿನ್ಯಾಸಗೊಳಿಸಲಾಗಿದೆ ಎಂದು ಡಿಆರ್ ಡಿಒ ಹೇಳಿದೆ.

ಇದನ್ನೂ ಓದಿ: ಕೋವಿಡ್​ ರೋಗಿಗಳಿಗೆ 2-ಡಿಜಿ ಔಷಧಿ ಬಳಕೆಯ ನಿರ್ದೇಶನಗಳನ್ನು ನೀಡಿದ ಡಿಆರ್​ಡಿಒ: ಇದನ್ನು ಬಳಸುವುದು ಹೇಗೆ? ಯಾವಾಗ?

ಇದು ಸಣ್ಣ ಟರ್ಬೋಫ್ಯಾನ್ ಎಂಜಿನ್‌ನಿಂದ ಚಾಲಿತ ವಿಮಾನವಾಗಿದ್ದು, ಈ ವಿಮಾನಕ್ಕೆ ಬಳಸಲಾದ ಏರ್‌ಫ್ರೇಮ್, ಅಂಡರ್‌ಕ್ಯಾರೇಜ್ ಮತ್ತು ಸಂಪೂರ್ಣ ಹಾರಾಟದ ನಿಯಂತ್ರಣ ಮತ್ತು ಏವಿಯಾನಿಕ್ಸ್ ವ್ಯವಸ್ಥೆಗಳನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಈ ವಿಮಾನವನ್ನು ಡಿಒರ್ ಡಿಒದ ಬೆಂಗಳೂರಿನ ಏರೋನಾಟಿಕಲ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ಎಡಿಇ) ಅಭಿವೃದ್ಧಿಪಡಿಸಿದ್ದು, ಬೆಂಗಳೂರು ಡಿಆರ್‌ಡಿಒದ ಪ್ರಮುಖ ಸಂಶೋಧನಾ ಪ್ರಯೋಗಾಲಯ ಕೂಡ ಆಗಿದೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್​ ಅವರಿಂದ ಅಭಿನಂದನೆ

ಡಿಆರ್ ಡಿಒ ಕಾರ್ಯವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಭಿನಂದಿಸಿದ್ದು, ಇದು ಸ್ವಾಯತ್ತ ವಿಮಾನದ ಕಡೆಗೆ ಪ್ರಮುಖ ಸಾಧನೆ ಮತ್ತು ದಾರಿಯನ್ನು ಸುಗಮಗೊಳಿಸುತ್ತದೆ. ನಿರ್ಣಾಯಕ ಸೇನಾ ವ್ಯವಸ್ಥೆಗಳ ವಿಷಯದಲ್ಲಿ 'ಆತ್ಮನಿರ್ಭರ್ ಭಾರತ'"ದ ಯಶಸ್ವಿ ಮೊದಲ ಹಾರಾಟಕ್ಕಾಗಿ ಡಿಆರ್ ಜಿಒಗೆ ಅಭಿನಂದನೆಗಳು ಎಂದು ಟ್ವೀಟ್ ಮಾಡಿದ್ದಾರೆ.

ಅಲ್ಲದೆ ಚಿತ್ರದುರ್ಗ ATR ನಿಂದ ಸ್ವಾಯತ್ತ ಫ್ಲೈಯಿಂಗ್ ವಿಂಗ್ ಟೆಕ್ನಾಲಜಿ ಡೆಮಾನ್ಸ್ಟ್ರೇಟರ್ ಯಶಸ್ವಿ ಹಾರಾಟವು ಸ್ವಾಯತ್ತ ವಿಮಾನಗಳ ಕಡೆಗೆ ಒಂದು ಪ್ರಮುಖ ಸಾಧನೆಯಾಗಿದೆ. ನಿರ್ಣಾಯಕ ಮಿಲಿಟರಿಯ ವಿಷಯದಲ್ಲಿ ಆತ್ಮನಿರ್ಭರ ಭಾರತಕ್ಕೆ ದಾರಿ ವ್ಯವಸ್ಥೆಯಾಗಿದೆ" ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: Agni-5 Missile: ಭಾರತದ ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿ: 5,000 ಕಿ.ಮೀ ಗುರಿ ಭೇದಿಸುವ ಡೆಡ್ಲಿ ಮಿಸೈಲ್​!

ಡಿಆರ್‌ಡಿಒ ಕಾರ್ಯದರ್ಶಿ, ರಕ್ಷಣಾ ಇಲಾಖೆ ಆರ್ & ಡಿ ಮತ್ತು ಅಧ್ಯಕ್ಷ ಡಾ ಜಿ ಸತೀಶ್ ರೆಡ್ಡಿ ವಿನ್ಯಾಸಕ್ಕೆ ಸಂಬಂಧಿಸಿದ ವ್ಯವಸ್ಥೆಯ ಅಭಿವೃದ್ಧಿ ಮತ್ತು ಪರೀಕ್ಷೆ ತಂಡಗಳ ಪ್ರಯತ್ನವನ್ನು ಶ್ಲಾಘಿಸಿದರು.
Published by:Pavana HS
First published: