ಉತ್ತರ ಕರ್ನಾಟಕದ ಜೀವನಾಡಿ ಮಲಪ್ರಭೆಗೆ ಸೇರುತ್ತಿದೆ ಚರಂಡಿ ನೀರು...!

ಇನ್ನೂ ಕಳಸಾ, ಬಂಡೂರಿ ನಾಲಾ ನೀರು ಮಲಪ್ರಭೆಗೆ ಸೇರಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಆದರೇ ಗೋವಾ ಒಂದಲ್ಲ ಒಂದು ಕ್ಯಾತೆಯನ್ನು ತೆಗೆಯುತ್ತಿದೆ.

ಮಲಪ್ರಭೆ

ಮಲಪ್ರಭೆ

  • Share this:
ಬೆಳಗಾವಿ(ಮಾ.01): ಉತ್ತರ ಕರ್ನಾಟಕದ ಜೀವನಾಡಿ ಮಲಪ್ರಭಾ ನದಿ. ಮಲಪ್ರಭಾ ನದಿಗೆ ಕಳಸಾ, ಬಂಡೂರಿ ನೀರು ಸೇರಬೇಕು ಎನ್ನುವುದು ಉತ್ತರ ಕರ್ನಾಟಕದ ಜನರ ಬಹುದಿನಗಳ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ನಿರಂತರ ಹೋರಾಟ, ಕಾನೂನು ಸಂಘರ್ಷ ನಡೆಯುತ್ತಿದೆ. ಆದರೇ ಈ ನಡುವೆ ಮಲಪ್ರಭಾ ನದಿ ಉಗಮ ಸ್ಥಾನ ಖಾನಾಪುರದಲ್ಲಿ ನೀರು ಕಲುಷಿತಗೊಳ್ಳುತ್ತಿದೆ. ಇದನ್ನು ನೋಡಿಯು ಸ್ಥಳೀಯ ಅಧಿಕಾರಿಗಳು ಮೌನ ವಹಿಸಿರೋದು ಯಾಕೆ ಎಂಬ ಪ್ರಶ್ನೆ ಉದ್ಭವಿಸಿದೆ.

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಮಲಪ್ರಭಾ ನದಿ ಉಗಮ ಆಗುತ್ತದೆ. ಅಲ್ಲಿಂದ ಖಾನಾಪುರ, ಬೈಲಹೊಂಗಲದಿಂದ ಮುಂದೆ ಸವದತ್ತಿ ಬಳಿಯ ನವೀಲು ತೀರ್ಥ ಜಲಾಶಯಕ್ಕೆ ನೀರು ಸೇರುತ್ತದೆ. ಅಲ್ಲಿಂದ ಹುಬ್ಬಳ್ಳಿ, ಧಾರವಾಡ, ಗದಗ, ಬದಾಯಿ ಸೇರಿ 4 ಜಿಲ್ಲೆ 14 ತಾಲೂಕಿಗೆ ಇಲ್ಲಿಂದ ನೀರು ಪೂರೈಕೆಯಾಗುತ್ತದೆ. ಇಂತಹ ಜೀವ ಜಲವೇ ಇದೀಗ ಕಲುಷಿತಗೊಳ್ಳುತ್ತಿದೆ. ಪ್ರಮುಖವಾಗಿ ಖಾನಾಪುರದಲ್ಲಿ ಚರಂಡಿ ನೀರು ಮಲಪ್ರಭೆಗೆ ಸೇರುತ್ತಿದೆ.

ಮ್ಯಾಟ್ರಿಮೋನಿ ವಂಚನೆ: ಚಿನ್ನ ಕೊಡಿಸುವ ಆಸೆ ತೋರಿಸಿ ಲಕ್ಷಗಟ್ಟಲೇ ಹಣ ನುಂಗಿದ ಭೂಪ...!

ಖಾನಾಪುರ ಪಟ್ಟಣದ ಎಲ್ಲಾ ಚರಂಡಿ ನೀರು, ತ್ಯಾಜ್ಯ ಮಿಶ್ರಿತ ನೀರು ನದಿಯನ್ನು ಸೇರುತ್ತಿದೆ. ಇದರಿಂದ ನದಿಯಲ್ಲಿ ದುರ್ವಾಸಹೆ ಬರುತ್ತದೆ. ಈ ನೀರು ಮುಂದೆ ಅನೇಕ ನಗರ, ಗ್ರಾಮಗಳ ಜನ ಕುಡಿಯುವ ಉಪಯೋಗ ಮಾಡುತ್ತಾರೆ. ಖಾನಾಪುರದಲ್ಲಿ ಚರಂಡಿ ನೀರು ನೇರವಾಗಿ ನದಿಗೆ ಬಿಡಲಾಗುತ್ತಿದೆ. ಈ ಬಗ್ಗೆ ಯಾವುದೇ ಶುದ್ಧಿಕರಣ ಘಟಕ ಇಲ್ಲ. ಅನೇಕ ವರ್ಷಗಳಿಂದ ಇದೇ ರೀತಿಯಲ್ಲಿ ನಡೆದುಕೊಂಡು ಬಂದಿದ್ದು, ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಮೌನ ವಹಿಸಿದ್ದಾರೆ.

ಮಲಪ್ರಭ ನೀರಿಗಾಗಿ ಕರ್ನಾಟಕ, ಗೋವಾ ನಡುವೆ ಅನೇಕ ವರ್ಷಗಳಿಂದ ಕಾನೂನು ಸಂಘರ್ಷ ಏರ್ಪಟಿದೆ. ರಾಜ್ಯಕ್ಕೆ 13 ಟಿಎಂಸಿ ನೀರು ನ್ಯಾಯಾಧೀಕರಣದ ತೀರ್ಪಿನಲ್ಲಿ ಸಿಕ್ಕಿದ್ದು, ಇದೀಗ ನೀರು ಬಳಕೆಗೆ ಸಹ ಗೋವಾ ಕ್ಯಾತೆ ತೆಗೆಯುತ್ತಿದೆ. ಇನ್ನೂ ಕಳಸಾ, ಬಂಡೂರಿ ನಾಲಾ ನೀರು ಮಲಪ್ರಭೆಗೆ ಸೇರಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ. ಆದರೇ ಗೋವಾ ಒಂದಲ್ಲ ಒಂದು ಕ್ಯಾತೆಯನ್ನು ತೆಗೆಯುತ್ತಿದೆ.

ಕಳಸಾ, ಬಂಡೂರಿ ನಾಲಾ ನೀರು ಮಲಪ್ರಭೆಗೆ ಸೇರಲೇ ಬೇಕು ಎನ್ನುವುದು ಬಹುದಿನಗಳ ಬೇಡಿಕೆಯಾಗಿದೆ. ಈ ಯೋಜನೆ ಅನುಷ್ಠಾನಗೊಂಡರೇ ಅನೇಕ ನಗರ, ಗ್ರಾಮಗಳಿಗೆ ಕುಡಿಯುವ ನೀರು ಸಿಗಲಿದೆ. ಕುಡಿಯುವ ನೀರಿನ ಯೋಜನೆಗೆ ಸಹ ಗೋವಾ ಕ್ಯಾತೆ ತೆಗೆಯುತ್ತಿದೆ. ನೂರಾರು ಟಿಎಂಸಿ ನೀರು ಸಮುದ್ರ ಸೇರಿ ವ್ಯರ್ಥವಾಗೋ ಬದಲು ಕುಡಿಯುವ ಉಪಯೋಗ ಆಗುತ್ತದೆ ಅಂದ್ರ ಗೋವಾ ಕೇಳುತ್ತಿಲ್ಲ. ಈ ನಡುವೆ ಮಲಪ್ರಭಾ ನದಿಯಲ್ಲಿ ಕುಲುಷಿತ ನೀರು ಸೇರ್ಪಡೆಯಿಂದ ನದಿಯಲ್ಲಿ ಹೂಳು ಹೆಚ್ಚಾಗುವ ಆತಂಕ ಇದೀಗ ಎದುರಾಗಿದೆ. ಜಲಸಂಪನ್ಮೂಲ ಸಚಿವರು ಇದೇ ಜಿಲ್ಲೆಯವರಾಗಿದ್ದು, ಈ ಬಗ್ಗೆ ಗಮನ ಹರಿಸುವ ಅಗತ್ಯ ಇದೆ.
Published by:Latha CG
First published: